ಬಳ್ಳಾರಿ : ನಗರದಲ್ಲಿ ಚಿಗುರು ಕಲಾತಂಡ, ಇಬ್ರಾಹಿಂಪುರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಬಳ್ಳಾರಿ ನಗರದ ಮಹಾನಂದಿ ಕೊಟ್ಟಂನ ಶ್ರೀರಾಮ ಮಂದಿರ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾನಪದ ಜನಪರರ ಉತ್ಸವ-2023
ಕಲಾವಿದರು ತಮ್ಮ ಸಂಗೀತ, ನೃತ್ಯ, ನಟನೆ, ಕುಣಿತ, ತಬಲಾ ಹಾಗೂ ಏಕಪಾತ್ರಾಭಿನಯ ಮೂಲಕ ಜನರನ್ನು ರಂಜಿಸುವುದರ ಜೊತೆಗೆ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಾರೆಂದು ಸರಳಾದೇವಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಡಾಕ್ಟರ್ ದುರುಗಪ್ಪ ಹೇಳಿದರು. ಉದ್ಘಾಟಿಸಿ ಮಾತನಾಡಿದ ಅವರು ಜಾನಪದ ಹಾಡುಗಳು ಎಂಥವರ ಹೃದಯವನ್ನು ಕರಗಿಸುತ್ತವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಮಾತನಾಡಿ ಕಲಾವಿದರಿಗೆ ಕನ್ನಡ ಸಂಸ್ಕೃತಿ ಇಲಾಖೆಯಿಂದ ಮಾತ್ರ ಪ್ರೋತ್ಸಾಹ ಸಿಕ್ಕರೆ ಸಾಲದು, ಸಮಾಜದ, ಜನಾಂಗದ, ಸಂಘಸಂಸ್ಥೆಗಳ ಬುದ್ಧಿ ಜೀವಿಗಳು ಪ್ರೋತ್ಸಾಹಿಸುವುದರ ಜೊತೆಗೆ ಅವಕಾಶಗಳನ್ನು ಕಲ್ಪಿಸಿ ಕೊಟ್ಟರೆ ಅವರ ಪ್ರತಿಭೆ ಮತ್ತೊಷ್ಟು ಬೆಳೆಯುತ್ತದೆ ಎಂದು ಹೇಳಿದರು.
ಭರತನಾಟ್ಯ, ಸುಗಮ ಸಂಗೀತ, ವಚನ ಗೀತೆಗಳು, ದಾಸಗೀತೆಗಳು ಹಾಗೂ ಎರ್ರಿಸ್ವಾಮಿ ಮತ್ತು ತಂಡದವರಿಂದ ನಾಟಕ ಸಭಿಕರನ್ನು ರಂಜಿಸಿದವು.
ಬಾಬು ಜಗಜೀವನ್ ರಾಂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎನ್. ಡಿ.ವೆಂಕಮ್ಮ, ಮಾದಾರ ಚನ್ನಯ್ಯ ಸಂಘದ ಜಿಲ್ಲಾ ಅಧ್ಯಕ್ಷ ಚಿದಾನಂದಪ್ಪ,ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಕೆ. ಮಲ್ಲಿನಾಥ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಿಗುರು ಕಲಾ ತಂಡದ ಅಧ್ಯಕ್ಷ ಹುಲುಗಪ್ಪ ಎಸ್. ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಲಾವಿದ ಹನುಮಯ್ಯ ಪ್ರಾರ್ಥಿಸಿದರೆ,ಎರ್ರಿಸ್ವಾಮಿ ಸ್ವಾಗತಿಸಿದರು. ರಮೇಶ ನಿರ್ವಹಿಸಿದರು. ಎಂದು ಪತ್ರಿಕೆ ಪ್ರಕಟಣೆ ತಿಳಿಸಿದರು