ಬಳ್ಳಾರಿ : ನಗರದ ಆರಾಧ್ಯ ದೇವತೆ ಕನಕ ದುರ್ಗಮ್ಮ ದೇವಸ್ಥಾನದ ನಾಲ್ಕು ಹುಂಡಿಗಳಲ್ಲಿ ಸಂಗ್ರಹವಾಗಿದ್ದ ಹಣದ ಎಣಿಕೆ ನಿನ್ನೆ ಮಾಡಲಾಗಿದ್ದು 44 ಲಕ್ಷದ 78 ಸಾವಿರದ 730 ರೂ ದೊರೆತಿದೆ.
ಕಳೆದ ನವೆಂಬರ್ 9 ರಿಂದ ಫೆಬ್ರವರಿ 22 ರವರೆಗಿನ ಅವಧಿಯಲ್ಲಿ ಈ ಹಣ ಸಂಗ್ರಹವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.