ಗುಡೇಕೋಟೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಸಮೀಪದ ಚಿರತಗುಂಡು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ನಡೆದ ತಾಯಕನಹಳ್ಳಿ. ಚಿಕ್ಕಜೋಗಿಹಳ್ಳಿ. ಹುರುಳಿಹಾಳ್ ಈ ಮೂರು ವಲಯಗಳ ಸೇವಾ ಪ್ರತಿನಿಧಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ವಿಜಯನಗರ ಜಿಲ್ಲಾ ನಿರ್ದೇಶಕರಾದ ಕೆ. ಚಿದಾನಂದ ರವರು ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಈ ಬಾರಿ ದೇಶಾದ್ಯಂತ ರಾಷ್ಟ್ರಾಭಿಮಾನದ ಅಂಗವಾಗಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಶುಭಾಶಯಗಳನ್ನು ಕೋರಿ ರಾಷ್ಟ್ರಪ್ರೇಮದ ಬಗ್ಗೆ ಮಾತನಾಡುತ್ತಾ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಾಡಿನಾದ್ಯಂತ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಗ್ರಾಮೀಣ ಅಭಿವೃದ್ಧಿ ಯೋಜನೆಯ ಅನೇಕ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಅದರಂತೆ ಗ್ರಾಮೀಣ ಭಾಗದ ಜನತೆಗೆ ಸರ್ಕಾರದ ಸವಲತ್ತುಗಳನ್ನು ಹಾಗೂ ನಮ್ಮ ಸಂಸ್ಥೆಯ ಯೋಜನೆಯ ಸವಲತ್ತುಗಳನ್ನು ಸಕಾಲದಲ್ಲಿ ಒದಗಿಸುವುದು ನಮ್ಮ ಹಾಗೂ ಸೇವಾ ಪ್ರತಿನಿಧಿಗಳ ಕರ್ತವ್ಯವಾಗಿದೆ. ಪ್ರಗತಿ ನಿಧಿ. ಆರೋಗ್ಯ ರಕ್ಷ. ಸಾಮಾನ್ಯ ಸೇವಾ ಕೇಂದ್ರ. ಸೌಲಭ್ಯಗಳ ಮಾಹಿತಿಯನ್ನು ಮತ್ತು ಹಲವಾರು ಸಾಮಾಜಿಕ ಸವಲತ್ತುಗಳನ್ನು ಜನರಿಗೆ ತಲುಪಿಸಬೇಕೆಂದು ವಿಜಯನಗರ ಜಿಲ್ಲಾ ನಿರ್ದೇಶಕರಾದ ಕೆ.ಚಿದಾನಂದ ರವರು ಸೇವಾ ಪ್ರತಿನಿಧಿಗಳ ಕುರಿತು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕು ಯೋಜನಾಧಿಕಾರಿಗಳಾದ ಸಂತೋಷ ಕುಮಾರ್. ತಾಯಕನಹಳ್ಳಿ ವಲಯ ಮೇಲ್ವಿಚಾರಕರಾದ ರಂಗಸ್ವಾಮಿ. ಚಿಕ್ಕ ಜೋಗಿಹಳ್ಳಿ ವಲಯ ಮೇಲ್ವಿಚಾರಕರಾದ ಶಿವ ನಾಯಕ್. ಹುರುಳಿಹಾಳ್ ವಲಯ ಮೇಲ್ವಿಚಾರಕರಾದ ವಸಂತಕುಮಾರ್ ಸೇರಿದಂತೆ ಮೂರು ವಲಯಗಳ ಸೇವಾ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ D M. ಈಶ್ವರಪ್ಪ. ಸಿದ್ದಾಪುರ