ಕೂಡ್ಲಿಗಿ : ಕೂಡ್ಲಿಗಿ ಮತ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಾ. ಶ್ರೀನಿವಾಸ್ ಎನ್. ಟಿ. ಅವರ ನಾಯಕತ್ವವನ್ನು ಮೆಚ್ಚಿ ಚೌಡಾಪುರ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಡಾ. ಶ್ರೀನಿವಾಸ್ ಎನ್. ಟಿ. ಅವರು ಅತ್ಯಂತ ಪ್ರೀತಿಯಿಂದ ಪ್ರತಿಯೊಬ್ಬ ಮುಖಂಡರು ಹಾಗೂ ಕಾರ್ಯಕರ್ತರನ್ನು ತಮ್ಮ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಗೆಲುವುಗಾಗಿ ತಮ್ಮ ವಿಶ್ವಾಸವನ್ನು ಗಳಿಸಿದರು.
ಡಾ. ಶ್ರೀನಿವಾಸ್ ಅವರ ಮುಂದಾಳತ್ವದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಇಡಿದ ಚೌಡಾಪುರ ಕಾಂಗ್ರೆಸ್ ಪಕ್ಷದ ಮುಖಂಡರು ಬದಲಾವಣೆಗಾಗಿ ಎಲ್ಲರೂ ನಗೆ ಚೆಲ್ಲಿದರು. ಅವರು ಮುಂದಿನ ಗೆಲವುಗಾಗಿ ವಿಶ್ವಾಸವನ್ನು ವ್ಯಕ್ತಪಡಿಸಿದರು. ಮತ್ತೊಮ್ಮೆ ಬಳ್ಳಾರಿ – ವಿಜಯ ನಗರ ಒಳಗೊಂಡಂತೆ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿ ಜೀವಂತವಾಗಿದೆ ಎಂಬುದನ್ನು ದೃಢಪಡಿಸಿದರು.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ನಾಯಕತ್ವದ ಕೊರತೆ ಎದ್ದು ಕಾಣುತಿತ್ತು. ಅಂತಹ ಕೊರತೆಯನ್ನು ಡಾ. ಶ್ರೀನಿವಾಸ್ ಎನ್. ಟಿ . ಅವರು ಟಿಕೆಟ್ ಸಿಕ್ಕ ನಂತರ ನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಡಾ. ಶ್ರೀನಿವಾಸ್ ಎನ್. ಟಿ. ಅವರು ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ.
ಚೌಡಾಪುರ ಗ್ರಾಮದ ಕಾಂಗ್ರೆಸ್ ಮುಖಂಡರಾದ ಅಗ್ನಿ ಜಿ. ಒ. ಓಬಳೇಶ್ – ಅಸಂಘಟಿತ ಜಿಲ್ಲಾ ಉಪಾಧ್ಯಕ್ಷರು , ಕೆ.ರಾಜಪ್ಪ, ಜಿ. ವಿರೂಪಾಕ್ಷಿ – ಗ್ರಾ. ಪಂ ಸದಸ್ಯರು , ಆರ್. ಸುರೇಶ್ – ಗ್ರಾ. ಪಂ. ಸದಸ್ಯರು , ಕೆ. ಪಾಲಪ್ಪ – ಗ್ರಾ. ಪಂ. ಸದಸ್ಯರು, ಡಿ. ಮೂಗಪ್ಪ , ಕೆ. ಕೃಷ್ಣ ಮೂರ್ತಿ , ಜಿ. ಓಬಳೇಶ , ಎಂ. ಗಣೇಶ್ , ಜಿ. ಎಮ್ . ಮಂಜುನಾಥ , ವೈ . ಕೊಟ್ರೇಶ್ , ಹೆಚ್ . ನಾಗೇಂದ್ರಪ್ಪ , ಬೆಂಕಿ ದೊಡ್ಡಪ್ಪ ಇನ್ನೂ ಮುಂತಾದ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಹಾಗೆಯೇ ಚೌಡಾಪುರ ಕಾಂಗ್ರೆಸ್ ಮುಖಂಡರು ಡಾ. ಶ್ರೀನಿವಾಸ್ ಎನ್. ಟಿ. ಅವರ ನಾಯಕತ್ವವನ್ನು ಮನಸ್ಸಾರೇ ಮೆಚ್ಚಿ ಸಂತೋಷ ಪಟ್ಟರು. ಚೌಡಾಪುರ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು