18.3 C
New York
Wednesday, November 6, 2024

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಬಳ್ಳಾರಿ ಶಾಖೆಯ ನೂತನ ಅಧ್ಯಕ್ಷರಾಗಿ : ನಾಗನಗೌಡ ಆಯ್ಕೆ

ಬಳ್ಳಾರಿ : ನಗರದ ರಾಘವೇಂದ್ರ ಕಾಲೋನಿಯಲ್ಲಿರುವ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ, ಬಳ್ಳಾರಿ ಶಾಖೆಯ 2023-24 ರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಶಾಖೆಯ ನೂತನ ಅಧ್ಯಕ್ಷರಾಗಿ ಸಿರುಗುಪ್ಪ ನಗರದ ಕೆ. ನಾಗನಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಗೂ ಉಪಾಧ್ಯಕ್ಷರಾಗಿ ವೆಂಕಟ ನಾರಾಯಣ, ಕಾರ್ಯದರ್ಶಿಯಾಗಿ ಕೆ. ಪುರುಷೋತ್ತಮ ರೆಡ್ಡಿ, ಖಜಾಂಚಿಯಾಗಿ ಕೆ. ವಿ. ಸ್ವಪ್ನ ಪ್ರಿಯ, ವಿಧ್ಯಾರ್ಥಿ ವಿಭಾಗದ (ಎಸ್.ಐ.ಸಿ.ಎ.ಎಸ್.ಎ) ಅಧ್ಯಕ್ಷರಾಗಿ ವಿನೋದ್ ಕುಮಾರ್ ಬಾಗ್ರೇಚ ಮತ್ತು ಸದಸ್ಯರಾಗಿ ಗಜರಾಜ ಡಿ ಅವರು ಆಯ್ಕೆಯಾಗಿ ಇಂದೇ ಪದಗ್ರಹಣ ಸ್ವೀಕರಿಸಿದರು.
2022-23 ರ ಸಾಲಿನ ಅಧ್ಯಕ್ಷ ವಿನೋದ್ ಬಾಗ್ರೇಚ ಇವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ. ನಾಗನಗೌಡ ಕಅವರಿಗೆ ಆಧಿಕಾರವನ್ನು ಹಸ್ತಾಂತರಿಸಿದರು
ಈ ಸಂದರ್ಭದಲ್ಲಿ ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ (ಚೆನ್ನೈ) ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಪನ್ನರಾಜ್ ಎಸ್, ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ ಬಳ್ಳಾರಿ ಶಾಖೆಯ ಮಾಜಿ ಅಧ್ಯಕ್ಷರುಗಳಾದ ಎಸ್.ಸಿ.ಬಾಗ್ರೇಚ, ಬಿ.ಕೆ. ಅನಿಲ್ ಕುಮಾರ್, ರಾಜಶೇಖರ್, ಲಕ್ಷ್ಮಿನಾರಾಯಣ, ಭರತ್ ಕುಮಾರ್ ಗುಪ್ತ, ಸಿದ್ದರಾಮೇಶ್ವರ ಗೌಡ, ರಾಜೇಶ್ ಬಾಗ್ರೇಚ, ಎರ್ರಿಸ್ವಾಮಿ ಸಿ, ಕಿರಣ್ ಕುಮಾರ್ ಜೈನ್, ಹೊನ್ನೂರು ಸ್ವಾಮಿ, ಪ್ರಸನ್ನ ಕುಮಾರ್ ಪಾಟೀಲ್ ಮತ್ತು  ಅಕ್ಕಿ ಬಸವರಾಜ್ ಹಾಗೂ ಶಾಖೆಯ ಎಲ್ಲಾ ಸದಸ್ಯರು ಉಪಸ್ತಿತರಿದ್ದರು ಎಂದು ಕಾರ್ಯದರ್ಶಿ ಕೆ.ಪುರುಷೋತ್ತಮರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles