ಬಳ್ಳಾರಿ : ನಗರದಲ್ಲಿ ನಾಳೆ ಸಂಜೆ ಚಿಗುರು ಕಲಾ ತಂಡ ಇಬ್ರಾಹಿಂಪುರ ಬಳ್ಳಾರಿ ತಾಲೂಕು ಬಳ್ಳಾರಿ ಜಿಲ್ಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಜಾನಪದ ಝೇಂಕಾರ ಸಾಂಸ್ಕೃತಿ ಕಾರ್ಯಕ್ರಮ 2023 ದಿನಾಂಕ 30 1 2023 ರಂದು ಸೋಮವಾರ ಸಂಜೆ 6.30ಕ್ಕೆ ಶ್ರೀ ರಮಲಾದೇವಿ ದೇವಸ್ಥಾನ ಆವರಣ ಬಂಡೆ ಹಟ್ಟಿ ಬಳ್ಳಾರಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಗಳು ಕಲಾ ಪೋಷಕರುಗಳು ಕಲಾ ಅಭಿಮಾನಿಗಳು ಊರಿನ ಗುರು ಹಿರಿಯರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಲಿಗೆ ವದನ ಡೊಳ್ಳು ಕುಣಿತ ರಂಗಗೀತೆ ಪಟ ಕುಣಿತ ತೊಗಲ್ ಗೊಂಬೆ ನಾಟಕ ಕೀಚಕ ಮತ್ತು ವಸುಂದ ದೇವಿ ಬಯಲಾಟ ಇನ್ನು ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ ಎಂದು ತಂಡದ ಅಧ್ಯಕ್ಷರಾದ ಶ್ರೀ ಎಸ್.ಎಮ್.ಹುಲುಗಪ್ಪ ಪತ್ರಿಕಾ ಪ್ರಕಟಣೆ ತಿಳಿಸಿದರು.