ಕೂಡ್ಲಿಗಿ ತಾಲೂಕಿನ ಎನ್ಎಚ್ 50ರ ರಸ್ತೆಯ ಮೇಲೆ ಇಮಾಡಪುರ ಕಡೆಯಿಂದ ಹೊಸಹಳ್ಳಿ ಕಡೆ ಬರುವ ರಸ್ತೆಯಲ್ಲಿ ಹೊಸಹಳ್ಳಿ ಗ್ರಾಮದ ಎಸಿ ಚೆನ್ನಬಸಪ್ಪ ಅವರ ಜಮೀನಿನ ಹತ್ತಿರ ಚಲಿಸುತ್ತಿದ್ದ ಟ್ರ್ಯಾಕ್ಟರ್ ಹಿಂಬಗೆ ಕಾರ್ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಾನಹೊಸಹಳ್ಳಿ ಇಮಡಾಪುರ ಮಧ್ಯೆ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ನಡೆದಿದೆ. ತಾಲೂಕಿನ ಸಕಲಾಪುರಹಟ್ಟಿಯ ಗೊಲ್ಲರಹಟ್ಟಿ ನಿವಾಸಿ ಹಾಲೇಶ್ (40) ಮೃತ ದುರ್ದೈವಿ. ಕಳೆದ ಒಂದು ವರ್ಷದ ಹಿಂದೆ ಹೊಸ ಟ್ರ್ಯಾಕ್ಟರ್ ನ್ನು ಹಾಲೇಶ್ ಖರೀದಿಸಿದ್ದರು ಎನ್ನಲಾಗಿದ್ದು, ಯಾವುದೋ ಕೆಲಸದ ನಿಮಿತ್ತ ಇಮಡಾಪುರಕ್ಕೆ ಬಂದಿದ್ದರು. ಗ್ರಾಮದಲ್ಲಿ ಕೆಲ ಸಂಬಂಧಿಕರು ಹಾಗೂ ಪರಿಚಯಸ್ಥರನ್ನು ಮಾತಾಡಿಸಿಕೊಂಡ ನಂತರ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಸಕಲಾಪುರಹಟ್ಟಿ ಗೊಲ್ಲರಹಟ್ಟಿ ಕಡೆಗೆ ಹೋಗುವಾಗ ಕೂಡ್ಲಿಗಿ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ಕಾರು ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಯಾರಿಗೂ ಅಪಾಯವಾಗಿಲ್ಲ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕಾನಹೊಸಹಳ್ಳಿ ಪೊಲೀಸ್ ಠಾಣೆ ಪಿಎಸ್ ಐ ನಾಗರತ್ನಮ್ಮ ಹಾಗೂ ಸಿಬ್ಬಂದಿ, ಹೈವೇ ಪೆಟ್ರೋಲಿಂಗ್ ಪೊಲೀಸರು, ಸಹಾಯಕರು ಭೇಟಿ ನೀಡಿ ಪರಿಶೀಲಿಸಿದರು. ಇನ್ನು ಹೊಸಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು ಪರಿಶೀಲಿಸಿದ ವೈದಧಿಕಾರಿಗಳು ಆಸ್ಪತ್ರೆಗೆ ಬರುವ ಮಾರ್ಗದಲ್ಲಿ ಮೃತಪಟ್ಟಿರುವುದಾಗಿ ಹೇಳಿದ್ದು ಶವವನ್ನು ಆಸ್ಪತ್ರೆಯಲ್ಲಿ ಬಿಟ್ಟು ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡಿಸಿ ಸಾವಿಗೆ ಕಾರಣರಾದ ಕಾರಿನ ಚಾಲಕನ ಮೇಲೆ ಕ್ರಮ ಜರುಗಿಸುವಂತೆ ನೀಡಿದ ಮೃತನ ಹೆಂಡತಿ ದೂರಿನ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತುರ್ತು ವರದಿಯನ್ನು ನಿವೇದಿಸಿದೆ.
ವರದಿ.ಮಂಜುನಾಥ್. ಹೂ ಡೇ0