ಬಳ್ಳಾರಿ : ರಾಜ್ಯವನ್ನ ಹಸಿವು ಮುಕ್ತ ರಾಜ್ಯವನ್ನಾಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಜಾರಿಗೊಳಿಸಲು ಹೊರಟಿರುವ ಅನ್ನಭಾಗ್ಯ ಯೋಜನೆಗೆ ತಡೆಯೊಡ್ಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಲಕ್ಷಾಂತರ ಬಡ ಕುಟುಂಬಗಳ ಹೊಟ್ಟೆ ಮೇಲೆ ಒಡೆಯಲು ಹೊರಟಿದೆ
ದೇಶ ಮೆಚ್ಚುವಂತಹ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಗೆ ರಾಜ್ಯ ಸರ್ಕಾರಕ್ಕೆ ಅಕ್ಕಿ ನೀಡದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಯೋಜನೆಯನ್ನು ವಿಫಲಗೊಳಿಸಲು ಸಂಚು ರೂಪಿಸುತ್ತಿದೆ ಎಂದರು.
ಇದು ಕಾಂಗ್ರೆಸ್ ಸರ್ಕಾರಕ್ಕೆ ಮಾಡಿದ ಅನ್ಯಾಯವಲ್ಲ ಬದಲಿಗೆ ಹಸಿವಿನಿಂದ ಕೂಡಿದ ರಾಜ್ಯದ ಜನರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಸಚಿವ ನಾಗೇಂದ್ರ ಹೇಳಿದರು.
ನೀವು ಕೊಡದಿದ್ದರು ಪರವಾಗಿಲ್ಲ ಅಂತ ಪಕ್ಕದ ರಾಜ್ಯದಿಂದ ಕೊಂಡು ಬಡವರಿಗೆ ನೀಡಲು ಹೋದರೆ. ನಮಗೆ ಅಕ್ಕಿ ನೀಡಲು ನೆರವಿಗೆ ಬಂದ ರಾಜ್ಯಗಳ ಮೇಲೆ ಒತ್ತಡ ಹಾಕಿ, ಹೆದರಿಸಿ ರಾಜ್ಯಕ್ಕೆ ಅಕ್ಕಿ ಸಿಗದಂತೆ ಮಾಡಲು ಹೊರಟಿದ್ದೀರಿ ಇದನ್ನು ರಾಜ್ಯದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದ ಅವರು, ಈಗಾಗಲೇ ಹೀನಾಯ ಸೋಲಿನಿಂದ ಪಾಠ ಕಲಿಯದ ನೀವು ಮತ್ತೆ ಹಳೆಯ ಚಾಳಿ ಮುಂದುವರಿಸಿದ್ದು ಮುಂದಿನ ದಿನಗಳಲ್ಲಿ ಜನರು ಮತ್ತೊಮ್ಮೆ ತಕ್ಕಪಾಠ ಕಲಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದ್ದು ಎಷ್ಟೇ ಅಡೆತಡೆಗಳು ಬಂದರು ಲೆಕ್ಕಿಸದೆ ರಾಜ್ಯದ ಜನರ ಹಸಿವು ನೀಗಿಸುವ ಯೋಜನೆಯನ್ನ ಜಾರಿ ಮಾಡಿಯೇ ತಿರುತ್ತೇವೆ. ಇನ್ನಾದರೂ ಕೇಂದ್ರ ಬಿಜೆಪಿಗರು ಅಭಿವೃದ್ಧಿ ಕಾರ್ಯಕ್ರಮಗಳ ಜಾರಿ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನ ನಿಲ್ಲಿಸಲಿ ಅಂತ ಈ ಪ್ರತಿಭಟನೆ ಮೂಲಕ ಮನವಿ ಮಾಡುತ್ತಿದ್ದೇವೆ ಎಂದು ಸಚಿವ ಬಿ.ನಾಗೇಂದ್ರ ಅವರು ಹೇಳಿದರು.
ಸಿದ್ದ ರಾಮಯ್ಯ ಮತ್ತು ಡಿಕೆಶಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ನುಡಿದಂತೆ ನಾವು ನಡೆದಿದ್ದೇವೆ
ಬಿಜೆಪಿಯವರು ಮಾಡುತ್ತಿರುವ ಅಕ್ಕಿ ರಾಜಕೀಯದ ಬಗ್ಗೆ ಸಾಮಾನ್ಯ ಜನರಿಗೆ ತಿಳಿಸಲು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆದೇಶದಂತೆ ರಾಜ್ಯದಾದ್ಯಂತ ಇಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯಲ್ಲಿ ಸಂಡೂರು ಶಾಸಕ ಈ.ತುಕರಾಂ, ಮಾಜಿ ಸಂಸದ ಉಗ್ರಪ್ಪ, ಜಿ.ಪಂ.ಮಾಜಿ ಸದಸ್ಯ. ಅಲ್ಲಂ ಪ್ರಶಾಂತ್ , ಎ.ಮಾನಯ್ಯ, ಮೇಯರ್ ತ್ರಿವೇಣಿ, ಪಾಲಿಕೆ ಸದಸ್ಯರಾದ ವಿ.ಕುಬೇರ, ವಿವೇಕ್, ಮುಖಂಡರುಗಳಾದ ಎಂ. ಶ್ರೀಧರ್, ಶಿವರಾಜ್ ಹೆಗಡೆ, ವೆಂಕಟೇಶ್ ಹೆಗಡೆ, ಮೊದಲಾದವರು ಪಾಲ್ಗೊಂಡಿದ್ದರು.