9.2 C
New York
Wednesday, November 13, 2024

ಹುಡೇಂ ಗ್ರಾ.ಪಂ ಅಧ್ಯಕ್ಷರಾಗಿ ಬಿ ರಾಮಚಂದ್ರಪ್ಪ ಆಯ್ಕೆ

ಕಾನ ಹೊಸಹಳ್ಳಿ : ಸಮೀಪದ ಹೂಡೇಂ ಗ್ರಾಮ ಪಂಚಾಯಿತಿಯ 2ನೇ ಅವಧಿಗೆ ಅಧ್ಯಕ್ಷರು ಉಪಾಧ್ಯಕ್ಷರ ಚುನಾವಣೆ ಜರಗಿತು. ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 19 ಜನ ಸದಸ್ಯರುಗಳನ್ನು ಹೊಂದಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಿಗಧಿಪಡಿಸಿದ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿ ರಾಮಚಂದ್ರಪ್ಪ ಹಾಗೂ ಉಪಾಧ್ಯಕ್ಷರಾಗಿ ಪ್ಯಾರಿ ಮಾಬಿ ಅಬ್ದುಲ್ ಘನಿಸಾಬ್ ಆಯ್ಕೆಯಾಗಿದ್ದಾರೆ ಎಂದು ಗ್ರಾಪಂ ಚುನಾವಣಾಧಿಕಾರಿ ಕೂಡ್ಲಿಗಿ ಸಿಡಿಪಿಒ ನಾಗನಗೌಡ ಪಾಟೀಲ್ ಘೋಷಿಸಿದ್ದಾರೆ.ಬಿ ರಾಮಚಂದ್ರಪ್ಪಗೆ 7 ಮತ ಪಡೆದುಕೊಂಡಿದ್ದರು, ಜೊಳ್ಳು ಪಾಲಯ್ಯ 6 ಮತಗಳನ್ನು ಪಡೆದಿದ್ದರು. ಒಟ್ಟು 19 ಸದಸ್ಯರಲ್ಲಿ ಎಲ್ಲಾರು ಮತದಾನ ಮಾಡಿದರು. 6 ಮತಗಳು ತಿರಸ್ಕೃತಗೊಂಡಿದ್ದವು ಚುನಾವಣಾ ಅಧಿಕಾರಿಗಳು ಮತ ಎಣಿಕೆ ಮಾಡಿ ರಾಮಚಂದ್ರಪ್ಪ ಅಧ್ಯಕ್ಷರೆಂದು ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಪಿಡಿಒ ಲಕ್ಷ್ಮಿ ಬಾಯಿ, ಸಿಪಿಐ ವೆಂಕಟಸ್ವಾಮಿ, ಪಿಎಸ್ಐ ಎರಿಯಪ್ಪ ಅಂಗಡಿ, ಕಾರ್ಯದರ್ಶಿಗಳಾದ ತಿಪ್ಪೇರುದ್ರಪ್ಪ, ಕಂದಾಯ ಇಲಾಖೆ, ಪೋಲಿಸ್ ಇಲಾಖೆ ಸೇರಿದಂತೆ ಗ್ರಾ.ಪಂ ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles