18.3 C
New York
Wednesday, November 6, 2024

ಹೆಣ್ಮಕ್ಳೇ ಸ್ಟ್ರಾಂಗು ಗುರು..!

ವಾಹನ ಚಾಲನೆಯಲ್ಲಿ ಬದುಕು ಕಟ್ಟಿಕೊಂಡ ಮಹಿಳೆ

ಕೂಡ್ಲಿಗಿ: ಪುರುಷರಿಗಿಂತ ನಾವೇನೂ ಕಡಿಮೆ ಇಲ್ಲ ಎನ್ನುತ್ತಾರೆ ಮಹಿಳೆ ಮಮತ ವಾಹನ ಚಾಲನೆ ಆರಂಭಿಸಿರುವ ಮಹಿಳೆ, ಗ್ರಾಮದ ಸ್ವಚ್ಛತೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ತಾಲೂಕಿನ ಕಾನ ಹೊಸಹಳ್ಳಿ ಗ್ರಾಮಸ್ಥರ ಪ್ರೋತ್ಸಾಹದಿಂದಾಗಿ ಇದೀಗ ನಿರ್ಭೀತಿಯಿಂದಾಗಿ ವಾಹನ ಚಾಲನೆ ಮಾಡುತ್ತಿದ್ದಾರೆ. ಕಿರಿದಾದ ಓಣಿಯಲ್ಲಿ, ಅದೂ ಆಚೀಚೆ ಕಟ್ಟಿದ ದನಕರುಗಳ ಮಧ್ಯೆ ನಾಜೂಕಿನಿಂದ ದಿನನಿತ್ಯ ವಾಹನ ಚಲಾಯಿಸುತ್ತಿದ್ದಾರೆ. ಈ ವಾಹನ ಚಲಾಯಿಸುವ ಮಹಿಳೆಗೆ ಗ್ರಾ.ಪಂನಿಂದ ವೇತನ ನೀಡಲಾಗುತ್ತಿದ್ದು, ಪುರುಷ ಚಾಲಕರಿಗೆ ನೀಡುವಷ್ಟೇ ವೇತನವನ್ನು ಮಹಿಳೆಯರಿಗೂ ನೀಡಲಾಗುತ್ತಿದೆ. ತರಬೇತಿ ಪಡೆದ ಹಂತ-ಹಂತವಾಗಿ ಚಾಲನಾ ಕಾರ್ಯಕ್ಕೆ ಶೀಘ್ರ ಅಣಿಗೊಳ್ಳಲಿದ್ದಾರೆ. ತರಬೇತಿ ಪಡೆದ ಮಹಿಳೆಯರಲ್ಲಿ ಕೆಲವರು ಹಿಂದೇಟು ಹಾಕಿದ್ದು, ಅವರನ್ನು ಮನವೊಲಿಸುವ ಕಾರ್ಯ ಪಂಚಾಯಿತಿಯಿಂದ ನಡೆದಿದೆ. ಮಹಿಳೆಯವರು ವಾಹನ ಚಾಲನೆ ನೀಡಲು ಮುಂದಾದಾಗ ಗ್ರಾಮದಲ್ಲಿ ಹಲವರು ತೆಗಳಿದ ಪ್ರಸಂಗವು ನಡೆದಿದೆ. ಇದರಿಂದ ಕೆಲ ಕಾಲ ವಾಹನ ಚಲಾಯಿಸುತ್ತಿದ್ದ ಮಹಿಳೆಯರು ಹಿಂದಡಿ ಇಟ್ಟಾಗ ಅವರ ಕುಟುಂಬ ಸದಸ್ಯರು ಬೆನ್ನು ತಟ್ಟಿದ್ದಾರೆ. ಟೀಕೆಗಳಿಗೆ ಕಿವಿಗೊಡಬೇಡಿ ಎಂಬ ಸಲಹೆಯನ್ನು ಸ್ವೀಕರಿಸಿ, ವಾಹನ ಚಲಾಯಿಸಿದ್ದರಿಂದ ಸದ್ಯ ಊರಿನ ಜನರೇ ಅಭಿಮಾನದ ನುಡಿಗಳನ್ನಾಡುತ್ತಿದ್ದಾರೆ. ಇನ್ನೊಂದೆಡೆ ನಾವು ವಾಹನ ಓಡಿಸುವುದರ ಮೂಲಕ ಗ್ರಾಮ ಸ್ವಚ್ಛತೆಯ ಜವಾಬ್ದಾರಿ ಪಡೆದಿದ್ದೇವೆ ಎಂಬ ಅಭಿಮಾನ. ಈ ಅಭಿಮಾನವೇ ಗ್ರಾಮಗಳ ಸ್ವಚ್ಛತೆಗೆ ಕಾರಣವಾಗಿದೆ. ಜತೆಗೆ ಸ್ಥಳೀಯ ಮಹಿಳೆಯರಿಗೆ ಈ ಕೆಲಸ ನೀಡಿದ್ದು, ಗ್ರಾಮಸ್ಥರ ಸ್ವಚ್ಛತಾ ಕಳಕಳಿ ಇಮ್ಮಡಿಗೊಳ್ಳಲು ಕಾರಣವಾಗಿದೆ. ಮಹಿಳೆಯರ ಆರ್ಥಿಕ ಭದ್ರತೆ, ಸ್ವಾವಲಂಬಿ ಬದುಕು, ಸಬಲೀಕರಣಕ್ಕಾಗಿ ವಾಹನ ಚಾಲನೆ ತರಬೇತಿ ನೀಡುವ ಮೂಲಕ ಜಿ.ಪಂ. ಮತ್ತೊಂದು ಮಹತ್ವದ ಹೆಜ್ಜೆಯತ್ತ ಸಾಗಿದೆ. ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ವಾಹನ ಚಾಲನೆಯ ತರಬೇತಿ ನೀಡಿ, ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಕಸ ಸಂಗ್ರಹಣೆಯ ಸ್ವಚ್ಛ ವಾಹಿನಿಗಳಿಗೆ, ತರಬೇತಿ ಪಡೆದ ಮಹಿಳಾ ವಾಹನ ಚಾಲಕಿಯರನ್ನು ತೊಡಗಿಸಿಕೊಳ್ಳುವಂತೆ ಅವಕಾಶ ಕಲ್ಪಿಸಲಾಗಿದೆ. ತರಬೇತಿಗೆ ಆಯ್ಕೆಯಾದ ಮಹಿಳೆಯರು ಎದೆಗುಂದದೇ ಯಾವುದರಲ್ಲಿಯೂ ಕಮ್ಮಿಯಿಲ್ಲ ಎಂಬಂತೆ ಚಾಲನಾ ತರಬೇತಿಯನ್ನು ಸಮರ್ಪಕವಾಗಿ ಪಡೆದು ವಾಹನ ಓಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಮಹಿಳಾ ಸ್ವಾವಲಂಬಿಗೆ ದಾರಿ: ಸ್ವಚ್ಛತಾ ವಾಹಿನಿ ವಾಹನಗಳಿಗೆ ಮಹಿಳೆಯರನ್ನೇ ಚಾಲಕರನ್ನಾಗಿ ನೇಮಕ ಮಾಡಿರುವುದು ವಿಶೇಷವಾಗಿದೆ. ಸ್ವಸಹಾಯ ಸಂಘದಿಂದ ಮಹಿಳೆಯರು ತರಬೇತಿ ಪಡೆಸಿದ್ದಾರೆ. ಮುಂದೆ ಅವರೇ ಚಾಲಕರು, ನಿರ್ವಾಹಕರು ಮತ್ತು ಕಸ ವಿಂಗಡಿಸಿ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತವಾಗಿದೇ ಎಲ್ಲ ರಂಗಗಳಲ್ಲೂ ಸಾಧನೆ ಮಾಡುತ್ತಿದ್ದಾಳೆ. ಈಗ ಸಮಾಜದಲ್ಲಿ ಪುರುಷನಿಗೆ ಸರಿಸಮಾನಗಿ ಮಹಿಳೆ ನಿಂತಿದ್ದಾಳೆ.

ಕಸ ವಿಲೇವಾರಿ ವಾಹನ ಮಹಿಳೆ ಚಾಲನೆ ಮಾಡುವ ಮೂಲಕ ಒಂದು ಸ್ಥಾನ ಮಾನ ಸಿಕ್ಕಿದೆ. ಮಹಿಳೆಯರಿಗೆ ಅವಕಾಶಗಳು ಸಿಗಬೇಕಾಗಿದೆ. ಅವರು ಯಾವ ಕ್ಷೇತ್ರದಲ್ಲಿ ಬೇಕಾದರೂ ಕಾರ್ಯನಿರ್ವಹಿಸಲು ಸಿದ್ಧರಿದ್ದಾರೆ. ಮನೆಯನ್ನು ನಿಭಾಯಿಸುವ ಅವರು ವಾಹನ ಕೂಡ ಓಡಿಸಬಲ್ಲರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. •ಗ್ರಾ.ಪಂ ಪಿಡಿಓ ಬಸಮ್ಮ

ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ವಾಹನವಾದ ಕಸ ಸಂಗ್ರಹಣೆಯ ವಾಹನ ಚಲಾಯಿಸುವುದು ಒಂದು ಸಾಧನೆಯೇ. ಇದೇ ರೀತಿಯಾಗಿ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಕಸ ಸಂಗ್ರಹಣೆಯ ಹೊಣೆಯನ್ನು ಮುಂದಿನ ದಿನಗಳಲ್ಲಿ ಮಹಿಳೆಯರೇ ನಿಭಾಯಿಸುವ ವಿಶ್ವಾಸವಿದೆ •ತಾ.ಪಂ ಇಒ ರವಿಕುಮಾರ್ ವೈ

ಆರಂಭದಲ್ಲಿ ವಾಹನ ಚಲಾಯಿಸಲು ನನಗೆ ಮುಜುಗರ ಎನಿಸುತ್ತಿತ್ತು. ಗ್ರಾಮಸ್ಥರ ಪ್ರೋತ್ಸಾಹದಿಂದ ಈಗ ಮುಜುಗರ ಮರೆಯಾಗಿದೆ. ಎಲ್ಲರ ಸಹಕಾರದಿಂದ ವಾಹನ ಚಲಾಯಿಸುತ್ತಿದ್ದೇನೆ.•ವಾಹನ ಚಾಲಕಿ ಮಮತಾ

ವರದಿ: ಮಂಜುನಾಥ ಹೂಡೇಂ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles