ಕೂಡ್ಲಿಗಿ : ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಅವರ ಮಗ ಡಾ. ಎನ್.ಟಿ. ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ಪಕ್ಷವು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಿಸಿದೆ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಡಾ ಎನ್‌ಟಿ ಶ್ರೀನಿವಾಸ್ ಇವರಿಗೆ ಕಾಂಗ್ರೆಸ್ ಟಿಕೆಟ್ ರಾಜ್ಯ ನಾಯಕರು ಮತ್ತು ಕೇಂದ್ರ ಕಾಂಗ್ರೆಸ್ ನಾಯಕರು ಟಿಕೆಟ್ ಘೋಷಣೆ ಮಾಡಿರುತ್ತಾರೆ. ಈ ಸುದ್ದಿ ತಿಳಿದು ಕ್ಷೇತ್ರದ ಅನೇಕ ಹಳ್ಳಿಗಳಲ್ಲಿ ಅಭಿಮಾನಿಗಳು ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿರುತ್ತಾರೆ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಅನೇಕ ನಾಯಕರ ಹೆಸರು ಕೇಳಿ ಬರುತ್ತಿತ್ತು ಆದರೆ ರಾಜ್ಯ ಕಾಂಗ್ರೆಸ್ ನಾಯಕರು ಈ ಬಾರಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಸ್ಥಳೀಯ ನಾಯಕರಿಗೆ ಅವಕಾಶ ಮಾಡಿಕೊಡಬೇಕೆಂದು ಯೋಚನೆ ಇಟ್ಟುಕೊಂಡು ಸ್ಥಳೀಯ ನಾಯಕ ಡಾ ಎನ್.ಟಿ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿರುತ್ತಾರೆ. ಡಾ ಎನ್.ಟಿ ಶ್ರೀನಿವಾಸ್ ಅವರು ಕೂಡ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತುಕೊಂಡು ಅನೇಕ ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಾ ಪಕ್ಷ ಸಂಘಟನೆ ಮಾಡುತ್ತಾ ಹಳ್ಳಿಗಳಲ್ಲಿ ಪ್ರಚಾರ ಮಾಡಿರುತ್ತಾರೆ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್ ಟಿ ಮೀಸಲಾತಿ ಬಂದಾಗಿನಿಂದಲೂ ಸ್ಥಳೀಯರಲ್ಲಿ ಯಾರೂ ಕೂಡ ಈ ಕ್ಷೇತ್ರದಿಂದ ಎಂಎಲ್ಎ ಆಗಿ ಆಯ್ಕೆಯಾಗಿಲ್ಲ ಬಿಜೆಪಿ ಪಕ್ಷದಿಂದಲೂ ಕೂಡ ಈ ಕ್ಷೇತ್ರದಿಂದ ಹೊರಗಿನ ವ್ಯಕ್ತಿಗಳೇ ಸ್ಪರ್ಧೆ ಮಾಡಿ ಜಯಗಳಿಸಿರುತ್ತಾರೆ. ಇಲ್ಲಿ ಸ್ಥಳೀಯರಿಗೆ ಅವಕಾಶ ಕೊಟ್ಟಿಲ್ಲ ಈ ಬಾರಿ ಕಾಂಗ್ರೆಸ್ ಬಿಜೆಪಿ ಪಕ್ಷದಲ್ಲಿ ಕೂಡ ಸ್ಥಳೀಯರಿಗೆ ಅವಕಾಶಕೊಟ್ಟರೆ ಸ್ಥಳೀಯರು ಇಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಾರೆ. ಈ ಬಾರಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಸ್ಥಳೀಯರಿಗೆ ಟಿಕೆಟ್ ಕೊಡಬೇಕೆಂದು ರಾಜ್ಯ ನಾಯಕರಲ್ಲಿ ಎರಡು ಪಕ್ಷದ ರಾಜಕೀಯ ನಾಯಕರು ಚರ್ಚೆ ಮಾಡಿರುತ್ತಾರೆ. ಕಾಂಗ್ರೆಸ್ ಪಕ್ಷ ಇನ್ನೂ ಸ್ಥಳೀಯರಿಗೆ ಟಿಕೆಟ್ ದೊರೆತಿದೆ ಬಿಜೆಪಿ ಪಕ್ಷದ ರಾಜ್ಯ ನಾಯಕರು ಮತ್ತು ಕೇಂದ್ರದ ನಾಯಕರು ಈ ಬಾರಿಯಾದರೂ ಸ್ಥಳೀಯರಿಗೆ ಕೊಡುತ್ತಾರೆ ಅಥವಾ ಇಲ್ಲ. ಕಾದು ನೋಡಬೇಕಾಗಿದೆ.
ಕೂಡ್ಲಿಗಿ ಕ್ಷೇತ್ರದ ಆಕಾಂಕ್ಷಿಗಳು: ಗುಜ್ಜಲ್ ರಘು, ಕಾವಲಿ ಶಿವಪ್ಪ ನಾಯಕ, ಜಿ. ನಾಗಮಣಿ, ನರಸಿಂಹಗಿರಿ ಸೇರಿದಂತೆ ಹಲವರು ಟಿಕೆಟ್ ಗಾಗಿ ತೀವ್ರ ಕಸರತ್ತು ನಡೆಸಿದ್ದರು. ಪಕ್ಷ ಸ್ಥಳೀಯ ಮುಖಂಡರಿಗೆ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ, ಪಕ್ಷವು ಅಂತಿಮವಾಗಿ ಶ್ರೀನಿವಾಸ್ ಅವರಿಗೆ ಮಣೆ ಹಾಕಿದೆ. ಶ್ರೀನಿವಾಸ್ ಅವರು ವೃತ್ತಿಯಿಂದ ವೈದ್ಯರಾಗಿದ್ದಾರೆ. ಮೂಲತಃ ಕೂಡ್ಲಿಗಿಯವರಾದರೂ ತುಮಕೂರಿನಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದಾರೆ. ಅವರ ತಂದೆಯ ನಿಧನದ ನಂತರ ಕ್ಷೇತ್ರದ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು. ಮೊದಲ ಪ್ರಯತ್ನದಲ್ಲೆ ಕಾಂಗ್ರೆಸ್ ಅವರಿಗೆ ಮಣೆ ಹಾಕಿದೆ. ಇತ್ತೀಚೆಗೆ ಎನ್.ವೈ.ಗೋಪಾಲಕೃಷ್ಣ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ಪಕ್ಷವು ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮೂರು ಕ್ಷೇತ್ರದ ಟಿಕೆಟ್ ಘೋಷಿಸಿದೆ. ಎರಡೂ ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಈ ಎರಡೂ ಕ್ಷೇತ್ರಗಳಿಗೆ ಇನ್ನಷ್ಟೇ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರು ಘೋಷಿಸಬೇಕಿದೆ.
ವರದಿ: ಮಂಜುನಾಥ ಹೂಡೇಂ