ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ಅಸಂಘಟಿತ ರಾಜ್ಯ ಉಪಾಧ್ಯಕ್ಷರಾದ ವೀರನಗೌಡ ಪಿ .ಪೊಲೀಸ್ ಗೌಡ ಇವರು ಕೂಡ್ಲಿಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ಹಾಗೂ ಕಾಂಗ್ರೆಸ್ ಮುಖಂಡರುಗಳ ಜೊತೆ ಕಾಂಗ್ರೆಸ್ ಕಾರ್ಯಕರ್ತರ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಮುಂದಿನ ದಿನದ 27-9-2022ರಂದು ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕುಗಳ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಕಾರ್ಯಕರ್ತರನ್ನು ಕೂಡ್ಲಿಗಿ ಪಟ್ಟಣದಲ್ಲಿ ಪದಗ್ರಹಣ ಹಮ್ಮಿಕೊಳ್ಳಲಾಗುವುದೆಂದು ನಲ್ಲ ಮುತ್ತಿ ದುರ್ಗೇಶ್ ಅಸಂಘಟಿತ ಕಾರ್ಮಿಕ ಜಿಲ್ಲಾಧ್ಯಕ್ಷರು ತಿಳಿಸಿದರು. ಈ ಸಂದರ್ಭದಲ್ಲಿ ಮೆಕ್ಕೆಲರ್ ಚಂದ್ರಪ್ಪ ಅಸಂಘಟಿತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೂಡ್ಲಿಗಿ ,ಮತ್ತು ಗುರುಬಸವರಾಜ್ ಅಸಂಘಟಿತ ಬ್ಲಾಕ್ ಅಧ್ಯಕ್ಷರು ಹರಪನಹಳ್ಳಿ ,ಶಿವಣ್ಣ ಅಸಂಗಟಿತ ಬ್ಲಾಕ್ ಅಧ್ಯಕ್ಷರು ಚಿಗಟೆಗೆರೆ, ಅಸಂಘಟಿತ ಜಿಲ್ಲಾ ಉಪಾಧ್ಯಕ್ಷರಾದ ವೀರೇಶ್, ಓಬಳೇಶ್, ಮಾರೇಶ್, ಜಗನ್ನಾಥ್ ಹಾಗೂ ಕಾಂಗ್ರೆಸ್ ಮುಖಂಡರುಗಳಾದ ಡಿ.ಎಚ್ ದುರ್ಗೇಶ್ ಗ್ರಾಮ ಪಂಚಾಯತ್ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀನಿವಾಸ್, ಸಂತೋಷ್ ,ಹಾಗೂ ಇನ್ನು ಕಾಂಗ್ರೆಸ್ ಮುಖಂಡರು ಭಾಗವಹಿಸಿದರು. ಈ ಸಂದರ್ಭದಲ್ಲಿ ಕೂಡ್ಲಿಗಿಗೆ ಆಗಮಿಸಿದಂತಹ ರಾಜ್ಯ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಉಪಾಧ್ಯಕ್ಷರಾದ ವೀರನಗೌಡ ಪಿ ಪೊಲೀಸ್ ಗೌಡ ಇವರಿಗೆ ಕಾಂಗ್ರೆಸ್ ಎಲ್ಲಾ ಮುಖಂಡರು ಗೌರವ ಪೂರಕ ಸನ್ಮಾನ ಮಾಡಿದರು.