ಕೂಡ್ಲಿಗಿ : ಶಿಕ್ಷಕರು ದೇಶ ಕಟ್ಟುವ, ಸೃಜನಶೀಲ ಸಮಾಜವನ್ನು ನಿರ್ಮಿಸುವ, ಮಾನವೀಯ ಮೌಲ್ಯಗಳಿಗೆ ಮನ್ನಣೆ ನೀಡುವ ಶಿಷ್ಯರನ್ನು ರಾಷ್ಟ್ರಕ್ಕೆ ಅರ್ಪಿಸುವ ಕೆಲಸ ಸದಾ ಮಾಡುತ್ತಿರಬೇಕು. ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ದಾರಿ ತೋರಿಸುವವನೇ ನೈಜ ಗುರು ಎಂದು ಮುಖ್ಯ ಶಿಕ್ಷಕ ಬಿ.ಜಿ ಅಜ್ಜಯ್ಯ ಹೇಳಿದರು. ತಾಲೂಕಿನ ಹೂಡೇಂ ಗ್ರಾಮದ ಶ್ರೀ ಕಂಬಳರಂಗ ಪ್ರೌಢ ಶಾಲೆಯಲ್ಲಿ ಸುಮಾರು 33ವರ್ಷ 8ತಿಂಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ತೋಟಗಾರಿಕೆ ಶಿಕ್ಷಕ ಜಂಬುನಾಥ ಅವರನ್ನು ಮಂಗಳವಾರ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. ಈ ವೇಳೆ ನರಸಿಂಹಗಿರಿ ವಿದ್ಯಾ ಸಂಸ್ಥೆಯ ಪ್ರಾಯೋಜಕರು ದಿವಗಂತ ಎನ್.ಟಿ ಬೊಮ್ಮಣ್ಣ ಅವರಿಗೆ ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ ಎನ್ ಟಿ ಶ್ರೀನಿವಾಸ್ ಹಾಗೂ ಸೋದರ ಎನ್ ಟಿ ತಮ್ಮಣ್ಣ ಅವರಿಗೆ ಇಂತಹ ನರಸಿಂಹಗಿರಿ ವಿದ್ಯಾ ಸಂಸ್ಥೆಯು ಹೆಚ್ಚಿನ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಜರಿದ್ದು ಪಾಠ ಕಲಿಸಿದ ಗುರುವಿಗೆ ಗುರುವಂದನೆ ಅರ್ಪಿಸಿದರು.
ಪ್ರೀತಿಯ ವಿದ್ಯಾರ್ಥಿಗಳಿಂದ ಸನ್ಮಾನ ಹಾಗೂ ಉಡುಗೊರೆ ಸ್ವೀಕರಿಸಿ ಮಾತನಾಡಿದ ಅವರು, ಒಂದೇ ಶಾಲೆಯಲ್ಲಿ 33 ವರ್ಷ 8 ತಿಂಗಳು ಕಾಲ ಸೇವೆ ಸಲ್ಲಿಸಿದ್ದು ನಿಜಕ್ಕೂ ಸಂತೋಷ, ಆತ್ಮತೃಪ್ತಿ ತಂದಿದೆ. ಇದೇ ಶಾಲೆಯಿಂದ ನಿವೃತ್ತಿ ಹೊಂದುತ್ತಿರುವುದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣ ಎಂದು ಹೇಳಿದರು. ಈ ಸಂದರ್ಭದಲ್ಲಿ ನರಸಿಂಹನಗಿರಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ರುದ್ರಣ್ಣ, ಶಾಲೆಯ ಶಿಕ್ಷಕರಾದ ದಾದಾ ಕಲಂದರ್, ಎಂ ಸೋಮಣ್ಣ, ಸುಪ್ರೀತ್ ಕುಮಾರ್, ಪ್ರಹ್ಲಾದ, ಲಲಿತಮ್ಮ ಹಾಗೂ ರಮೇಶ್, ಚಿನ್ನ ಸ್ವಾಮಿ ಸೇರಿದಂತೆ ಬೋಧ ಕೇತರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.