ಕೂಡ್ಲಿಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ ಕೃಷ್ಣಪ್ಪ) ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪ್ರೊ. ಬಿ ಕೃಷ್ಣಪ್ಪ ಅವರ 86 ನೇ ಜಯಂತಿಯನ್ನು ಆಚರಿಸಲಾಯಿತು. ತಾಲೂಕು ಸಂಚಾಲಕ ಟಿ ಗಂಗಣ್ಣ ಪ್ರೊ. ಕೃಷ್ಣಪ್ಪ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದರು. ಈ ವೇಳೆ ಜಿಲ್ಲಾ ಸಂಚಾಲಕ ಎಸ್ ದುರುಗೇಶ್ ಮಾತನಾಡಿ ಪ್ರೊ.ಬಿ.ಕೃಷ್ಣಪ್ಪ ಅವರು ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದರು. ಕೃಷ್ಣಪ್ಪ ಅವರ ಹೋರಾಟಗಳನ್ನು ದಲಿತಪರ ಸಂಘಟನೆಗಳು ಮುಂದುವರಿಸಿಕೊಂಡು ಹೋಗಬೇಕು. ನಮ್ಮ ದಲಿತ ಜನಾಂಗದವರಿಗೆ ಅನ್ಯಾಯಕ್ಕೊಳಗಾದವರಿಗೆ ನ್ಯಾಯದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಎಲ್ಲಾ ಪದಾಧಿಕಾರಿಗಳು ಮಾಡಬೇಕು. ಧರ್ಮದ ಹೆಸರಿನಲ್ಲಿ ದಲಿತ ಮಹಿಳೆಯರನ್ನು ಬೆತ್ತಲೆ ಮಾಡುತ್ತಿದ್ದರು. ಇದರ ವಿರುದ್ಧ ಹೋರಾಟ ನಡೆಸಿ, ಈ ಪದ್ಧತಿಯನ್ನು ರದ್ದುಗೊಳಿಸುವಂತೆ ಮಾಡಿದ ಕೀರ್ತಿ ಪ್ರೊ ಬಿ.ಕೃಷ್ಣಪ್ಪ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ನಂತರ ಕೊಟ್ಟುರು ತಾಲೂಕು ಸಂಚಾಲಕ ಹನುಮಂತಪ್ಪ ಮಾತನಾಡಿ ಪ್ರೊ. ಬಿ. ಕೆ ಅವರು ಹುಟ್ಟುಹಾಕಿದ ಈ ಸಂಘಟನೆ ಆಗಿದ್ದು, ಇವರು ದಲಿತರ ಪರ ಹೋರಾಡಿ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟವರು ಇವರ ಹೋರಾಟದ ಮನೋಭಾವವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ವೇಳೆ ತಾಲೂಕು ಸಂಘಟನಾ ಸಂಚಾಲಕರು ಮಹೇಶ್ ಮಾತನಾಡಿ ಪ್ರೋ ಬಿ.ಕೃಷ್ಣಪ್ಪ ಅವರ ಜೀವನ ಚರಿತ್ರೆ ಹಾಗೂ ಅವರ ಹೋರಾಟದ ಬಗ್ಗೆ ವಿವರಿಸಿದರು ಹಾಗೂ ಸ್ವಾಗತ, ವಂದನಾರ್ಪಣೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಕಂದಗಲ್ ಪರುಶುರಾಮ, ಜಿಲ್ಲಾ ಖಜಾಂಚಿ ಕುಮಾರ್, ಜಿಲ್ಲಾ ಸಮಿತಿ ಸದಸ್ಯರು ದುರುಗಪ್ಪ, ಜಿಲ್ಲಾ ಸಲಹೆಗಾರರು ಡಿ ಎಂ ಈಶ್ವರಪ್ಪ, ತಾಲೂಕು ಸಂಘಟನಾ ಸಂಚಾಲಕರು ಬಡೇಲಡಕು ದುರುಗೇಶ್, ಮೂಗಣ್ಣ, ಪಕೀರಪ್ಪ, ಬಣವಿಕಲ್ಲು ಚೌಡೇಶ್, ಎಲ್ಲಪ್ಪ, ಕೂಡ್ಲಿಗಿ ನಗರ ಸಂಚಾಲಕ ಎಚ್ ಅಜ್ಜಯ, ಕೊಟ್ಟುರು ತಾಲೂಕು ಸಂಘಟನಾ ಸಂಚಾಲಕ ಅಂಬರೀಶ್, ಕೊಟ್ಟೂರು ನಗರ ಘಟಕ ಸಂಚಾಲಕ ಪರುಶುರಾಮ, ಬಸವರಾಜ ಸೇರಿದಂತೆ ಸಂಘದ ಪದಾಧಿಕಾರಿಗಳು, ದಲಿತ ಮುಖಂಡರು ಭಾಗವಹಿಸಿದ್ದರು.
ವರದಿ: ಮಂಜುನಾಥ ಹೂಡೇಂ