ಕೂಡ್ಲಿಗಿ: ಮಕ್ಕಳಿಗೆ ಸಣ್ಣ ಕಥೆ ಬರೆಯುವ ಹವ್ಯಾಸ ಬೆಳೆಸುವುದು ಸೂಕ್ತ. ಸರ್ಕಾರ ಕೂಡ ಇದಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಶಿಕ್ಷಕ ದಾದಾ ಕಲಂದರ್ ಹೇಳಿದರು. ಸಮೀಪದ ಹೂಡೇಂ ಗ್ರಾಮದ ಶ್ರೀ ಕಂಬಳರಂಗ ಸ್ವಾಮಿ ಪ್ರೌಢ ಶಾಲೆಯಲ್ಲಿ ಗ್ರಾ.ಪಂ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಓದುವ ಬೆಳಕು ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ಸಣ್ಣ ಕಥೆ ಬರೆಯುವ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಮಕ್ಕಳ ಬುದ್ಧಿವಂತಿಕೆ ವಿಕಾಸಕ್ಕೆ ಇಂತಹ ಕಾರ್ಯಕ್ರಮ ಪೂರಕವಾಗಿದ್ದು, ಮಕ್ಕಳಲ್ಲಿ ಇಂತಹ ಹವ್ಯಾಸಗಳನ್ನು ಬೆಳೆಸಬೇಕು. ಸಣ್ಣ ಕಥೆ ಬರೆಯುವುದರಿಂದ ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಪ್ರಹ್ಲಾದ್ ಶಿಕ್ಷಕರು ಮಾತನಾಡಿ ಗ್ರಂಥಪಾಲಕರು ಸರ್ಕಾರದ ಆದೇಶದಂತೆ ಪ್ರತಿಯೊಂದು ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲಾ ಶಾಲೆಗಳಿಗೂ ಭೇಟಿ ನೀಡಿ ಕಾರ್ಯಕ್ರಮದ ವಿಷಯವನ್ನು ಮಕ್ಕಳಿಗೆ ತಿಳಿಹೇಳಿ ಪ್ರತಿಯೊಂದು ಸ್ಪರ್ಧೆಗಳನ್ನು ಆಯೋಜಿಸಿ ಮಕ್ಕಳನ್ನು ಹುರಿದುಂಬಿಸಿ ಗ್ರಂಥಾಲಯದ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸುತ್ತಾರೆ. ಅವರ ಕಾರ್ಯವೈಖರಿ ನಮಗೆಲ್ಲ ಸಂತಸ ತಂದಿದೆ ಎಂದು ತಿಳಿಸಿದರು.
ಗ್ರಂಥಪಾಲಕರಾದ ತುಡುಮ ಗುರುರಾಜ್ ಮಾತನಾಡಿ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ಸಣ್ಣ ಕಥೆ ಬರೆಯುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ ಎಲ್ಲಾ ಶಾಲೆಯ ಮಕ್ಕಳು ಭಾಗವಹಿಸಿ ಸಣ್ಣ ಕಥೆಗಳನ್ನು ಅತ್ಯಂತ ಸುಂದರವಾಗಿ ಬರೆದಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಅಜ್ಜಪ್ಪ, ಸ.ಹಿಪ್ರಾ ಶಾಲೆಯ ಮುಖ್ಯ ಶಿಕ್ಷಕ ನರಸಿಂಹ ರೆಡ್ಡಿ, ಕನಕ ವಿದ್ಯ ಕೇಂದ್ರದ ಮುಖ್ಯ ಶಿಕ್ಷಕಿ ಸುನೀತಾ, ದೈಹಿಕ ಶಿಕ್ಷಕರಾದ ಸುಪ್ರೀತ್ ಕುಮಾರ್, ಸಹ ಶಿಕ್ಷಕರಾದ ದಾದಾ ಕಲಂದರ್, ಪ್ರಹ್ಲಾದ್, ಸೋಮಶೇಖರ್, ಲಲಿತಾ, ಚಿನ್ನಸ್ವಾಮಿ ಸೇರಿದಂತೆ ಶ್ರೀ ಕಂಪಳ ರಂಗ ಸ್ವಾಮಿ ಪ್ರೌಢ ಶಾಲೆ ಹಾಗೂ ಸ.ಹಿ.ಪ್ರಾ ಶಾಲೆ ಮತ್ತು ಶ್ರೀ ಗುರು ಕನಕ ವಿದ್ಯಾ ಕೇಂದ್ರ ಶಾಲೆಯ ಮಕ್ಕಳು ಕಥೆ ಬರೆಯುವ ಅಭಿಯಾನದಲ್ಲಿ ಭಾಗವಹಿಸಿದ್ದರು.