ಪ್ರವೀಣ್ ಅಗಲಿಕೆ ಬಳಿಕ ಆಹಾರ ತ್ಯಜಿಸಿದ್ಗ ಮುದ್ದು ನಾಯಿಮರಿ ಜಾನಿ ಸಾವು

0
132

ಒಡೆಯ ಪ್ರವೀಣ್ ನೆಟ್ಟಾರು ಅಗಲಿಕೆ ಬಳಿಕ ನಾಯಿ ಜಾನಿ ಆಹಾರ (Food) ತ್ಯಜಿಸಿತ್ತು. ಹೀಗಾಗಿ ಜಾನಿ ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ದುಷ್ಕರ್ಮಿಗಳಿಂದ ಹತ್ಯೆಗೆ ಒಳಗಾದ ಹಿಂದೂ ನಾಯಕ ಪ್ರವೀಣ್ ನೆಟ್ಟಾರು (Praveen Nettaru Murder Case) ಅವರು ಪ್ರೀತಿಯಿಂದ ಸಾಕಿದ್ದ ಮುದ್ದು ನಾಯಿಮರಿ (Dog Died) ಸಾವನ್ನಪ್ಪಿದೆ. ಒಡೆಯ ಪ್ರವೀಣ್ ನೆಟ್ಟಾರು ಅಗಲಿಕೆ ಬಳಿಕ ನಾಯಿ ಜಾನಿ ಆಹಾರ (Food) ತ್ಯಜಿಸಿತ್ತು. ಹೀಗಾಗಿ ಜಾನಿ ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಂಗಳವಾರ ಪ್ರವೀಣ್ ಕೊಲೆಗೆ ಸಂಬಂಧಿಸಿದಂತೆ ಇಬ್ಬರನ್ನು (Two Accused Arrest) ಬಂಧಿಸಲಾಗಿತ್ತು. ಇದುವರೆಗೂ ಏಳು ಜನರನ್ನು ಬಂಧಿಸಲಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ NIAಗೆ ನೀಡಿದೆ. ಪ್ರವೀಣ್ ನೆಟ್ಟಾರ್ ಅವರು ಸುಳ್ಯ ತಾಲೂಕಿನ ಬೆಳ್ಳಾರೆ (Bellare, Sulya) ಎಂಬಲ್ಲಿ ಸ್ವತಂ ಕೋಳಿ ಮಾಂಸದ ಅಂಗಡಿ ನಡೆಸುತ್ತಿದ್ದರು. ಜೀವನೋಪಾಯಕ್ಕಾಗಿ ಅಂಗಡಿ ನಡೆಸುತ್ತಿದ್ದು, ಅಲ್ಲೇ ನಿಷ್ಠೆಯಿಂದ ಕೆಲಸ ಮಾಡಿ, ಜೀವನ ಕಟ್ಟಿಕೊಂಡಿದ್ದರು. ಮೂರು ವರ್ಷದ ಹಿಂದಷ್ಟೇ ಪ್ರವೀಣ್ ವಿವಾಹವಾಗಿತ್ತು.


ಅಂಗಡಿಯಿಂದ ತೆರಳುತ್ತಿದ್ದಾಗ ಮಾರಕಾಸ್ತ್ರಗಳಿಂದ ದಾಳಿ


ಕೊಲೆ ನಡೆದ ದಿನ ಎಂದಿನಂತೆ ಪ್ರವೀಣ್ ತಮ್ಮ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ 7ರಿಂದ 7.30ರ ಸುಮಾರಿಗೆ ತಮ್ಮ ದೈನಂದಿನ ಕೆಲಸ ಮುಗಿಸಿ, ಮನೆಗೆ ಹೋಗಬೇಕು ಅಂತ ಅಂಗಡಿ ಬಾಗಿಲು ಹಾಕುತ್ತಿದ್ದರು. ಬಳಿಕ ತಮ್ಮ ಮನೆಗೆ ತೆರಳಲು ಸ್ಕೂಟರ್ ಮೇಲೆ ಕುಳಿತಿದ್ದರು.

https://platform.twitter.com/embed/Tweet.html?creatorScreenName=news18kannada&dnt=false&embedId=twitter-widget-0&features=eyJ0ZndfdHdlZXRfZWRpdF9iYWNrZW5kIjp7ImJ1Y2tldCI6Im9uIiwidmVyc2lvbiI6bnVsbH0sInRmd19yZWZzcmNfc2Vzc2lvbiI6eyJidWNrZXQiOiJvbiIsInZlcnNpb24iOm51bGx9LCJ0ZndfdHdlZXRfcmVzdWx0X21pZ3JhdGlvbl8xMzk3OSI6eyJidWNrZXQiOiJ0d2VldF9yZXN1bHQiLCJ2ZXJzaW9uIjpudWxsfSwidGZ3X3NlbnNpdGl2ZV9tZWRpYV9pbnRlcnN0aXRpYWxfMTM5NjMiOnsiYnVja2V0IjoiaW50ZXJzdGl0aWFsIiwidmVyc2lvbiI6bnVsbH0sInRmd19leHBlcmltZW50c19jb29raWVfZXhwaXJhdGlvbiI6eyJidWNrZXQiOjEyMDk2MDAsInZlcnNpb24iOm51bGx9LCJ0ZndfZHVwbGljYXRlX3NjcmliZXNfdG9fc2V0dGluZ3MiOnsiYnVja2V0Ijoib2ZmIiwidmVyc2lvbiI6bnVsbH0sInRmd190d2VldF9lZGl0X2Zyb250ZW5kIjp7ImJ1Y2tldCI6Im9mZiIsInZlcnNpb24iOm51bGx9fQ%3D%3D&frame=false&hideCard=false&hideThread=false&id=1557272640242429952&lang=kn&origin=https%3A%2F%2Fkannada.news18.com%2Fnews%2Fstate%2Fpraveen-nettarus-pet-died-dog-apparently-stopped-eating-since-the-day-praveen-was-murdered-mrq-817264.html&sessionId=4c2fcfff6383080d8e08726707c14803431b55cc&siteScreenName=news18kannada&theme=light&widgetsVersion=b7df0f50e1ec1%3A1659558317797&width=550px



ಈ ವೇಳೆ ಅವರ ಜೊತೆಗಿದ್ದ ವ್ಯಕ್ತಿ ರೇನ್‌ಕೋಟ್ ತರಬೇಕು ಅಂತ ಮತ್ತೆ ಅಂಗಡಿ ಒಳಗೆ ಹೋಗಿದ್ದರಂತೆ. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪ್ರವೀಣ್ ಮೇಲೆ ತಲ್ವಾರ್ ಸೇರಿದಂತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ಪ್ರವೀಣ್‌ ಮೇಲೆ ಹಲ್ಲೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್


ಪ್ರವೀಣ್ ಗಂಭೀರ ಗಾಯಗೊಂಡು, ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಈ ವೇಳೆ ಮೂವರೂ ಎಸ್ಕೇಪ್ ಆಗಿದ್ದರು. ಅಂಗಡಿ ಒಳಗೆ ಹೋದ ವ್ಯಕ್ತಿ ಹೊರಗಡೆ ಪ್ರವೀಣ್ ಕೂಗುವುದನ್ನು ಕೇಳಿ ಹೊರಗೆ ಬಂದು ನೋಡುವಷ್ಟರಲ್ಲಿ ಪ್ರವೀಣ್ ಸ್ಕೂಟರ್ ನಿಂದ 50 ಮೀಟರ್ ದೂರದಲ್ಲಿ ಬಿದ್ದು, ಒದ್ದಾಡುತ್ತಿದ್ದಂತೆ.


ಆಗ ಅಲ್ಲಿಂದ ಮೂವರು ಅಪರಿಚಿತರು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬೈಕ್‌ನಲ್ಲಿ ಪುತ್ತೂರು ಕಡೆಗೆ ಪರಾರಿಯಾಗಿದ್ದಾರೆ ಎಂದು ಪ್ರವೀಣ್ ಜೊತೆಯಲ್ಲಿದ್ದ ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ್ದಾರೆ.

Praveen Nettarus pet died dog apparently stopped eating since the day Praveen was murdered mrq
ಪ್ರವೀಣ್ ನೆಟ್ಟಾರು


ನಿರ್ಬಂಧ ತೆರವು


ಕೊಲೆಗಳಿಂದ ಬೆಚ್ಚಿಬಿದ್ದಿದ್ದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡೋ ನಿಟ್ಟಿನಲ್ಲಿ ವ್ಯಾಪಾರ ವಹಿವಾಟು ಹಾಗೂ ಜನರ ಓಡಾಟಕ್ಕೆ ಸಂಬಂಧಿಸಿದಂತ ಜಿಲ್ಲಾಡಳಿತ (District Administration) ಕೆಲವು ನಿರ್ಬಂಧ ಜಾರಿಗೊಳಿಸಿತ್ತು.


ಆಗಸ್ಟ್ 7ರಂದು ಈ ನಿರ್ಬಂಧಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಆದರೆ ಜಿಲ್ಲೆಯಾದ್ಯಂತ ಸೆಕ್ಷನ್‌ 144 (Section 144 ) ಜಾರಿಯಲ್ಲಿರಲಿದೆ. ನಿಷೇಧಾಜ್ಞೆ ಆಗಸ್ಟ್​ 14ರ ಮಧ್ಯರಾತ್ರಿವರೆಗೆ ಮುಂದುವರಿಯಲಿದೆ. ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ (Rajendra K.V) ತಿಳಿಸಿದ್ದಾರೆ.

ಆ.14ರ ವರೆಗೆ ನಿಷೇಧಾಜ್ಞೆ ಮುಂದುವರಿಕೆ


ಸಿಆರ್‌ಪಿಸಿ ಸೆಕ್ಷನ್‌ 144ರ ಅಡಿ ಜಾರಿಗೊಳಿಸಿರುವ ನಿಷೇಧಾಜ್ಞೆ ಆ.14ರ ಮಧ್ಯರಾತ್ರಿವರೆಗೆ ಮುಂದುವರಿಯಲಿದೆ. ಸಾರ್ವಜನಿಕ ಸ್ಥಳಗಳಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದಕ್ಕೆ ಅವಕಾಶ ಇಲ್ಲ. ಶಸ್ತ್ರಗಳನ್ನು ಹಿಡಿದುಕೊಂಡು ಓಡಾಡುವಂತಿಲ್ಲ.

Next article‘ನಕಲಿ ಸರ್ಟಿಫಿಕೇಟ್‌ ರಾಜ’ ಅಶ್ವಥ್ ನಾರಾಯಣಗೆ ಉರಿ ಹತ್ತಿಕೊಂಡಿದ್ದೇಕೆ?: ಎಚ್‌ಡಿಕೆ ಪ್ರಶ್ನೆ

LEAVE A REPLY

Please enter your comment!
Please enter your name here