ಬಳ್ಳಾರಿ : ಶಿವರಾತ್ರಿ ಅಂಗವಾಗಿ ಬೇವಿನ ಹಳ್ಳಿಯಿಂದ ಚಳ್ಳಗುರ್ಕಿ ಎರ್ರಿತಾತ ಮಠದರೆಗೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಇಂದು ಪಾದಯಾತ್ರೆ ನಡೆಸಿದರು.
ಕ್ರೈಸ್ತ ಪಾದ್ರಿ, ಮುಸ್ಲಿಂ ಮೌಲ್ವಿ, ಹಿಂದೂ ಸ್ವಾಮೀಜಿಯವರ ಜೊತೆಗೂಡಿ ಹೆಜ್ಜೆ ಹಾಕಿದರು.
ಈಶ್ಚರ ಅಲ್ಲ ತೇರೆ ನಾಮ್ ಘೋಷ ವಾಕ್ಯದೊಂದಿಗೆ ಪಾದಯಾತ್ರೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ಚುನಾವಣೆ ಪಾದಯಾತ್ರೆ ಅಲ್ಲ ಶಾಂತಿ ಸಂಕೇತಕ್ಕೆ ನಡೆಸುತ್ತಿರೋ ಪಾದಯಾತ್ರೆ. ಇದಕ್ಕೆ ರಾಜಕೀಯ ಬಣ್ಣ ಬೇಡ ಎಂದರು. ಅವರೊಂದಿಗೆ ಅವರ ನೀರಾರು ಬೆಂಬಲಿಗರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಯಾರು ಬಂದರೂ ಅಷ್ಟೇ:
ಅಮಿತ್ ಷಾ ಅವರು ಸಂಡೂರಿಗೆ ಬರೋ ವಿಚಾರದ ಬಗ್ಗೆ ಪ್ರಸ್ತಾಪಿಸಿದ ನಾಗೇಂದ್ರ. ಯಾರುಬಂದರೂ ಅಷ್ಟೇ, ಯಾವುದೇ ಬದಲಾವಣೆ ಅಗಲ್ಲ. ಯಾರೇ ಬಂದ್ರು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು ತಡೆಯಲಾಗಲ್ಲ ಎಂದರು.
ಅಶ್ವಥ್ ನಾರಾಯಣ ಅವಿವೇಕಿ
ಮಾಜಿ ಮುಖ್ಯಮಂತ್ರಿ, ಸಿದ್ದರಾಮಯ್ಯ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಸಚಿವ ಅಶ್ವಥ್ ನಾರಾಯಣ ಒಬ್ಬ ಅವಿವೇಕಿ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿದ್ದಾರೆ.
ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಬಿಜೆಪಿಯಲ್ಲಿ ಸಮಾಜದಲ್ಲಿ ಶಾಂತಿ ಕದಡುವ ಮತ್ತು ಅವಿವೇಕ ತನದ ಮಾತುಗಳು ಹೆಚ್ಚಾಗಿದೆ. ಟೀಕೆ ಮಾಡೋದು ಸಹಜ, ಮಾತಿನ ಭರದಲ್ಲಿ ಈ ರೀತಿ ಹೊಡಿ ಬಡಿ ಕಡಿ ಎನ್ನುವ ಮಾತು ಸಂಸ್ಕೃತಿ ಸರಿಯಲ್ಲ. ಇದು ಅವಿವೇಕ ತನದ ಪರಮಾವಧಿ ಯಾಗಿದೆ. ವಿಷಾದ ವ್ಯಕ್ತಪಡಿಸೋ ಮೂಲಕ ಅವರಿಗೆ ತಪ್ಪಿನ ಅರಿವಾಗಿದೆಂದರು