ಬಳ್ಳಾರಿ : ಕಲ್ಯಾಣ ಕರ್ನಾಟಕ ಕಾರ್ಮಿಕರ ಸಂಘದ ಪದಾಧಿಕಾರಿಗಳನ್ನು ನೇಮಕ ಮಾಡಿಲಾಗಿದೆ. ಸಂಘವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಿ, ಕಾರ್ಮಿಕರ ಬೇಡಿಕೆಗಳಿಗೆ ಹೋರಾಟ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಶ್ರೀ ಲಕ್ಷ್ಮಣ.ಬಿ.ಕೆ ರವರು ತಿಳಿಸಿದರು.
ಕಾರ್ಮಿಕರ ಕ್ಷೇತ್ರಗಳಲ್ಲಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಕಡಿಮೆ ಸಂಬಳ ಹಾಗೂ ಅದರ ನಿಗದಿತ ಪಾವತಿ ಇಲ್ಲದಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಸರ್ಕಾರದಿಂದ ಹಲವು ಯೋಜನೆಗಳಿದ್ದರೂ ಬಳಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕಲ್ಯಾಣ ಕರ್ನಾಟಕ ಕಾರ್ಮಿಕ ಸಂಘದ ಮೂಲಕ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ರೂಪಿಸಲಾಗುವುದು ಹಾಗೂ ಸಂಘದ ಏಳಿಗೆಗೆ ಮತ್ತು ಶ್ರಯೋಭಿವೃದ್ಧಿಗಾಗಿ ಸರ್ಕಾದಿಂದ ಸಿಗುವ ಸೌಲಭ್ಯಗಳನ್ನು ಕಾರ್ಮಿಕರಿಗೆ ತಲುಪಿಸುವಲ್ಲಿ ನಮ್ಮ ಸಂಘವು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಪದಾಧಿಕಾರಿಗಳು ಈ ರೀತಿ ಇದ್ದಾರೆ.
ಗೌರವ ಅಧ್ಯಕ್ಷರು – ಜೆ.ವಿ.ಮಂಜುನಾಥ
ಕಾರ್ಯಧ್ಯಕ್ಷರಾಗಿ – ಯಾಳಗಿ ಮಲ್ಲಿಕಾರ್ಜುನ
ಅಧ್ಯಕ್ಷರಾಗಿ – ಲಕ್ಷ್ಮಣ.ಬಿ.ಕೆ
ಉಪಾಧ್ಯಕ್ಷರುಗಳಾಗಿ – ಅಸುಂಡಿ ಸುರೇಶ್ , ಶಿವನಾಯಕ್
ಪ್ರಧಾನ ಕಾರ್ಯದರ್ಶಿಯಾಗಿ – ಅನಿಲ್ ಕುಮಾರ್. ಜಿ
ಸಂಘಟನೆಯ ಕಾರ್ಯದರ್ಶಿಯಾಗಿ – ಸಿದ್ದೇಶ್ ಮುಂಡ್ರಿಗಿ
ಇನ್ನೂ ಹಲವಾರು ಸದಸ್ಯರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಿಕೆ ಪ್ರಕಟಣೆ ತಿಳಿಸಿದರು.