ಬಳ್ಳಾರಿ : ಕಾಂಗ್ರೆಸ್ ಯುವ ಮುಖಂಡರು ಮಹಾನಗರ ಪಾಲಿಕೆಯ ಸದಸ್ಯರಾದ ಶಶಿಕಲಾ ಪಿ. ಜಗನ್ನಾಥ್ ರವರ ನೇತೃತ್ವದಲ್ಲಿ ಕರ್ನಾಟಕ ಜನಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗು ಆಮ್ ಆದ್ಮಿ ಪಕ್ಷದ ಮುಖಂಡ ಕುಂಬಾರ ಎರ್ರಿಸ್ವಾಮಿ ಅವರು ಎಎಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ನಗರದ ನೇತಾಜಿ ನಗರದ ಎರ್ರಿಸ್ವಾಮಿ ಅವರ ಸ್ವ ಗೃಹದಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಸಮ್ಮುಖದಲ್ಲಿ ತಮ್ಮ ಅಪಾರ ಬೆಂಬಲಿಗರರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ನಗರದ 3, 6,7,10,11,12,35 ನೇ ವಾರ್ಡಿನ ಯುವಕರು ಸೇರಿದಂತೆ ಮುಖಂಡರಾದ ಫಯ್ಯದ್ ಬಾಷ, ಸುಹೇಲ್, ನಾಸೀರ್, ಹನುಮಂತು, ಹುಸೇನ್, ರಾಜಾ, ಮಹ್ಮದ್ ಅಲಿ, ಪ್ರದೀಪ್ ಮತ್ತು ಖಾಜಾಪೀರಾ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.