18.3 C
New York
Wednesday, November 6, 2024

ನನ್ನ ವಿರುದ್ಧ ಚುನಾವಣೆಯಲ್ಲಿ ಯಾರೇ ಬಂದರೂ ಅವರ ವಿರುದ್ಧ ಸ್ಪರ್ಧಿಸಿ, ಧರ್ಮದಿಂದ ನಾನು ಗೆದ್ದು ಮತ್ತೊಮ್ಮೆ ಶಾಸಕನಾಗಿ ಬರುತ್ತೇನೆ; ಗ್ರಾಮೀಣ ಶಾಸಕ : ಬಿ.ನಾಗೇಂದ್ರ

ಬಳ್ಳಾರಿ : ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಲಕುಂದಿ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ “ಶಶಿರೇಖಾ ಪರಿಣಯ ಅರ್ಥಾತ್ ಬಲರಾಮನ ಗರ್ವಭಂಗ” ಬಯಲಾಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬಯಲಾಟ ಕಾರ್ಯಕ್ರಮಕ್ಕೆ ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಿ.ನಾಗೇಂದ್ರ ರವರು ಬುಧವಾರ ತಡರಾತ್ರಿ 1 ಗಂಟೆಗೆ ಭಾಗವಹಿಸಿ ನಾಟಕವನ್ನು ವೀಕ್ಷಿಸಿದರು. ಅಲ್ಲದೆ ಈ ಬಯಲಾಟ ಪ್ರದರ್ಶನಕ್ಕೆ 51 ಸಾವಿರ ರೂಪಾಯಿಗಳನ್ನು ದೇಣಿಗೆ ನೀಡುವ ಮೂಲಕ ಕಲಾವಿದರ ಪ್ರೀತಿಗೆ ಪಾತ್ರರಾಗಿದ್ದಾರೆ.

ಮಾನ್ಯ ಶಾಸಕರು ಮಾತನಾಡಿ ನಮ್ಮ ಹಳ್ಳಿಗರು ಸಾಂಪ್ರದಾಯಿಕ ನಾಟಕಗಳನ್ನು ನೋಡುವ ಮೂಲಕ ನಮ್ಮ ಸಂಪ್ರದಾಯಗಳನ್ನು ಉಳಿಸುತ್ತಿದ್ದಾರೆ. ಮತ್ತು ಬಯಲಾಟಗಳನ್ನು ಆಡುವುದರಿಂದ ಎಷ್ಟೋ ಕಲಾವಿದ ಕುಟುಂಬಗಳು ಬಂದ ಹಣದಿಂದ ಜೀವನ ಸಾಗಿಸುತ್ತಿದ್ದಾರೆ ಇಂತಹ ಕಲಾವಿದರಿಗೆ ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕಾಗಿದೆ ಎಂದರು.

ಈ ಬಯಲಾಟದ ನಾಟಕದಲ್ಲಿ ಸಾರಾಂಶವನ್ನು ತಾವೆಲ್ಲರೂ ನೋಡಿ ಅರಿತು ಬದುಕಬೇಕು ಏಕೆಂದರೆ ಈ ನಾಟಕದಲ್ಲಿ ಬಲರಾಮ ಕೊಟ್ಟ ಮಾತನ್ನು ತಪ್ಪಿದ್ದಕ್ಕೆ ಘಟಧಜ ಶಶಿರೇಖಾ ಮತ್ತು ಅಭಿಮನ್ಯು ಅವರ ವಿವಾಹವನ್ನು ಮಾಡುವ ಮೂಲಕ ಬಲರಾಮನ ಗರ್ವಭಂಗ ಆಗುವ ದೃಶ್ಯ ಇದರಲ್ಲಿ ಬರುತ್ತದೆ. ಆದ್ದರಿಂದ ಮನುಷ್ಯನು ಜೀವನದಲ್ಲಿ ಯಾರಿಗೆ ಆಗಲಿ ಮಾತು ಕೊಟ್ಟ ಮೇಲೆ ತಪ್ಪಬಾರದು. ಅದೇ ರೀತಿ ನಾನು ನಿಮಗೆ ಈಗ ಮಾತು ಕೊಡುತ್ತಿದ್ದೇನೆ. 2023ರ ಚುನಾವಣೆಯಲ್ಲಿ ನನ್ನ ವಿರುದ್ಧ ಯಾರೇ ಬಂದರೂ ಅವರ ವಿರುದ್ಧ ಸ್ಪರ್ಧಿಸಿ ನಿಮ್ಮ ಆಶೀರ್ವಾದದೊಂದಿಗೆ ಧರ್ಮದಿಂದ ನಾನು ಗೆದ್ದು ಮತ್ತೊಮ್ಮೆ ಶಾಸಕನಾಗಿ ಬರುತ್ತೇನೆ ಎಂದರು.

ಗ್ರಾಮೀಣ ಕ್ಷೇತ್ರ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಅಭಿವೃದ್ಧಿ ಪಡಿಸುವುದು ನನ್ನ ಕಾಯಕ. ತಮಗೆ ಕಷ್ಟ ಬಂದಾಗ ಮಧ್ಯರಾತ್ರಿಯಲ್ಲಿ ಸಹ ನಾನು ನಿಮ್ಮ ಸೇವೆ ಮಾಡಲು ಸದಾ ಸಿದ್ದನಾಗಿರುತ್ತೇನೆ. ಮುಂಬರುವ ದಿನಗಳಲ್ಲಿ ಕೂಡ ನಿಮ್ಮ ಆಶೀರ್ವಾದ, ಪ್ರೀತಿ ನನ್ನ ಮೇಲೆ ಇದೇ ರೀತಿ ಇರಲೆಂದು ಮಾನ್ಯ ಶಾಸಕ ಬಿ.ನಾಗೇಂದ್ರ ಮನವಿ ಮಾಡಿದರು.

ಇಂದು ತಮಗೆ ನಮ್ಮ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ, ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ 2000 ರೂ, ಪ್ರತಿ ಕುಟುಂಬಕ್ಕೆ ಮಾಸಿಕ 200 ಯುನೀಟ್ ವಿದ್ಯುತ್ ಉಚಿತವಾಗಿ ನೀಡಲಿದೆ. ಮಾಸಿಕ ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ ನೀಡಲಿದೆ. ಅಲ್ಲದೆ ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ 2ವರ್ಷಗಳವರೆಗೆ ನಿರುದ್ಯೋಗಿ ಪದವೀಧರರಿಗೆ ರೂ. 3,000 ಹಾಗೂ ನಿರುದ್ಯೋಗಿ ಡಿಪ್ಲೋಮೊ ಪದವೀಧರರಿಗೆ ಪ್ರತಿ ತಿಂಗಳು ರೂ.1,500 ನಿರುದ್ಯೋಗ ಭತ್ಯೆ ನೀಡಲಿದೆಂದು ಗ್ಯಾರೆಂಟೆ ಕೊಡುತ್ತೇವೆ. ಹಾಗೂ ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದೇ ಬರುತ್ತೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ. ವೆಂಕಟೇಶ್ ಪ್ರಸಾದ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಕೇಶವ, ಬುಡನ್ ಸಾಬ್, ಕಟ್ಟೆ ಬಸಪ್ಪ ಗೌಡ, ಡಿ.ಎಚ್.ನಾಗರಾಜ್, ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಅಲ್ಲಂ ಭಾಷಾ, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಎನ್. ಶಿವರಾಮ, ಟಿ.ಚಂದ್ರ, ಗ್ರಾಮದ ಕಾಂಗ್ರೆಸ್ ಮುಖಂಡರಾದ ಎಚ್.ಆರ್ ಭೀಮನಗೌಡ, ಕೆ.ಸುರೇಶ ಫೈನಾನ್ಸ್, ಗೌಡ್ರು ತಿಮ್ಮನ ಗೌಡ, ಕೆ.ಎಸ್ ಗುಂಡಪ್ಪ, ಟ್ರಾನ್ಸ್ ಪೋರ್ಟ್ ಕೆ.ವಿಜಯಕುಮಾರ್, ಅಂಗಡಿ ಈರೆಡ್ಡಿ, ಕೆ.ಶಂಕಣ್ಣ, ದೊಡ್ಡವಂಡ್ರಾಪ್ಪನವರ ಮಲ್ಲಿ, ದಾದು ಸಾಬ್, ರಫೀಕ್, ಕೆ. ಶಿವಕುಮಾರ್, ನಾಯಕರ ಗವಿಸಿದ್ದ, ಗ್ರಾಮದ ಕಾಂಗ್ರೆಸ್ ಯುವ ಮುಖಂಡರಾದ ಕೆ.ಜಿ ಮಂಜು, ಕೆ.ಜಿ ಸೀನಾ, ಕೆ.ಜಿ ಅನಿಲ್, ಕೆ.ಗಿರಿ, ಕೆ.ಲಿಂಗಣ್ಣ, ಪಿ.ಗೌತಮ್, ಟ್ರಾನ್ಸ್ ಪೋರ್ಟ್ ನಾಗರಾಜ, ಹರಿಜನ ನಾಗರಾಜ್, ಹರಿಜನ ಅಂಜಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಮಾನ್ಯ ಶಾಸಕರ ಅಭಿಮಾನಿಗಳ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles