ವರದಿ: ಮಂಜುನಾಥ ಹೂಡೇಂ
ಕೂಡ್ಲಿಗಿ: ಪಟ್ಟಣದ ಶ್ರೀ ಪೇಟೆ ಬಸವೇಶ್ವರ ಸಂಗೀತ ಪಾಠಶಾಲೆಯ ಅಗಸಗಟ್ಟೆ ತಿಂದಪ್ಪ ಹಾಗೂ ಸಂಗಡಿಗರಿಂದ ಜೂನ್ 28ರಂದು ಬೆಂಗಳೂರಿನ ಬಸವ ಶ್ರೀ ವಾಹಿನಿ ಸ್ಟುಡಿಯೋದಲ್ಲಿ ಸಂಗೀತ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಕುಮಾರಿ ಸ್ವಸ್ತಿ, ಕುಮಾರಿ ಲೇಖನ, ಕುಮಾರ ಸಾಯಿ ಜಶ್ವಂತ, ಸಂಗೀತ ಗಾಯನ ಮಾಡಿದರು. ಎ ತಿಂದಪ್ಪ ಗಾಯನ ಸೇರಿದಂತೆ ಕ್ಯಾಶಿಯೋ ನುಡಿಸಿದರು. ಇವರ ಜೊತೆಗೆ ಕೂಡ್ಲಿಗಿಯ ಗೋವಿಂದಪ್ಪ ಕಟ್ಟಿಮನಿ ಇವರ ಶಿಷ್ಯ ವೆಂಕಟೇಶ್ ತಬಲಾ, ಸಾಸಲವಾಡದ ಚನ್ನವೀರ ಸ್ವಾಮಿ ಡೌಲಕ್ ಹಾಗೂ ಮತ್ತೋರ್ವ ತಬಲಾ ವಾದಕ ಕೆ,ಶಂಕರ್ ಕುಪ್ಪಿನಕೆರೆ, ಗೆಜ್ಜೆನಾದ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಬಸವ ಟಿ ವಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ರಾದ ಕೆ, ಆರ್, ಯಶೋದಮ್ಮ ಇವರು ಸಂಗೀತ ಕಲಾವಿದರ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದ್ದಾರೆ. ಶ್ಲಾಘನೆ: ಈ ಕಲಾವಿದರ ಕಲಾ ಪ್ರತಿಭೆಗಳಿಗೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ನಾಗರೀಕರು ಜನಪ್ರತಿನಿಧಿಗಳು, ಕಲಾವಿದರು, ವಿವಿಧ ಸಮಾಜದ ಮುಖಂಡರು,ವಿವಿಧ ಜನಪರ ಸಂಘಟನೆಯ ಪದಾಧಿಕಾರಿಗಳು, ಸೇರಿದಂತೆ ಅನೇಕರು ಶ್ಲಾಘಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.