ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ಸರ್ಕಾರ ಜಲಜೀವನ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಸಹರ ಸಂಸ್ಥೆ ದಾವಣಗೆರೆ ಇವರ ಸಂಪನ್ಮೂಲ ಸಂಸ್ಥೆಯಿಂದ ಒಕ್ಕಲು ರೈತ ಉತ್ಪಾದಕರ ಕಂಪನಿಯ ಆಡಳಿತ ವತಿಯಿಂದ ರೈತರ ಸಾಮಾನ್ಯ ಸಭೆ ನಡೆಸಲಾಯಿತು. ಸಣ್ಣ ಮತ್ತು ಅತೀ ಸಣ್ಣ ರೈತರು ತಮ್ಮ ಬೆಳೆಗಳಿಗೆ ಬೆಂಬಲ ಬೆಲೆ ಪಡೆಯಲು ರೈತ ಉತ್ಪಾದಕ ಕಂಪನಿಗಳು ಸಹಾಯವಾಗುತ್ತವೆ ಎಂದು ಮಾಜಿ ಶಾಸಕ ರವೀಂದ್ರನಾಥ್ ಬಾಬು ತಿಳಿಸಿದರು. ಇಂದು ಕೃಷಿ ಕ್ಷೇತ್ರವು ಎದುರಿಸುತ್ತಿರುವ ಮಾರುಕಟ್ಟೆ ಸಮಸ್ಯೆಗೆ, ಆರ್ಥಿಕ ಮತ್ತು ಸಾಮಾಜಿಕ ಲಾಭಗಳನ್ನು ಹೆಚ್ಚಿಸಲು ರೈತ ಉತ್ಪಾದಕ ಕಂಪನಿ ಸಹಾಯ ಮಾಡಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಸುನಿಲ್ ಕುಮಾರ್ ತಿಳಿಸಿದರು. ಇದೇ ವೇಳೆ ಕೃಷಿ ಅಧಿಕಾರಿ ಪುಷ್ಪ, ತೋಟಗಾರಿಕೆ ಇಲಾಖೆ ಅಧಿಕಾರಿ ಕೊಟ್ರೇಶ್, ಒಕ್ಕಲು ರೈತ ಉತ್ಪಾದಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷರು ಮಲ್ಲಪ್ಪ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ರತ್ನಮ್ಮ ಪ್ರಕಾಶ್, ಆಶಾ ತಿಪ್ಪೇಸ್ವಾಮಿ, ಮಾಜಿ ತಾಲೂಕ್ ಸದಸ್ಯರು ಘೋಸಯ್ಯ, ಸೇರಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ರೈತರು ಸಿಬ್ಬಂದಿಗಳು ಇದ್ದರು.
ವರದಿ.ಮಂಜುನಾಥ್. ಹೂಡೇ0