ಕೂಡ್ಲಿಗಿ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನೌಕರರು ಬೃಹತ್ಪಾದಯಾತ್ರೆಯನ್ನು ಕೈಗೊಂಡಿರುತ್ತಾರೆ. ಶಿಕ್ಷಕರಾದ ಗಂಗಾಧರ್ ಎಸ್ ಪಾಟೀಲ್ ಇವರು ವಿಜಯಪುರ ದಿಂದ ಬೆಂಗಳೂರಿಗೆ ಹೋಗುವ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ಕಾನ ಹೊಸಹಳ್ಳಿ ಉಜ್ಜಿನಿ ಪ್ರಾಥಮಿಕ ಶಾಲೆಯಲ್ಲಿ ಸುತ್ತಮುತ್ತಲಿನ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಶಿಕ್ಷಕರು ಇವರನ್ನು ಬರಮಾಡಿಕೊಂಡು ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಗಂಗಾಧರ ಅವರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಿವರವಾಗಿ ವಿವರಿಸಿದರು. ನಂತರ ಮಾತನಾಡಿದ ಇವರು ಅಪಘಾತ ಆದಂತ ಸಮಯದಲ್ಲಿ ಎರಡು ಬಾರಿ ಶಸ್ತ್ರ ಚಿಕಿತ್ಸೆ ಆಗಿರುತ್ತದೆ ನಂತರ ಬಲಗಾಲಿನಲ್ಲಿ 18ರಾಡು ಅಳವಡಿಸಿದ್ದಾರೆ ಎಂದು ಹೇಳಿದರು. ಅವರ ಪಾದಯಾತ್ರೆ ಇಂದಿಗೆ 300 ಕಿ.ಮೀ ಗಳನ್ನು ಕ್ರಮಿಸಿ ಚಿತ್ರದುರ್ಗ ಸಮೀಪಿಸುತ್ತಿದೆ. ಇಲ್ಲಿಯವರೆಗೂ ಸೌಜನ್ಯಕಾದರೂ ಸರ್ಕಾರದ ಪರವಾಗಿ ಯಾರೊಬ್ಬರೂ ಪ್ರತಿನಿಧಿಗಳು ಕೊಟ್ಟಿಲ್ಲ. ಇದೆ ಸಂದರ್ಭದಲ್ಲಿ ಶ್ರೀ ಸಿದ್ದಲಿಂಗೇಶ್ವರ ಪದವಿಪೂರ್ವ ಕಾಲೇಜ್ ಪ್ರಾಂಶುಪಾಲರಾದ ನಾಗಲಿಂಗಪ್ಪ ಇವರು ಪಾದಯಾತ್ರೆಯ ಬಗ್ಗೆ ಹಾಗೂ ನಿವೃತ್ತಿಯ ಜೀವನದ ಬಗ್ಗೆ ವಿಸ್ತಾರವಾದ ಮಾತುಗಳನ್ನು ವಿವರಿಸಿದರು. ನಂತರ ಸರ್ಕಾರ ನಮಗೆ ಯಾವುದೇ ರೀತಿಯಿಂದ ತೊಂದರೆ ಮಾಡದೆ ಸೌಲಭ್ಯವನ್ನು ಒದಗಿಸಬೇಕೆಂದು ವಿವರವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್ ಜೆ ಪಿ ಕಾಲೇಜಿನ ಪ್ರಾಂಶುಪಾಲರಾದ ಪಿ ಬಸವರಾಜ್ ಮಾತನಾಡಿ ಎನ್‌ಪಿಎಸ್ ರದ್ದುಪಡಿಸಿ ಓಪಿಎಸ್ ಜಾರಿಗೊಳಿಸಬೇಕೆಂದು ವಿವರಿಸಿದ್ದರು. ಎಲ್ಲಾ ನೌಕರರು ಪಕ್ಷ ಭೇದ ಬಿಟ್ಟು ಸರ್ಕಾರಕ್ಕೆ ಮನಮುಟ್ಟುವಂತ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ನಾರಪ್ಪ, ಉಪನ್ಯಾಸಕರಾದ,ಓಂ ಪ್ರಕಾಶ, ನಾಗಭೂಷಣ್ ಸೋಮನಾಥ, ಬಸವರಾಜಯ್ಯ, ಶಿಕ್ಷಕರಾದ ಕೆಎಮ್ ಕೊಟ್ರಯ್ಯ, ವೀರಯ್ಯ, ರಾಘವೇಂದ್ರ ರೆಡ್ಡಿ, ನಾಗರಾಜ, ಉಪಸ್ಥಿತರಿದ್ದರು.
ವರದಿ.ಮಂಜುನಾಥ್ ಹೂ ಡೇ0