ಬಳ್ಳಾರಿ ; ಮಾನ್ಯ ಶಾಸಕ ಬಿ.ನಾಗೇಂದ್ರ ಅವರ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಅವರ ಗ್ರಾಮದ ಬೆಳವಣಿಗೆಗಾಗಿ ಹಲಕುಂದಿ ಗ್ರಾಮದ ಬಿಜೆಪಿ ಪಕ್ಷದ ನೂರಾರು ಮುಖಂಡರು ಪಕ್ಷವನ್ನು ತೊರೆದು ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಿ.ನಾಗೇಂದ್ರ ಅವರ ನೇತೃತ್ವದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬಿಜೆಪಿ ಪಕ್ಷದ ಬಳ್ಳಾರಿ ಗ್ರಾಮಾಂತರ ಓಬಿಸಿ ಮೋರ್ಚಾ ಉಪಾಧ್ಯಕ್ಷರಾದ ಕೆ.ಎಂ ವಿಜಯ್ ಕುಮಾರ್, ಅವರೊಂದಿಗೆ ಹಲಕುಂದಿ ಗ್ರಾಮದ ಬಿಜೆಪಿ ಪಕ್ಷದ ನೂರಾರು ಮುಖಂಡರಾದ ಎಚ್.ಸಿ ಶಿವಕುಮಾರ್, ತಿಮ್ಮಾರೆಡ್ಡಿ, ಕೆ.ಜಿ ಉಮಾಪತಿ, ಕೆ. ಪ್ರಸನ್ನ, ಕೆ.ಅನಿಲ್ ಕುಮಾರ್, ಕೆ. ಗಾದಿಲಿಂಗ, ಕೆ.ಜಿ ಗಂಗಾಧರ, ಕೆ. ಹನುಮಂತಪ್ಪ, ನಾಗೇಶ್, ಶಂಗಪ್ಪ, ಜಗದೀಶ್, ಲಕ್ಷ್ಮಣ, ಹೊನ್ನೂರಸ್ವಾಮಿ ಎನ್, ಕ್ರಿಷ್ಣ, ಅಂಜಿನಪ್ಪ, ರಾಮಾಂಜನಿ, ರಾಜ, ಶೇಕ್ಷವಲಿ, ಮಾರಿ, ಗಂಗಾಧರ್, ಫಕೀರಪ್ಪ, ರಮೇಶ್, ನವೀನ್, ಹುಲಿಗೇಶ್, ಹೊನ್ನೂರಸ್ವಾಮಿ, ವೀರೇಶ್, ಮಾರೆಣ್ಣ, ಹನುಮಂತರಾಯ, ಈಶ್ವರ್, ರಾಘು, ದೇವೇಶ್, ತಿಪ್ಪಣ್ಣ, ನಾಗರಾಜ್, ಅಂಜಿ, ಹೊನ್ನೂರಸ್ವಾಮಿ, ಮಲ್ಲಿ, ಗಿರಿ, ದೇವರಾಜ್, ಲಕ್ಷ್ಮೀಪತಿ, ಶಿವಪ್ಪ, ಹುಲ್ಲಪ್ಪ,
ಅಂಬರೀಶ್, ಹುಲೇಶ್, ಬರ್ಮಾ, ಯೋಗೇಶ್, ಜೀವನ್ ಕುಮಾರ್, ಸೋಮರಾಜ್, ರಾಮು, ಹೇಮಂತ, ವಿರುಪಾಕ್ಷಿ, ದುರ್ಗೇಶ್, ರಘು, ಎಸ್.ಅಶೋಕ್, ಹುಲುಗಪ್ಪ, ಪ್ರಭು, ಭರ್ಮಪ್ಪ, ಶಂಕ್ರಿ ಹೊನ್ನೂರ್ ಸ್ವಾಮಿ, ಹೇಮಣ್ಣ, ಲಕ್ಷ್ಮಣ, ಮುಕೇಶ್, ಅಶೋಕ್.ಎಲ್, ವಿನೋದ್, ನೂರಾರು ಬಿಜೆಪಿ ಮುಖಂಡರನ್ನು ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಿ.ನಾಗೇಂದ್ರ ಅವರು ತುಂಬು ಹೃದಯದಿಂದ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಬಳಿಕ ಮಾತನಾಡಿದ ಮಾನ್ಯ ಶಾಸಕ ಬಿ.ನಾಗೇಂದ್ರ ಅವರು ಗ್ರಾಮೀಣ ಕ್ಷೇತ್ರದಲ್ಲಿ ವಿವಿಧ ಪಕ್ಷಗಳಿಂದ ಬಹಳಷ್ಟು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಬರುವವರಿದ್ದಾರೆ. ಜನರ ಸೇವೆ ಮಾಡಲು ಆಸಕ್ತಿ ಇರುವವರು ಯಾರು ಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಬರಬಹುದು ಎಂದು ಕರೆ ನೀಡಿದರು.
ನಮ್ಮ ಪಕ್ಷ ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ, ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ ಎರೆಡು ಸಾವಿರ ರೂ, ಪ್ರತಿ ಕುಟುಂಬಕ್ಕೆ ಮಾಸಿಕ ಎರೆಡು ನೂರು ಯುನೀಟ್ ವಿದ್ಯುತ್ ಉಚಿತವಾಗಿ ನೀಡಲಿದೆ. ಅಲ್ಲದೆ ಮಾಸಿಕ ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ ನೀಡಲಿದೆಂದು ಗ್ಯಾರೆಂಟೆ ಕೊಡುವುದಾಗಿ ಹೇಳಿದರು.
ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದೇ ಬರುತ್ತೆ ಬಂದರೆ ನಾವೇನು ಗ್ಯಾರೆಂಟಿ ಕೊಡುತ್ತೇವೆಂದು ಮಾನ್ಯ ಶಾಸಕ ಬಿ.ನಾಗೇಂದ್ರ ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಂತರ ಮುಖಂಡರು ನಾವು ಮಾನ್ಯ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ನಿಮ್ಮ ಬೆಂಬಲಕ್ಕಾಗಿ ಗ್ರಾಮದ ಬೆಳವಣಿಗೆಗಾಗಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಸೇರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಹಲಕುಂದಿ ಗ್ರಾಮ ಪಂಚಾಯತಿ ಸದಸ್ಯರಾದ ಕೆ.ಕೇಶವ, ಕಟ್ಟೆ ಬಸಪ್ಪ, ಬುಡನ್ ಸಾಬ್, ಹೊನ್ನೂರಮ್ಮ ಗ್ರಾಮದ ಕಾಂಗ್ರೆಸ್ ಮುಖಂಡರಾದ ಭೀಮನಗೌಡ, ಎಚ್.ಎಂ ತಿಮ್ಮನಗೌಡ, ಮಂದಾಲಪ್ಪ, ಕೆ.ಜಿ ಗಾದಿಲಿಂಗಪ್ಪ, ಎನ್.ಶಿವರಾಮ ಅಲ್ಲಂ ಭಾಷಾ, ಕೆ.ಸುರೇಶ್, ವೀರಾರೆಡ್ಡಿ, ದಾದುಸಾಬ್, ಎರ್ರಿಸ್ವಾಮಿ, ಗುಂಡಪ್ಪ, ಪರಶುರಾಮ, ಕುಮಾರ, ಶಿವಮೂರ್ತಿ, ಎನ್.ಗವಿಸಿದಪ್ಪ, ಎಲ್ಲಾರ್ತಿ ಮಂಜುನಾಥ, ಅಂಜಿ, ಸೇರಿದಂತೆ ಇನ್ನೂ ಅನೇಕ ನಾಯಕರು ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.