ಹಾವೇರಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನ ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದಿವೆ.
ನೀವು ಏನಾದರೂ ಮೊದಲ ದಿನದ ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡಿದ್ದರೆ ಎರಡನೇ ದಿನದ ಕಾರ್ಯಕ್ರಮಗಳು ಹಾಗೂ ಗೋಷ್ಠಿಗಳಲ್ಲಿ ಭಾಗವಹಿಸಲು ಆಸಕ್ತಿ ಹೊಂದಿದ್ದರೆ.
ಇಂದಿನ (ಜನವರಿ.7, ಶನಿವಾರ) ಅಂದರೆ ಎರಡನೇ ದಿನದ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ವೇದಿಕೆ-1 ಗೋಷ್ಠಿ-3
ಬೆಳಗ್ಗೆ 9 ರಿಂದ 10 ಗಂಟೆಯವರಿಗೆ ಕನ್ನಡದಲ್ಲಿ ಕಾನೂನು ಸಾಹಿತ್ಯ
ಜಿಲ್ಲಾ ನ್ಯಾಯಾಧೀಶರಾದ ಬಿ ಶಿವಲಿಂಗೇಗೌಡ ಅವರಿಂದ ವಿಷಯ ಮಂಡನೆ
ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ್ ಅಧ್ಯಕ್ಷತೆ
ಹುಬ್ಬಳ್ಳಿ ಕರ್ನಾಟಕ ಕಾನೂನು ವಿವಿಯ ಡಾ ಸಿ ಬಸವರಾಜು ಅವರಿಂದ ಆಶಯ
ನುಡಿ
ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ವಿಶೇಷ ಉಪನ್ಯಾಸ
ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ
ಹಿರಿಯ ಬರಹಗಾರ ಡಾ.ಪ್ರೇಮಶೇಖರ ಪ್ರಸ್ತಾವನೆ,
ಡಾ.ಎಸ್ ಎಲ್ ಭೈರಪ್ಪ ಹಾಗೂ ಹಿರಿಯ ಸಾಹಿತಿ ಡಾ.ಪ್ರಧಾನ ಗುರುದತ್ತ ಅವರಿಂದ
ಉಪನ್ಯಾಸ
ಗೋಷ್ಠಿ-4 ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ
ಯುವ ಕರ್ನಾಟಕ ನಾಡು-ನುಡಿ ಚಿಂತನೆ
– ಯುವ ಕನ್ನಡಿಗರಿಗೆ ಸೈನ್ಯದಲ್ಲಿ ಅವಕಾಶಗಳ ಕುರಿತು ಸ್ಕ್ವಾಡ್ರನ್ ಲೀಡರ್ ವಿನುತಾ ಜಿ.ಆರ್
– ಯುವ ಕರ್ನಾಟಕ ಹೊಸ ತಲೆಮಾರಿನ ಮನಸ್ಥಿತಿ ಕುರಿತು ಪ್ರೊ.ಸ್ಮೃತಿ ಹರಿತ್ಸ
ಯುವ ಲೇಖಕರು ಮತ್ತು ಪ್ರಸ್ತುತ ಸಾಹಿತ್ಯ ಕುರಿತು ದೀಪಾ ಹಿರೇಗುತ್ತಿ ಮಾತನಾಡಲಿದ್ದಾರೆ
ಹಿರಿಯ ಕ್ರಿಕೆಟಿಗ ವೆಂಕಟೇಶ ಪ್ರಸಾದ ಅಧ್ಯಕ್ಷತೆ
ಹಿರಿಯ ಅಂತಾರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳರಿಂದ ಆಶಯ ನುಡಿಗಳು
ಗೋಷ್ಠಿ-5 ಮಧ್ಯಾಹ್ನ 1 ರಿಂದ 3 ಗಂಟೆ
ಮಾಧ್ಯಮ-ಹೊಸತನ ಮತ್ತು ಆವಿಷ್ಕಾರಗಳು
ಮುದ್ರಣ ಮಾಧ್ಯಮದಲ್ಲಿ ಕನ್ನಡದ ಬಳಕೆ ಕುರಿತು ಸುದರ್ಶನ್ ಚನ್ನಂಗಿಹಳ್ಳಿ,
ಸಾಮಾಜಿಕ ಜಾಲತಾಣಗಳು ಹರಿವು ಮತ್ತು ಅಪಾಯ ಕುರಿತು ಎಚ್ ಎನ್ ಸುದರ್ಶನ್
ಡಿಜಿಟಲ್ ಮಾಧ್ಯಮದ ಮುಂದಿನ ಸವಾಲುಗಳು ಕುರಿತು ಡಾ ಸಿಬಂತಿ ಪದ್ಮನಾಭ ಅವರಿಂದ ವಿಷಯ ಮಂಡನೆ
ವಿಶ್ರಾಂತ ಕುಲಪತಿ ಡಾ ಎ ಮುರಿಗೆಪ್ಪ ಅಧ್ಯಕ್ಷತೆ, ಹಿರಿಯ ಪ್ರಾಧ್ಯಾಪಕ
ಡಾ.ಮಾಧವ ಪೆರಾಜೆ ಆಶಯ ನುಡಿಗಳು
ಸಂಜೆ 5 ರಿಂದ 6 ಗಂಟೆವರೆಗೆ ಸಮ್ಮೇಳನಾಧ್ಯಕ್ಷರ ಜೊತೆ ಮಾತು-ಮಂಥನ
ಸಮ್ಮೇಳನಾಧ್ಯಕ್ಷರಾದ ಡಾ ದೊಡ್ಡರಂಗೇಡೌ ಅವರೊಂದಿಗೆ ಮಾತು ಮಂಥನ. ಮಹಾಬಲಮೂರ್ತಿ ಕೊಡ್ಲೆಕೆರೆ, ಸಂಕಮ್ಮಜಿ ಸಂಕಣ್ಣನವರ,
ಮಾಲತೇಶ ಅಂಗೂರ, ವಿ.ಮನೋಹರ, ಡಾಶೀಲಾದೇವಿ ಎಸ್ ಮರಳಿಮಠ, ಬಾಪು ಪದ್ಮನಾಭ, ಡಾ ಶಾರಾದ ಮುಳ್ಳೂರು, ಬುಕ್ಕಾಪಟ್ನ ವಾಸು, ರುದ್ರಣ್ಣ ಹರ್ತಿಕೋಟೆ, ಅಂಜನ್ ಶೆಟ್ಟಿ ಭಾಗಿ.
ಸಂಜೆ 6 ರಿಂದ 7 ಗಂಟೆಗೆ ಸಾಧಕರಿಗೆ ಸನ್ಮಾನ
ಸಂಜೆ 7 ರಿಂದ ರಾತ್ರಿ 10 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು
ವೇದಿಕೆ – 2 ಬೆಳಗ್ಗೆ 9 ರಿಂದ 11 ಗಂಟೆ
ಗೋಷ್ಠಿ-4 ವಂಚನ ಪರಂಪರೆ
ನ್ಯಾಯನಿಷ್ಠುರಿ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಹಾಮನೆ ಕುರಿತು ಡಾ.ಕಾಂತೇಶ ಅಂಬಿಗೇರ ಮಾತನಾಡದಿದ್ದಾರೆ
ವಚನಗಳಲ್ಲಿ ಕಾಯಕ ಮತ್ತು ದಾಸೋಹ ಪ್ರಜ್ಞೆ ಕುರಿತು ಸಂಗಮೇಶ ಪೂಜಾರ ಮಾತನಾಡಲಿದ್ದಾರೆ
ಹಿರಿಯ ಸಂಶೋಧಕ ಡಾ ಸಂಗಮೇಶ ಸವದತ್ತಿಮಠ ಅಧ್ಯಕ್ಷತೆ
ಗೋಷ್ಠಿ-5 ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ
ಕನ್ನಡಪರ ಮತ್ತು ಪ್ರಗತಿಪರ ವರದಿಗಳ ಅನುಷ್ಠಾನ
ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ/ಕಾನೂನು ಚಿಂತನೆ ಕುರಿತು ಹಾರನಹಳ್ಳಿ, ಹಾವನೂರು ವರದಿಗೆ 50 ವರ್ಷ ಕುರಿತು
ಕೆ.ಜಯ ಪ್ರಕಾಶ್ ಹೆಗ್ಡೆ ಹಾಗೂ ಮಹಾಜನ ವರದಿ ಕುರಿತು ಡಾ.ಓಂಕಾರ ಕಾಕಡೆ ಮಾತನಾಡಲಿದ್ದಾರೆ.
ಧಾರವಾಡ ಹಿರಿಯ ವಿದ್ವಾಂಸ ಡಾ ವೀರಣ್ಣ ರಾಜೂರ ಅಧ್ಯಕ್ಷತೆ
ಗೋಷ್ಠಿ-6 ಮಧ್ಯಾಹ್ನ 1 ರಿಂದ 3 ಗಂಟೆ
ಕವಿಗೋಷ್ಠಿ-2
ಹಿರಿಯ ಕವಯತ್ನಿ ಡಾ ಎಚ್ ಆರ್ ಸುಜಾತಾ ಅಧ್ಯಕ್ಷತೆ, ಹಿರಿಯ ಸಾಹಿತಿ ಡಾ ಜಯಪ್ಪ ಹೊನ್ನಾಳಿ ಅವರಿಂದ ಆಶಯ ನುಡಿಗಳು
ಗೋಷ್ಠಿ-7 ಮಧ್ಯಾಹ್ನ 3 ರಿಂದ 4 ಗಂಟೆ
ಕನ್ನಡ ಸಾಹಿತ್ಯದ ಹೊಸ ಒಲವುಗಳು
ಸಣ್ಣ ಕಥೆ ಮತ್ತು ಕವಿತೆ ಕುರಿತು ಡಾ ವಿ ಎ ಲಕ್ಷ್ಮಣ ಹಾಗೂ ಪ್ರಬಂಧ ಮತ್ತು ಲಘು ಬರಹ ಡಾ ತಮಿಳ್ ಸೆಲ್ವಿ ಮಾತನಾಡಲಿದ್ದಾರೆ
ಹಿರಿಯ ಬರಹಗಾರರಾದ ಸುನಂದಾ ಪ್ರಕಾಶ ಕಡಮೆ ಅಧ್ಯಕ್ಷತೆ
ಗೋಷ್ಠಿ-8 ಸಂಜೆ 4 ರಿಂದ 6
ಮಕ್ಕಳ ಸಾಹಿತ್ಯ ಮನೋವಿಕಾಸ
ಮಕ್ಕಳ ಸಾಹಿತ್ಯ ಬಲವರ್ಧನೆ ಕುರಿತು ಉತ್ತರ ಕನ್ನಡದ ತಮ್ಮಣ್ಣ ಬೀಗಾರ,
ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ವಿಕಾಸ ಕುರಿತು ಹಾಲಯ್ಯ ಹೀರೆಮಠ
ಮಕ್ಕಳ ಸಾಹಿತ್ಯದಲ್ಲಿ ಪ್ರಯೋಗಶೀಲತೆ ಕುರಿತು ಡಾ ಕೆಎಸ್ ಪವಿತ್ರಾ ಮಾತನಾಡಲಿದ್ದಾರೆ
ಸಂಜೆ 6 ರಿಂದ ರಾತ್ರಿ 10 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು