22.3 C
New York
Saturday, October 5, 2024

ನರಸಿಂಹನಗಿರಿ ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ..

ಗುಡೇಕೋಟೆ:ಶಾಲೆಗಳಲ್ಲಿನ ಗಂಟೆಗಳ ಸದ್ದು ಹೆಚ್ಚು ಕೇಳುವ ದೇಶವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಲು ಸಾಧ್ಯ ಶಿಕ್ಷಣವಂತ ವಿದ್ಯಾರ್ಥಿಗಳು ವೇಷಭೂಷಣದ ಬದಲಾಗಿ ಉತ್ತಮ ಆದರ್ಶದಿಂದ ಸಮಾಜದಲ್ಲಿ ಗುರುತಿಸಿಕೊಳ್ಳುವ ಮೂಲಕ ನಮ್ಮ ಶಾಲೆಗೆ ಕಿರ್ತಿ ತಂದು ಶಿಕ್ಷಕರ ಋಣವನ್ನು ತೀರಿಸಬೇಕಿದೆ ಎಂದು ಮಾಜಿ ಶಾಸಕರಾದ ಎನ್,ಟಿ,ಬೋಮ್ಮಣ್ಣ ಕರೆ ನೀಡಿದರು.

ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯ ವ್ಯಾಪ್ತಿಯ ನರಸಿಂಹನಗಿರಿ ಗ್ರಾಮದ ಶ್ರೀ ಮತಿ ದೊಡ್ಡಮನೆ ಬೋರಮ್ಮ ತಮ್ಮಪ್ಪ ಪ್ರೌಢಶಾಲೆಯ 2014-15 ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗುರು ಮತ್ತು ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿದೆ, ಹೀಗಾಗಿ ಪುರಾಣ ಪುಣ್ಯಗಳ ಕಾಲದಿಂದಲೂ ಅದನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ, ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸುವ ಮೂಲಕ ಮತ್ತೊಂದು ವಿಶೇಷ ಅರ್ಥ ನೀಡುತ್ತಿರುವುದು ಸಂತಸದ ವಿಷಯ ಎಂದರು.

ಇತ್ತೀಚಿನ ದಿನಗಳಲ್ಲಿ ಗುರುಗಳ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ಖೇದದ ಸಂಗತಿಯಾದರೇ, ಇನ್ನೊಂದೆಡೆ ಕೆಲ ವಿದ್ಯಾರ್ಥಿಗಳು ಶಿಕ್ಷಣ ನೀಡಿದ ಗುರುಗಳನ್ನು ನೆನೆದು ಶಿಕ್ಷಕ ಗುರುವಂದನೆಯಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶಿಕ್ಷಕರ ಗೌರವವನ್ನು ಹೆಚ್ಚಿಸುವಂತೆ ಮಾಡಿದೆ ಎಂದರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಶಿಕ್ಷಕ ಜಿ.ಬಸಪ್ಪ, ಶಿಕ್ಷಣದಿಂದ ಮಕ್ಕಳು ವಂಚಿತರಾದಲ್ಲಿ ಅದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ, ದೇಶದ ಪ್ರಗತಿಗೆ ಶಿಕ್ಷಣವೇ ಆಧಾರ ಸ್ಥಂಭವಾಗಿದ್ದು ಅದನ್ನು ಪಡೆದ ವ್ಯಕ್ತಿಗಳು ದೇಶಕ್ಕಾಗಿ ವಿನಿಯೋಗಿಸಬೇಕು ಅಂದಾಗ ಮಾತ್ರ ಸರ್ಕಾರದ ಉದ್ದೇಶಗಳು ಈಡೇರಲು ಸಾಧ್ಯವೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಳೇ ವಿದ್ಯಾರ್ಥಿ ಪ್ರವೀಣ್ ಎ.ಕೆ. ಇತ್ತೀಚೆಗೆ ಶಿಕ್ಷಕ ವೃಂದಕ್ಕೆ ಗೌರವ ನೀಡುವ ಗುರುವಂದನೆ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿದ್ದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಹೆಚ್ಚಿಸಿದೆ, ಜ್ಞಾನದ ಹಸಿವನ್ನು ತೀರಿಸಿ ಬದುಕನ್ನು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ, ಶೆಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಪ್ರಭುದ್ಧಗೊಳಿಸಿದ ಶಿಕ್ಷಕರ ಸೇವೆಯನ್ನು ಸ್ಮರಿಸುತ್ತಿರುವ ಕಾರ್ಯಕ್ರಮ ಅರ್ಥಪೂರ್ಣ ಎಂದರು.

ಈ ಸಂದರ್ಭದಲ್ಲಿ ಶ್ರೀ ವಾಲ್ಮೀಕಿ ವಿದ್ಯಾಸಂಸ್ಥೆ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎನ್‌.ಟಿ. ಬೊಮ್ಮಣ್ಣ. ಮುಖ್ಯ ಗುರುಗಳಾದ ಜಿ ಬಸಪ್ಪ. ಶಿಕ್ಷಕರಾದ ಕೆ ಮಂಜಣ್ಣ. ವೆಂಕಟೇಶ್. ಮಹದೇವಪ್ಪ. ಕೆ ಬಿ ಹುಚ್ಚಪ್ಪ.ತಿಮ್ಮಣ್ಣ.ಬಸವರಾಜ್. ಮಲ್ಲಿಕಾರ್ಜುನ. ರಾಜಕುಮಾರ್. ಶಿವಪ್ರಸಾದ್. ಸೇರಿದಂತೆ ಸ್ವಾಗತವನ್ನು ಕೆ ಚಂದ್ರಶೇಖರ್. ಪ್ರಾರ್ಥನೆ ಸಿಎಂ ಚೈತ್ರ .ಎನ್ ಪರಮೇಶ್. ನಿರೂಪಣೆ ಅಂಕಿತ. ಪ್ರವೀಣ್. ವಂದನಾರ್ಪಣೆ ಸುಷ್ಮಾ.ನೆರವೇರಿಸಿದರು ಶಾಲಾ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

.ವರದಿ .MD. ಈಶ್ವರಪ್ಪ .ಸಿದ್ದಾಪುರ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles