12.1 C
New York
Saturday, November 2, 2024

ಪಂಚಮಸಾಲಿ ಮಕ್ಕಳ ಶಿಕ್ಷಣ ಉದ್ಯೋಗಕ್ಕಾಗಿ ಹೋರಾಟ ನಮ್ಮ ಗುರಿ: ಶ್ರೀಗಳು

ಕೂಡ್ಲಿಗಿ: ಶಿಕ್ಷಣ, ಉದ್ಯೋಗದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸರ್ಕಾರ ಮೀಸಲಾತಿ ನೀಡಬೇಕೆಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಜಗದ್ಗುರು ಶ್ರೀ ಬಸವಜಯ ಮತ್ಯುಂಜಯ ಸ್ವಾಮಿಗಳು ಸರಕಾರವನ್ನು ಆಗ್ರಹಿಸಿದರು. ತಾಲೂಕಿನ ಎಂ.ಬಿ ಅಯ್ಯನಹಳ್ಳಿ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಶಾಲೆ ಆವರಣದಲ್ಲಿ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕೆಂದು ಈಗಾಗಲೇ ಮನವಿ ಮಾಡಲಾಗಿದೆ.

ಉಪ ಜಾತಿಗಳಾದ 42 ಒಳ ಪಂಡಗಳಲ್ಲಿ ಪಂಚಮಸಾಲಿ ಸಮಾಜವು ಒಂದಾಗಬೇಕು. ಇದರಿಂದ ಸರಕಾರದ ಸವಲತ್ತುಗಳನ್ನು ಸಮಾಜ ಬಾಂಧವರು, ಮಕ್ಕಳು ಪಡೆಯಬೇಕೆಂದು ತಿಳಿಸಿದರು. ಪಾಲಕರು ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಒದಗಿಸಬೇಕು. ಪಂಚಮಸಾಲಿ ಸಮಾಜ ಯಾರಿಗೂ ಎಂದಿಗೂ ಕೇಡು ಬಯಸಿದ ಸಮಾಜವಲ್ಲ. ಎಲ್ಲರನ್ನು ಒಗ್ಗೂಡಿಸಿ ಸಮಾಜ ಮುನ್ನಡೆಸುವ ಶಕ್ತಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕಿದೆ. ನಮ್ಮ ಸಮಾಜದ ವಿದ್ಯಾರ್ಥಿಗಳು ಸಮಾಜಕ್ಕೆ ಗೌರವ ತಂದು ಕೊಡಬೇಕು. ಕೂಡ್ಲಿಗಿ ತಾಲೂಕಿನಲ್ಲಿ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಿ ಕೊಡಬೇಕು, ಸಮಾಜಕ್ಕೆ 2ಎ ಮೀಸಲಾತಿ ಹೋರಾಟಕ್ಕೆ ಬೆಂಬಲ ಕೊಡಬೇಕೆಂದು ಕ್ಷೇತ್ರದ ಶಾಸಕರಿಗೆ ಮನವಿ ಮಾಡಿದರು.

ಈ ವೇಳೆ ಸನ್ಮಾನ ಸ್ವೀಕರಿಸಿದ ಕೂಡ್ಲಗಿ ಶಾಸಕ ಡಾ ಎನ್ ಟಿ ಶ್ರೀನಿವಾಸ್ ಮಾತನಾಡಿ, ಪ್ರತಿಭಾ ವಂತ ಮಕ್ಕಳನ್ನು ಗುರುತಿಸಿ, ಪ್ರೋತ್ಸಾಹಿ ಸುವ ಮೂಲಕ ದೇಶಕ್ಕೆ ಕೊಡುಗೆ ನೀಡು ವಂತೆ ಜಾಗೃತಗೊಳಿಸಬೇಕು. ಹಾಗೂ ವಿದ್ಯಾರ್ಥಿಗಳು ಹಿರಿಯರಿಗೆ, ಶಿಕ್ಷಕರಿಗೆ ಗೌರವ ಕೊಡಬೇಕು. ಎಲ್ಲ ವರ್ಗಗಳದವರಂತೆ ಹಕ್ಕುಗಳನ್ನು ಪಡೆಯಬೇಕೆಂದು ತಿಳಿಸಿದರು. ಪಂಚಮಸಾಲಿ ಸಮುದಾಯದವರ ಆಶೀರ್ವಾದದೊಂದಿಗೆ ಶಾಸಕನಾಗಿದ್ದೇನೆ ಎಂದರು. ಈ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ, ಡಿಗ್ರಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ನಿವೃತ್ತ ನೌಕರರು ಹಾಗೂ ಸಾಧಕರಿಗೆ, ರೈತರಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ವೀರಶೈವ ಪಂಚಮಸಾಲಿ ಸಂಘದ ತಾಲೂಕ್ ಅಧ್ಯಕ್ಷ ಹೊಂಬಾಳೆ ರೇವಣ್ಣ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ವಿಜಯಾನಂದ ಕಾಶಪ್ಪನವರ ವೀರಶೈವ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ವೇಳೆ ಹಿರಿಯ ಮುಖಂಡ ಚಿದನಂದಪ್ಪ, ಬ್ಲಾಕ್ ಕಾಂಗ್ರೆಸ್ ತಾಲೂಕ ಅಧ್ಯಕ್ಷ ಗುರುಸಿದ್ದನಗೌಡ್ರು, ಜಿಂಕಲ್ ನಾಗಮಣಿ, ನಿವೃತ್ತಿ ಇ ಓ ಬಸಣ್ಣ, ಕಗೋಳಿ ಕೊಟ್ರೇಶ್, ಗುಂಡು ಮುಣುಗು ತಿಪ್ಪೇಸ್ವಾಮಿ, ಕೊಟ್ಟೂರು ಪಂಚಮಸಾಲಿ ಅಧ್ಯಕ್ಷ ಶಿವಣ್ಣ, ಬಣವಿಕಲ್ಲು ಎರಿಸ್ವಾಮಿ, ವಿದ್ಯಾರ್ಥಿಗಳು, ಸಮುದಾಯದ ಹಿರಿಯರು, ಮಹಿಳೆಯರು ಇದ್ದರು. ಕೊಟ್ರಪ್ಪನವರು ವಾಸ್ತವಿಕ ನುಡಿದರು, ಬಸಮ್ಮ ಅವರ ತಂಡದಿಂದ ಪ್ರಾರ್ಥನೆ ನಿರ್ವಹಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles