14.4 C
New York
Tuesday, November 12, 2024

54 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದ ಬೀಗಿದ: ಡಾ ಎನ್.ಟಿ ಶ್ರೀನಿವಾಸ್

ಕೂಡ್ಲಿಗಿ: ರಾಜ್ಯದ ಗಮನ ಸೆಳೆದಿದ್ದ ಕೂಡ್ಲಿಗಿ ಕ್ಷೇತ್ರದಲ್ಲಿ ನೂತನ ಶಾಸಕ ಕಾಂಗ್ರೆಸ್‌ನ ಅಭ್ಯರ್ಥಿ ಡಾ ಎನ್ ಟಿ ಶ್ರೀನಿವಾಸ್ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ಈ ಬಾರಿ ದಿವಂಗತ ಮಾಜಿ ಶಾಸಕರಾದ ಎನ್ ಟಿ ಬೊಮ್ಮಣ್ಣನವರ ಸುಪುತ್ರ ನಾದ ಡಾ ಎನ್ ಟಿ ಶ್ರೀನಿವಾಸ್ ರವರು 10,4753 ಮತ ಪಡೆದಿದ್ದಾರೆ. ಈ ಮೂಲಕವಾಗಿ 54,350 ಮತಗಳ ಮುನ್ನಡೆಯನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಬಿಜೆಪಿ ಅಭ್ಯರ್ಥಿ ಲೋಕೆಶ್ ನಾಯ್ಕ್ ಪಡೆದ ಮತಗಳು 50403 ಮತಗಳನ್ನು ಪಡೆದು ಸೋತಿದ್ದಾರೆ. ಈ ಸಾಧನೆ 20 ವರ್ಷಗಳಿಂದ ಬೇರೆ ಬೇರೆ ಪಕ್ಷದವರನ್ನು ಹೊರಗಡೆ ಯಿಂದ ಬಂದಂತ ಅಭ್ಯರ್ಥಿಗಳನ್ನು ಮೂರ ರಿಂದ ನಾಲ್ಕು ಬಾರಿ ಕೂಡ್ಲಿಗಿ ಕ್ಷೇತ್ರದಲ್ಲಿ ಹೊರಗಿನಿಂದ ಬಂದಿರುವರನ್ನು ಆಯ್ಕೆ ಮಾಡಿದ್ದ ಸ್ಥಳೀಯ ಜನತೆ ,ಈ ಬಾರಿ ಸ್ಥಳೀಯ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡು ಪಕ್ಷಾತೀತವಾಗಿ ಕೂಡ್ಲಿಗಿ ತಾಲೂಕಿನ ಎಲ್ಲಾ ಮುಖಂಡರುಗಳು ಪರೋಕ್ಷವಾಗಿ ಹಾಗೂ ಆ ಪರೋಕ್ಷವಾಗಿ ಒಳಗಿಂದೊಳಗೆ ಸ್ಥಳೀಯ ಅಭ್ಯರ್ಥಿಯಾದ ಅಂತಹ ಶ್ರೀನಿವಾಸ್ ಎನ್ ಟಿ ಇವರನ್ನು ಕಾಂಗ್ರೆಸ್ ಗೆಲುವು ಸಾಧಿಸಲು ಮುಂದಾದ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಜನತೆ ಇಂದು ತಾಲೂಕಿನಾಂಧ್ಯಂತ ಸಂಭ್ರಮದ ಸಿಹಿ ಹಂಚುವ ಮೂಲಕ ಪಾಟ್ಟಕಿ ಅಚ್ಚಿ ವಿಜಯೋತ್ಸವದ ಸಡಗರವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷರಾದ ಗುರುಸಿದ್ಧನಗೌಡ ಇವರು ಗೆಲುವು ಕುರಿತು ದೇಶಾದ್ಯಂತ ಬಿಜೆಪಿಯ ದುರಡಳಿತವನ್ನು ಖಂಡಿಸಿ ಹಾಗೂ ಸುಳ್ಳು ಅಭಿವೃದ್ಧಿಯ ಹೇಳಿಕೆಗಳನ್ನು ಖಂಡಿಸಿ ಇಂದು ರಾಜ್ಯಾದ್ಯಂತ ಜನಗಳು ಒಗ್ಗಟ್ಟಿನ ಮನಸ್ಸಿನಿಂದ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಅಮೂಲ್ಯವಾದಂತ ಮತ ನೀಡಿ ಇಂದು ಕೇಂದ್ರದಲ್ಲೂ ಹಾಗೂ ಕರ್ನಾಟಕ ರಾಜ್ಯದಲ್ಲೂ ಡಬಲ್ ಇಂಜಿನ್ ಸರ್ಕಾರವನ್ನು ಒಪ್ಪಿಕೊಳ್ಳದೆ ,ಈ ಬಾರಿ ಕರ್ನಾಟಕ ಜನತೆ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತವನ್ನು ನೀಡಿ ಪ್ರತ್ಯೇಕವಾದಂತಹ ಸರ್ಕಾರವನ್ನು ರಚಿಸಲು ಜನರು ನಿರ್ಧಾರ ತೋರಿರುವುದನ್ನು ಕಂಡು ಭಾರತ ದೇಶವೇ ಕರ್ನಾಟಕದತ್ತ ನೋಡುವಂತೆ ಮತದಾರ ರಾಜ್ಯದ ಜನರು ನಿರ್ಧಾರ ಮಾಡಿ ಗೆಲುವು ಸಾಧಿಸಲು ಮುಂದಾದ ರಾಜ್ಯ ದ ಜನತೆ ಕಾಂಗ್ರೆಸ್ ಪಕ್ಷದ ಇಂದಿನ ಸಿದ್ದರಾಮಯ್ಯ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದ ಕನ್ನಡಿಗರು ಮಾತು ತಪ್ಪದ ಮಗ ಎಂದು ತಿಳಿದ ಜನರು ನಿರ್ಧಾರ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಸರ್ಕಾರ ರಚಿಸಲು ಜನರ ಅಭಿಪ್ರಾಯ ಪಟ್ಟಿದ್ದಾರೆ ಎಂದು ತಿಳಿಸಿದರು, ಹಾಗೆ ಕೂಡ್ಲಿಗಿ ತಾಲೂಕಿನ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಸಿ ಮತ ಹಾಕಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ಕೂಡ್ಲಿಗಿ ತಾಲೂಕಿನ ಜನತೆ ಹಬ್ಬದ ಸಡಗರದಂತೆ ಸಿಹಿ ಹಂಚುವ ಮೂಲಕ ಗ್ರಾಮ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಗೆಲುವುವಿಗೆ ವಿಜಯೋತ್ಸವ ಆಚರಿಸಿದರು.

ವರದಿ: ಮಂಜುನಾಥ ಹೂಡೇಂ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles