ಬಳ್ಳಾರಿ ಜ.19ರಂದು ತಾಲೂಕಿನ ಶಿವಪುರ ಗ್ರಾಮದ ಕೆರೆಯ ಸುತ್ತಮುತ್ತಲ ಪ್ರದೇಶ ಕೆರೆಯ ಬಸಿ ನೀರು ಹರಿದು ಬೆಳೆ ಹಾನಿಗೆ ತುತ್ತಾಗಿ ರೈತರ ಬೆಳೆ ನಾಶವಾಗಿದ್ದ ಹಿನ್ನೆಲೆ ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಿ.ನಾಗೇಂದ್ರ ಅವರು ಬಿ.ಡಿ ಹಳ್ಳಿ ಗ್ರಾಮದ ಮುಖಂಡರಾದ ಶ್ರೀ ಸತ್ಯನಾರಾಯಣ ರೆಡ್ಡಿ ಅವರು ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ನಂತರ ಮಾನ್ಯ ಶಾಸಕ ಬಿ.ನಾಗೇಂದ್ರ ಅವರು ಮಾತನಾಡಿ ಹಾನಿಗೊಳಗಾದ ರೈತರಿಗೆ ಪರಿಹಾರ ಧನವನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಹಾಗೂ ಆದಷ್ಟು ಬೇಗ ರೈತರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ.ವೆಂಕಟೇಶ ಪ್ರಸಾದ್, ಅಣ್ಣಾ ನಾಗರಾಜ್, ಗೋವರ್ಧನ್ ರೆಡ್ಡಿ, ಸಿಂಧುವಾಳ ಗಾದಿಲಿಂಗನಗೌಡ, ಕೆ.ಹೊನ್ನಪ್ಪ, ಯರ್ರಗುಡಿ ಮುದಿ ಮಲ್ಲಯ್ಯ, ಗೋನಾಳ ನಾಗಭೂಷಣ ಗೌಡ, ಹಗರಿ ಗೋವಿಂದ, ಶ್ರೀನಾಥ್, ಚಿನ್ನ, ದುರುಗಣ್ಣ ಸೇರಿದಂತೆ ಬಿ.ಡಿ ಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು, ಶಿವಪುರ ಗ್ರಾಮದ ರೈತರು ಉಪಸ್ಥಿತರಿದ್ದರು.