ಕೂಡ್ಲಿಗಿ:- ಪಟ್ಟಣದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಕೂಡ್ಲಿಗಿ ಹಾಗೂ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾರತ್ ಜೋಡೋ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು. ಈ ಸಂಧರ್ಭದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತಾನಾಡಿ,ದೇಶದಲ್ಲಿ ಪ್ರಧಾನಿ ಮೋದಿಯವರ ಸರ್ವಾಧಿಕಾರ ಧೋರಣೆಗೆ ಬೇಸತ್ತು ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿ ಯಿಂದ ಕಾಶ್ಮೀರದ ವರೆಗೂ ಭಾರತ್ ಜೋಡೋ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ದೇಶದ ಯುವಕರು ನಿರುದ್ಯೋಗಿಗಳಾಗಿ ಕೆಲಸವಿಲ್ಲದೆ ಅಲೆಯುವಂತಾಗಿದೆ.ಬಿಜೆಪಿ ಪಕ್ಷ ಚುನಾವಣೆಗೂ ಮುನ್ನ ಪ್ರತಿ ವರ್ಷ ಯುವಕರಿಗೆ ಎರಡು ಕೋಟಿ ಉದ್ಯೋಗ ನೀಡುವ ಘೋಷಣೆ ಮಾಡಿತ್ತು.ಆದರೆ ಇವತ್ತು ಇರುವ ಉದ್ಯೋಗಳಲ್ಲಿ ಸುಮಾರು 13 ಕೋಟಿಯಷ್ಟು ಉದ್ಯೋಗಿಗಳನ್ನ ತಗೆದು ಹಾಕಿದ್ದಾರೆ.ಪ್ರಧಾನಿ ಮೋದಿ ಆಡಳಿತಕ್ಕೆ ಬಂದಾಗಿನಿಂದ ಕಾರ್ಪೋರೆಟ್ ವಲಯದ ಪರವಾಗಿ ಅಂಬಾನಿ, ಆದಾನಿಯಂತಹ ಶ್ರೀಮಂತರಿಗೆ ಭರಪೂರ ಕೊಡುಗೆಗಳನ್ನ ನೀಡಿ ಅವರ ಆಸ್ತಿಗಳನ್ನ ದುಪ್ಪಟ್ಟು ಮಾಡಿದ್ದಾರೆ.ಅವರ ಹೆಸರಲ್ಲಿ ಮೋದಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿದರು. ವಿದೇಶದಿಂದ ಕಪ್ಪಹಣ ತರುವೆ ಎಂದು ಬೊಬ್ಬೆಹೊಡೆದು ಈಗ ಸುಮ್ಮನಾಗಿದ್ದಾರೆ.ಭ್ರಷ್ಟಾಚಾರದ ವಿರುದ್ದ ಮಾತಾನಾಡುವ ಇವರು ರಫೇಲ್ ಹಗರಣದಲ್ಲಿ ನಲವತ್ತು ಸಾವಿರ ಕೋಟಿ ರೂಪಾಯಿಗಳ ಅವ್ಯವಹಾರ ಮಾಡಿದ್ದಾರೆ ಎಂದು ದೂರಿದ ಅವರು,ರಾಜ್ಯದಲ್ಲೂ ಅದೇ ತರಹದ ಭ್ರಷ್ಟಾಚಾರವನ್ನು ಮಾಡುತ್ತಿರುವುದು ನಮ್ಮೆಲ್ಲರ ಮುಂದಿದೆ.ಪಿಎಸ್ಐ ನೇಮಕಾತಿ ಹಗರಣದಲ್ಲಿ ತಲಾ 80 ಲಕ್ಷ ರೂಪಾಯಿಗಳ ಭ್ರಷ್ಟಾಚಾರ ಬಿಜೆಪಿಯವರ ಮೇಲಿದೆ.ಇದರಿಂದಾಗಿ ಸುಮಾರು 97 ಅಧಿಕಾರಿಗಳು ಅರೆಸ್ಟ್ ಆಗಿರುವುದು ಬಿಜೆಪಿ ಪಕ್ಷದ ಸಾಧನೆ ಎಂದು ವ್ಯಂಗವಾಡಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಲೂಟಿಹೊಡೆಯುವ ಸರ್ಕಾರದ ವಿರುದ್ದ ಜನಾಂದೋಲನ ಮಾಡುವ ಸಲುವಾಗಿ ಪಾದಯಾತ್ರೆ ನಡೆಯುತ್ತಿದ್ದೆ.ಆದರೆ ಬಿಜೆಪಿಯ ರಥಯಾತ್ರೆಗಳು ದೇಶದಲ್ಲಿ ಮತೀಯ ಭಾವನೆಗಳಿಗೆ ಬೆಂಕಿ ಹಚ್ಚುವ ಕಾರ್ಯಕ್ಕೆ ಮಾತ್ರ ಯಾತ್ರೆಗಳು ನಡೆಯುತ್ತದೆ ಎಂದು ದೂರಿದರು.ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಬರುವುದು ಶತ ಸಿದ್ದ ಅದರಂತೆ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷ ಗೆದ್ದೆ ಗೆಲ್ಲುವ ವಿಶ್ವಾಸ ವಿದೆ ಎಂದು ಹೇಳಿದರು.ಬಳ್ಳಾರಿಯಲ್ಲಿ ಇದೇ 30 ರಂದು ನಡೆಯುವ ರಾಹುಲ್ ಗಾಂಧಿ ಪಾದಯಾತ್ರೆ ಗೆ ಈ ಕ್ಷೇತ್ರದಿಂದ ಸಾವಿರಾರು ಸಂಖೆಯಿಂದ ಆಗಮಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸುವಂತೆ ಕಾರ್ಯಕರ್ತರಿಗೆ ತಿಳಿಸಿದರು.ಭಾರತ್ ಜೋಡೋ ಪಾದಯಾತ್ರೆಯ ಹಾಗೂ ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಉಸ್ತುವಾರಿ ಡಾ.ಎಲ್.ಹನುಮಂತಯ್ಯ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಜೆ.ಎಸ್.ಅಂಜನೇಯಲು,
ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಶ್ರೀಧರ ಬಾಬು, ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಭಾರತ್ ಜೋಡೋ ಕೋ ಆರ್ಡಿನೇಟರ್ ನಿಂಬಗಲ್ ರಾಮಕೃಷ್ಣ, ಗುಜ್ಜಲ ರಘು,ನಾಗಮಣಿ ಜಿಂಕಾಲ್,ಲೋಕೇಶ್ ವಿ.ನಾಯಕ,ಕೆಪಿಸಿಸಿ ಕಾರ್ಯದರ್ಶಿ ಹಿರೇಕುಂಬಳಗುಂಟೆ ಉಮೇಶ್.
ಕೂಡ್ಲಿಗಿಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುರಾದ ಎಂ.ಗುರುಸಿದ್ದನಗೌಡ,ಕುಮಾರ ಗೌಡ, ವೀಣಾ ಮಹಾಂತೇಶ್, ಪಪಂ ಸದಸ್ಯರಾದ ಕಾವಲಿ ಶಿವಪ್ಪನಾಯಕ, ಸಯ್ಯದ್ ಶುಕೂರ್,ಡಾಣಿ ಚೌಡಮ್ಮ,ಎಚ್.ವೀರಭದ್ರಪ್ಪ, ಕೊಗಳಿ ಮಂಜುನಾಥ, ಓಬಣ್ಣ, ಧರ್ಮೇಂದ್ರ ನಾಯ್ಕ್, ಬಸವರಾಜ, ಜಿಲಾನ್, ನಲ್ಲಮುತ್ತಿ ದುರುಗೇಶ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು
ವರದಿ.ಮಂಜುನಾಥ್. ಹೂ ಡೇ0