ಬಳ್ಳಾರಿ : ಬಳ್ಳಾರಿ ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿಯ ಹೊರ ಗುತ್ತಿಗೆ ನೌಕರರು ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಇಂದು ಕರ್ತವ್ಯಕ್ಕೆ ಗೈರು ಹಾಜರಾಗಿ ವಿವಿ ಆಡಳಿತ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ವಿವಿಯ 137 ಹೊಸ ಗುತ್ತಿಗೆ ನೌಕರರಿಗೆ ಗುತ್ತಿಗೆ ಪಡೆದ ಸಂಸ್ಥೆ 1.07 ಕೋಟಿ ರೂ ವೇತನವನ್ನು ನೀಡದೆ ವಂಚನೆ ಮಾಡಿತ್ತು. ವಿವಿ ನೀಡಿದರೂ ಸಂಸ್ಥೆ ನೀಡದೆ ಇದ್ದರ ಬಗ್ಗೆ ನೌಕರರು ಆಕ್ಷೇಪ ಎತ್ತಿ ಹೋರಾಟ ಮಾಡಿದ್ದರು. ಅದಕ್ಕಾಗಿ ಸಮಿತಿ ರಚಿಸಿ ಆಗಿರುವ ಲೋಪದ ಬಗಗೆ ವರದಿ ನೀಡಿತ್ತು.
ವರದಿ ನೀಡಿ ವರ್ಷಕಳೆದರೂ ಬಾಕಿ 1.07 ಕೋಟಿ ರೂ ಹಣ ನೌಕರರಿಗೆ ಪಾವತಿ ಆಗಿಲ್ಲ. ಈ ತಿಂಗಳ 31ರಂದು ಕುಲಪತಿಗಳು ನಿವೃತ್ತರಾಗಲಿದ್ದಾರೆ. ನಂತರ ಹೊಸ ಕುಲಪತಿಗಳು ಬಂದರೆ ಇದು ನನಗೆ ಸಂಬಂಧಿಸಿದ್ದಲ್ಲ ಎಂದು ಸಬೂಬು ಹೇಳಬಹುದು.
ವಿವಿಯ ಘಟಿಕೋತ್ಸವದ ವೇಳೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕುಲಪತಿ ಸಿದ್ದು ಪಿ.ಅಲಗೂರು ಅವರು ಈ ತಿಂಗಳ ಅಂತ್ಯದೊಳಗೆ ಬಾಕಿ ವೇತನ ಬಿಡುಗಡೆ ಮಾಡಲಿದೆಂದು ಹೇಳಿದ್ದರೆ, ಅದರೆ ಆಗಿಲ್ಲ, ಅದಕ್ಕಾಗಿ ನೌಕರರು ವಿವಿ ಆಡಳಿತಧೋರಣೆ ವಿರುದ್ಧ ಪ್ರತಿಭಟನೆ ನಡೆಸಿದರು.