ಬಳ್ಳಾರಿ : ಬಳ್ಳಾರಿ ನಗರದ 30ನೇ ವಾರ್ಡ್ನ ವ್ಯಾಪ್ತಿಗೆ ಬರುವ ವಟ್ಟಪ್ಪಗೇರಿಯಲ್ಲಿ ನಿನ್ನೆ ರಾತ್ರಿ ಏಕಾಏಕಿ 30 ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಮಕ್ಕಳು ಸೇರಿದಂತೆ ಮಹಿಳೆಯರ ಮೇಲೂ ಈ ನಾಯಿಗಳು ದಾಳಿ ಮಾಡಿವೆ.
ಈ ಪರಿಣಾಮವಾಗಿ ಏಳು ಜನರು ಗಂಭೀರ ಗಾಯಗೊಂಡಿದ್ದು, ಇನ್ನುಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ನಗರದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವಿಮ್ಸ್ ಆಸ್ಪತ್ರೆಗೆ ವಿಮ್ಸ್ ನಿರ್ದೇಶಕ ಡಾ.ಟಿ. ಗಂಗಾಧರ ಗೌಡ. ಡಿಎಚ್ ಓ ಜನಾರ್ದನ್. ಪಾಲಿಕೆಯ ಆಯುಕ್ತರು ಮಾತನಾಡಿದ ಅವರು ಬೀದಿ ನಾಯಿಗಳು ಹೆಚ್ಚಾಗದಿರಲು. ಜನರಿಗೆ ಮನೆಯ ಹೊರಗೆ ಆಹಾರ ಹಾಕದಂತೆ ಮನವಿ ಮಾಡಿದ್ದೇವೆ . ನಿನ್ನೆ ಜನರನ್ನು ಕಚ್ಚಿದ ಹುಚ್ಚು ನಾಯಿ ಹುಡುಕಾಟಕ್ಕೆ 15 ಜನರು ತೊಡಗಿದ್ದಾರೆ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೀದಿ ನಾಯಿಗಳನ್ನು ಹಿಡಿಯಲು ಪಾಲಿಕೆಯ ಸಿಬ್ಬಂದಿಗಳು ಮುಂದಾಗಿದ್ದಾರೆ. ಈ ಕಾರ್ಯವು ಇಂದು ಬೆಳಗ್ಗೆಯಿಂದಲೇ ನಗರದಲ್ಲಿ ಬೀದಿ ನಾಯಿಗಳ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದರು.