ಬಳ್ಳಾರಿ: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸನ್ಮಾನ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ 371 ಜೆ ಮಂಜೂರಾತಿ ಮತ್ತು ಅನುಷ್ಠಾನದ ಬಗ್ಗೆ ಕಲಬುರ್ಗಿಯಲ್ಲಿ ಡಿ.10 ರಂದು ಹಮ್ಮಿಕೊಂಡಿರುವ ಬೃಹತ್ ಸಮಾವೇಶಕ್ಕೆ ಬಳ್ಳಾರಿಯಿಂದ ಪಕ್ಷದ ಕಾರ್ಯಕರ್ತರನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಬಗ್ಗೆ ಇಂದು ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಿದ್ದತಾ ಸಭೆ ನಡೆಯಿತು.
ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ, ಮಾಜಿ ಶಾಸಕ ಎ.ವಿ.ಉಮಾಪತಿ, ಮೇಯರ್ ಎಂ.ರಾಜೇಶ್ವರಿ, ಪಕ್ಷದ ನಗರ ಜಿಲ್ಲೆಯ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಜಿಪಂ ಮಾಜಿ ಸದಸ್ಯ ಅಲ್ಲಂ ಪ್ರಶಾಂತ್, ಕೆಪಿಸಿಸಿ ಕಾರ್ಯದರ್ಶಿ ಆಂಜನೇಯಲು, ಮಾಜಿ ಶಾಸಕ ಅನಿಲ್ ಹೆಚ್.ಲಾಡ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳ, ಪಾಲಿಕೆ ಸದಸ್ಯರು, ಮೊದಲಾದವರು ಇದ್ದರು.
ಸಭೆಯ ನಂತರ ಮಾತನಾಡಿದ ಉಮಾಪತಿ ಅವರು. ಎಐಸಿಸಿ ಅಧ್ಯಕ್ಷರಾಗಿ ನಿಜಲಿಂಗಪ್ಪ ಅವರ ನಂತರ ಖರ್ಗೆ ಅವರು ಆಗಿದ್ದಾರೆ. ಅವರು ಅಧ್ಯಕ್ಷರಾದ ಮೇಲೆ ಮೊದಲ ಬಾರಿಗೆ ಕಲ್ಬುರ್ಗಿಗೆ ಬರುತ್ತಿದ್ದು. ಅವರನ್ನು ಸಂಭ್ರಮದಿಂದ ಸ್ವಾಗತಿಸಲು ಬಳ್ಳಾರಿ ನಗರ ಬಸ್ ಗಿಂತ ಕ್ರೂಸರ್ ಗಳನ್ನು ಹೆಚ್ಚಾಗಿ ತೆಗೆದುಕೊಂಡು ಐದರಿಂದ ಹತ್ತು ಸಾವಿರ ಕಾರ್ಯಕರ್ತರನ್ನು ಅಖಂಡ ಜಿಲ್ಲೆಯಿಂದ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಕರೆದುಕೊಂಡು ಹೋಗಲಿದೆ.
ಚುನಾವಣೆ ವರ್ಷ ಆಗಿರುವುದರಿಂದ ಸಮಾರಂಭ ಪಕ್ಷಕ್ಕೆ ಮತ್ತಷ್ಟು ಶಕ್ತಿಯನ್ನು ತುಂಬಲು ಸಹಕಾರಿಯಾಗಲಿದೆಂದರು.
ಅಲ್ಲಂ ವೀರಭದ್ರಪ್ಪ ಅವರು ಬಿಜೆಪಿಯವರು 371 ಜೆ ಅನುಷ್ಟಾನದಲ್ಲಿ ಪಿಎಸ್ ಐ ನೇಮಕ ಮೊದಲಾದ ವಿಷಯಗಳಲ್ಲಿ ಮಾಡಿರುವ ಅನ್ಯಾಯದ ವಿರುದ್ದ ನಮ್ಮ ಹೋರಾಟ ನಡೆದಿದೆಂದರು.