9.2 C
New York
Wednesday, November 13, 2024

ಚಿಗುರು ಕಲಾ ತಂಡದಿಂದ ಅಸ್ಪೃಶ್ಯತೆ ನಿವಾರಣೆ ಕುರಿತು ಸಾಮಾಜಿಕ ಅರಿವು ಬೀದಿ ನಾಟಕ

ಬಳ್ಳಾರಿ : ಬಳ್ಳಾರಿ ಸಂಗನಕಲ್ಲು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಕರ್ನಾಟಕ ಸರ್ಕಾರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರು ವತಿಯಿಂದ ನಡೆದ ಕಾರ್ಯಕ್ರಮ ಅಸ್ಪೃಶ್ಯತಾ ನಿವಾರಣ ಕುರಿತು ಸಾಮಾಜಿಕ ಅರಿವು ಬೀದಿ ನಾಟಕ ಕಾರ್ಯಕ್ರಮ ಮಾಡಲಾಯಿತು, ಈ ಕಾರ್ಯಕ್ರಮವನ್ನು ಸಮಾಜ ಸೇವಕರಾದ ಹಿರಿಯ ಸಂಗನಕಲ್ಲು ಮೇಟಿ ಗೌಡ್ರು ಹಾಗೂ ಗ್ರಾಮದ ಎಲ್ಲ ಹಿರಿಯರು ಸೇರಿ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು ,ಗ್ರಾಮದ ಹಿರಿಯರು ಯುವಕರು ಎಲ್ಲರೂ ಸೇರಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಉದ್ಘಾಟನೆ ಮಾಡಿದ ಗೌಡ್ರು ಇಂತಹ ಅನಿಷ್ಟ ಪದ್ಧತಿ ಹೋಗಲಾಡಿಸಬೇಕು ನಾವೆಲ್ಲರೂ ಸಹ ಬಾಳ್ವೆಯಿಂದ ಜಾತಿಭೇದ ಅಳಿಸಿ ಒಂದಾಗಿ ಬಾಳಿ ಎಂಬ ವಾಕ್ಯ ಹೇಳಿದರು ನಾವೆಲ್ಲಾ ಪ್ರೀತಿಯಿಂದ ಬದುಕೋಣ ಬುದ್ಧ ಬಸವಣ್ಣ ಡಾ. ಬಿಆರ್ ಅಂಬೇಡ್ಕರ್ ಕನಕದಾಸರು ವಚನಕಾರರು ದಾಸರು ಕವಿಗಳು ಸಮಾಜದ ಹೋರಾಟಗಾರರು ವಿಜ್ಞಾನಿಗಳು ಅವರಂತೆ ನಾವು ಈ ಜಾತಿ ಪದ್ಧತಿಯನ್ನು ಹೊಡೆದಾಕಿ ಎಂದು ಊರಿನ ಜನರಿಗೆ ತಿಳಿಸಿದರು ನಾವು ಸಾರ್ವಜನಿಕ ಜಾಗಗಳಲ್ಲಿ ಜಾತಿ ನಿಂದನೆ ಮಾಡಬಾರದು ಅಂದರೆ ಹೋಟೆಲ್ಗಳಲ್ಲಿ ಕಟಿಂಗ್ ಶಾಪ್ ಗಳಲ್ಲಿ ದೇವಸ್ಥಾನಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಪಾರ್ಕುಗಳಲ್ಲಿ ಅಂಗಡಿಗಳಲ್ಲಿ ಜಾತಿ ನಿಂದನೆ ಮಾಡಬಾರದು ಎಂದು ತಮ್ಮ ಉದ್ಘಾಟನೆ ನುಡಿಯ ಮೂಲಕ ತಿಳಿಸಿದರು ನಂತರ ಚಿಗುರು ಕಲಾತಂಡದ ಮುಖ್ಯಸ್ಥನಾದ ಹುಲುಗಪ್ಪನವರು ಮಾತನಾಡಿ ಜಾತಿ ನಿಂದನೆ ಮಾಡಿದರೆ ಅಟ್ಟ್ರಸಿಟಿ ಕೇಸ್ ಅಡಿಯಲ್ಲಿ ಕೇಸ್ ದಾಖಲೆ ಮಾಡುತ್ತಾರೆ ದೌರ್ಜನ್ಯ ಕಾಯ್ದೆ 1989 ಪ್ರಕಾರ ಅನುಚ್ಛೇದ 15 ,16, 17 ,21 ,23, 43, 45 ,46 ,243, 330, 332, 338, 340, 341 ,342 , ವಿಧಿಗಳು ಅನ್ವಯವಾಗುತ್ತವೆ ಎಂದು ಸಂಗನಕಲ್ಲು ಗ್ರಾಮದ ಪ್ರತಿಯೊಬ್ಬರಿಗೂ ಜಾತಿ ನಿಂದನೆ ಕಾಯ್ದೆಗಳ ಬಗ್ಗೆ ತಿಳಿಸಿಕೊಟ್ಟರು .ಬೀದಿ ನಾಟಕ ನಡೆಸಿಕೊಟ್ಟ ಕಲಾವಿದರಾದ ಹುಲುಗಪ್ಪ ಎಸ್ ಎಂ, ಬಿ. ಆನಂದ ,ಎಚ್‌ಜಿ ಸುಂಕಪ್ಪ ,ಹೇಮಂತ್, ಎಲ್ ಕೊಟ್ರೇಶ್, ಮಹೇಶ್ ,ಅಶ್ವಿನಿ ಇನ್ನು ಮುಂತಾದ ಕಲಾವಿದರು ಜಾತಿಭೇದ ಅಳಿಸಿ ಒಂದಾಗಿ ಬಾಳಿ ಎಂಬ ಬೀದಿ ನಾಟಕ ಮತ್ತು ಜಾಗೃತಿ ಗೀತೆಗಳು ಚಿಗುರು ಕಲಾ ತಂಡ ಇಬ್ರಾಹಿಂಪುರ್ ಬಳ್ಳಾರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು ಎಂದು ಈ ಮೂಲಕ ತಿಳಿಸಿದ್ದೇವೆ ವಂದನೆಗಳೊಂದಿಗೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles