ಬಳ್ಳಾರಿ : ಪ್ರತಿಯೊಬ್ಬ ಕಟ್ಟಡ ಕಾರ್ಮಿಕರೂ ಸಹ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದಲ್ಲಿ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಸಾಧ್ಯ, ಅದ್ದರಿಂದ ಪ್ರತಿ ಗ್ರಾಮದಲ್ಲಿ ಇರುವಂತಹ ಎಲ್ಲಾ ಕಟ್ಟಡ ಕಾರ್ಮಿಕರನ್ನು ಸಂಘಟಿಸುವ ನಿಟ್ಟಿನಲ್ಲಿ ಗ್ರಾಮ ಘಟಕ, ಮಹಿಳಾ ಕಟ್ಟಡ ಕಾರ್ಮಿಕರನ್ನು ಸಹ ಸೇರಿಸಿ ವಿಶೇಷ ಮಹಿಳಾ ಘಟಕವನ್ನು ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ತಾಲೂಕು ಅಧ್ಯಕ್ಷ ವಿ.ದೇವಣ್ಣ ತಿಳಿಸಿದರು.
ಅವರು ತಾಲೂಕಿನ ಹೊಸ ದರೋಜಿಯಲ್ಲಿ ನೂತನ ಮಹಿಳಾ ಕಟ್ಟಡ ಕಾರ್ಮಿಕ ಘಟಕವನ್ನು ಉದ್ಘಾಟಿಸಿ ಮಾತನಾಡಿ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಕೆಲಸವನ್ನು ಅದರಲ್ಲು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮಾಡುವ ನಾವುಗಳೆಲ್ಲರೂ ಸಹ ಇಡೀ ಸಮಾಜಕ್ಕೆ ಸೂರು ನಿರ್ಮಿಸುತ್ತೇವೆ, ಅದರೆ ನಮಗೆ ಸೂರು ಇಲ್ಲವಾಗಿದೆ, ಅದ್ದರಿಂದ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದ್ದೇ ಅದರೆ ಸರ್ಕಾರ ನಮಗೂ ಸಹ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತದೆ ಅದ್ದರಿಂದ ಸಂಘಟಿತರಾಗಿ ಇಂದು ತಾಲೂಕಿನಲ್ಲಿ ಪ್ರಥಮ ಮಹಿಳಾ ಘಟಕ ಪ್ರಾರಂಭಿಸುತ್ತಿರುವುದು ಹೆಮ್ಮೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಕಟ್ಟಡ ಕಾರ್ಮಿಕರ ನೂತನ ಉಪ ಸಮಿತಿ ಆಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ ವಿ ಶಾಂತಮ್ಮ ಉಪಾಧ್ಯಕ್ಷರು ಗಳಾಗಿ ಪಾರ್ವತಿ ಮಾಲೂನಿ ಬಿ ಕಾರ್ಯದರ್ಶಿಯಾಗಿ ಬಸಮ್ಮ ಸಹ ಕಾರ್ಯದರ್ಶಿಗಳಾಗಿ ಹೊನ್ನಮ್ಮ ಲಲಿತಮ್ಮ ಸಮಿತಿ ಸದಸ್ಯರುಗಳಾಗಿ 15 ಜನರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಕೆ ದೇವಣ್ಣ ದರೋಜಿ ಘಟಕದ ಕಾರ್ಯದರ್ಶಿಯಾದ ವಿ ದೇವರಾಜ್ ಉಪಸ್ಥಿತರಿದ್ದರು