ಬಳ್ಳಾರಿ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಮತ್ತು ವಿಶ್ವ ವಿದ್ಯಾನಿಲಯ ಹಾಗೂ ಯುಕ್ತ ಕೌಶಲ್ಯ ತರಬೇತಿ ಕೇಂದ್ರ ಮತ್ತು ಲಾಸ್ಯ ಕಲ್ಚರಲ್ ಅಂಡ್ ಸೋಷಿಯಲ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಯುಕ್ತ ಕೌಶಲ್ಯ ಪಥ ಆಯ್ಕೆಯಾದ ತರಬೇತುದಾರರಿಗೆ ವಿವಿಧ ಕೌಶಲ್ಯಗಳು ಯುವ ಸಬಲೀಕರಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಿಲಯದಲ್ಲಿ ಹಾಗೂ ಪದವಿಪೂರ್ವ ಮತ್ತು ಪ್ರಥಮದರ್ಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ MSYEP ಯಲ್ಲಿ ವೃತ್ತಿ ಮಾರ್ಗದರ್ಶನ ತರಬೇತಿಗಳನ್ನು ನೀಡಲು ಆಯ್ಕೆಯಾದ ತರಬೇತುದಾರರಿಗೆ ತರಬೇತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮವನ್ನು ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಆಯೋಜನೆ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಮಹಮದ್ ಗೌಸ್ ರವರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಮೂಲಭೂತ ಹಕ್ಕಾಗಿ ಸ್ಪೋಕನ್ ಇಂಗ್ಲಿಷ್ ,ಕಂಪ್ಯೂಟರ್ ತರಬೇತಿ,ವೃತ್ತಿ ಮಾರ್ಗದರ್ಶನದ ಜ್ಞಾನವಿದ್ದರೆ ಜೀವನ ನಡೆಸಲು ಭಾಷೆಯಲ್ಲಿ ಪರಿಣಿತರಾದರೆ ಜೀವನ ವೃದ್ದಿಗೊಳಿಸಲು ಸಾಧ್ಯವಾಗುತ್ತದೆ ಮತ್ತು ಭಾಷೆಯಿಂದ ಬದುಕನ್ನು ಕಟ್ಟಿಕೊಳ್ಳಲು ಭದ್ರಬುನಾದಿಯಾಗುತ್ತದೆ ಎಂದು ಹೇಳಿದರು. ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ರಾಜ್ಯ ವ್ಯವಸ್ಥಾಪಕ ನಿರ್ದೇಶಕರಾದ ದಿಲೀಪ್ ಕುಮಾರ್ ಮಾತನಾಡಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ವಿವಿಧ ಕೌಶಲ್ಯಗಳು ಯುವ ಸಬಲೀಕರಣ ಕಾರ್ಯಕ್ರಮ ಅತೀ ಅವಶ್ಯಕವಾಗಿದೆ ಮತ್ತು ಅಗತ್ಯವಾಗಿದೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬದುಕಿನ ಬದಲಾವಣೆ ಮಾಡಲು ಉತ್ತೇಜನ ನೀಡುವಲ್ಲಿ ಪ್ರಯೋಜನಕಾರಿಯಾಗಿದೆ ಕಲಿಕೆಯ ಭಾಷೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಜೊತೆಗೆ ತಮ್ಮ ಜೀವನ ರೂಪಿಸಿಕೊಳ್ಳುವ ಮಾರ್ಗವಾಗಿದೆ ಎಂದು ಹೇಳಿದರು. ಈ ಕಾರ್ಯಗಾರದಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶಾಶು, ಜಿಲ್ಲ ಉದ್ಯೋಗ ವಿನಿಮಯ ಅಧಿಕಾರಿ ಹಟ್ಟಪ್ಪ,ರಾಜ್ಯ ನೋಡಲ್ ಅಧಿಕಾರಿ ದೀಪಿಕಾ ವೆಂಕಟೇಶ್, ಭಟ್ರಹಳ್ಳಿ ಧನಂಜಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಶಿಕ್ಷಣಾರ್ಥಿಗಳು ಹಾಜರಿದ್ದರು.