ಕೂಡ್ಲಿಗಿ: ಪಟ್ಟಣದಲ್ಲಿ ಬುಧವಾರ ಬಿಜೆಪಿ ವತಿಯಿಂದ ಬಿಜೆಪಿಯಿಂದ ವಿಜಯ ಸಂಕಲ್ಪ ಯಾತ್ರೆ ಅದ್ದೂರಿಯಾಗಿ ನೆರವೇರಿತು. ಪಟ್ಟಣದ ಪ್ರವಾಸಿ ಮಂದಿರ ಆವರಣದಿಂದ ಹೊರಟ ಯಾತ್ರೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ವರೆಗೆ ರೋಡ್ ಶೋ ನಡೆಯಿತು. ಪಕ್ಷದ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಿದ್ದಾರೆ. ವಿಜಯ ಸಂಕಲ್ಪ ಯಾತ್ರೆ ನಡೆಯುತ್ತಿದ್ದ ಸ್ಥಳಗಳಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಹೂವಿನ ಮಳೆಗೈದರು. ವಿಜಯ ಸಂಕಲ್ಪ ಯಾತ್ರೆಯಲ್ಲಿ ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ಸಂಸದರು ವೈ ದೇವೇಂದ್ರಪ್ಪ, ಜಿಲ್ಲಾ ಅಧ್ಯಕ್ಷರಾದ ಚನ್ನಬಸವನಗೌಡ, ತಾಲೂಕು ಮಂಡಲ ಅಧ್ಯಕ್ಷ ಕೆ ಚೆನ್ನಪ್ಪ, ಎಸ್ ಟಿ ಮೋರ್ಚಾ ರಾಜ್ಯ ಕೋಶ ಅಧ್ಯಕ್ಷರಾದ ಬಂಗಾರು ಹನುಮಂತು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯ ಪಾಪಣ್ಣ, ಬಿಜೆಪಿ ಮುಖಂಡರಾದ ತಿಪ್ಪೇಸ್ವಾಮಿ ಗುಂಡು ಮುಣಗು, ಪ್ರಕಾಶ್, ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಎಸ್ ದುರ್ಗೇಶ್, ಪಿ ಮಂಜುನಾಥ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಗುಳ್ಳಿಗಿ ವೀರೇಶ್ ಯುವ ಮೋರ್ಚಾ ಅಧ್ಯಕ್ಷರು, ಬಿಜೆಪಿ ನಗರ ಘಟಕ ಅಧ್ಯಕ್ಷರು ನಾರಾಯಣ, ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಮುಖಂಡರು, ಮಹಿಳೆಯರು ಸಾರ್ವಜನಿಕರು ಸೇರಿದಂತೆ ಅನೇಕರು ಇದ್ದರು. ಇನ್ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಯಿತು. ಮಹಿಳೆಯರಿಂದ ಕುಂಭಮೇಳ ವಿವಿಧ ವಾದಿಗಳೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಬೈಕ್ ಸವಾರರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.
ವರದಿ: ಮಂಜುನಾಥ ಹೂಡೇಂ