ಕಾನ ಹೊಸಹಳ್ಳಿ: ಹೋಬಳಿ ಸಮೀಪದ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆ ಮ್ಯಾಸರಹಟ್ಟಿ ಗ್ರಾಮದಲ್ಲಿ ಬೇಸಿಗೆಯ ದಿನಗಳಲ್ಲಿ, ಕೆಲಸವಿಲ್ಲದೆ ಅಲೆದಾಡುತ್ತಿರುವ ಕಾರ್ಮಿಕರಿಗೆ ನೆಲೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ, ಗ್ರಾಮದ ಕೆರೆಯಲ್ಲಿ ಊಳೆತ್ತುವ ಕಾಮಗಾರಿ, ಬರದಿಂದ ಸಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಮಾತನಾಡಿ ಕೆಲಸವಿಲ್ಲದೇ ಕಾರಣಕ್ಕೆ ಯಾವುದೇ ಕುಟುಂಬ ಗುಳೆ ಹೋಗುವುದನ್ನು ತಡೆಯಲು ಗ್ರಾ.ಪಂ. ಯಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಜತೆಗೆ ಕೆರೆ ಹೂಳೆತ್ತುವ ಕಾಮಗಾರಿ ಮೂಲಕ ಕೆರೆ ಕುಂಟೆಗಳ ಅಭಿವೃದ್ಧಿ, ಅಂತರ್ಜಲ ಮಟ್ಟ ಹೆಚ್ಚಿಸುವ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು. ನಂತರ ಮಾಜಿ ತಾಲೂಕ ಪಂಚಾಯಿತಿ ಸದಸ್ಯರಾದ ನೇತ್ರಮ್ಮ ಜಿ ಓಬಣ್ಣ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ದಿನಗೂಲಿ,312 ರೂ ಗಳು ಸರ್ಕಾರ ನಿಗದಿಪಡಿಸಿದೆ, ಈ ಯೋಜನೆಯಲ್ಲಿ ಪ್ರತಿಯೊಬ್ಬ ಕಾರ್ಮಿಕರು, ಕೆಲಸಕ್ಕೆ ಹಾಜರಾಗಿ ಕೂಲಿ ಪಡೆದುಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ದುರುಗಮ್ಮ ದುರುಗಪ್ಪ, ಉಪಾಧ್ಯಕ್ಷರಾದ ತಿಪ್ಪಮ್ಮ ನಾಗರಾಜ್, ಮಾಜಿ ಗ್ರಾ.ಪಂ ಅಧ್ಯಕ್ಷ ಈ ಶರಣೇಶ್, ಸದಸ್ಯರಾದ ಎಚ್ ಪಾಪಣ್ಣ, ದಾಸಪ್ಪ, ಸಾಕಮ್ಮ ಬೋರಣ್ಣ, ಸಾವಿತ್ರಮ್ಮ, ಗುರು ಚಿನ್ನಯ್ಯ, ಚನ್ನಬಸಮ್ಮ ಬಸಣ್ಣ ಸೇರಿದಂತೆ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು, ಕೂಲಿ ಕಾರ್ಮಿಕರು ಭಾಗವಹಿಸಿದ್ದರು.