ಬಿಜೆಪಿಗರಲ್ಲಿ ವರ್ಣ ವ್ಯವಸ್ಥೆ ಇನ್ನೂ ಜೀವಂತ ಆಗಿದೆ ಎಂಬುದಕ್ಕೆ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಎಐಸಿಸಿ ಅಧ್ಯಕ್ಷ, ಕರ್ನಾಟಕ ಕಂಡ ಮೇರು ರಾಜಕಾರಣಿ ಮತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಅವರ ಬಣ್ಣ ಮುಂದಿಟ್ಟು ಮೂದಲಿರಿಸುವುದೇ ಸಾಕ್ಷಿ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರರಾದ ವೆಂಕಟೇಶ್ ಹೆಗಡೆ ವ್ಯಕ್ತಪಡಿಸಿದರು
ಬಲಪಂಥೀಯ ಈ ರಾಜಕಾರಣಿಗಳು ಕಪ್ಪು ಶ್ರೇಷ್ಠವಲ್ಲ ಎಂಬುದನ್ನು ಪುರಾಣ ಕಾಲದಿಂದಲೂ ನಂಬಿಕೆ ಇಟ್ಟುಕೊಂಡು ಬಂದಿದ್ದಾರೆ. ಅದು ಇದೀಗ ಬಯಲಾಗಿದೆ. ಒಬ್ಬ ವ್ಯಕ್ತಿಯ ಬಣ್ಣ, ರೂಪದ ಆಧಾರದಲ್ಲಿ ಟೀಕೆಮಾಡುವುದು ಸರಿ ಅಲ್ಲ ಎಂಬುದು ಓರ್ವ ಮಾಜಿ ಸಚಿವರಿಗೆ ತಿಳಿದಿಲ್ಲ ಎಂದರೆ ಬಿಜೆಪಿ ಅದೆಂತಹ ಶಿಸ್ತನ್ನು ಮೈಗುಡಿಸಿಕೊಂಡಿದೆ ಎಂಬುದು ಗೊತ್ತಾಗುತ್ತದೆ.
ಇನ್ನು ಉತ್ತರ ಕರ್ನಾಕಟದವರಿಗೆ ಕಾಡು,ಗಿಡ ಮರ ಎಂದರೆ ಗೊತ್ತಿಲ್ಲ ಎನ್ನುವ ಮೂಲಕ ಅರಗ ಜ್ಞಾನೇಂದ್ರ ಇಡೀ ಉತ್ತರ ಕರ್ನಾಟಕದ ಜನರು ದಡ್ಡರು, ಅವರಿಗೆ ಕನಿಷ್ಠ ಜ್ಞಾನ ಇಲ್ಲ ಎಂಬಂತೆ ಮಾತನಾಡಿದ್ದಾರೆ. ಇಂದಿಗೂ ಇಡೀ ರಾಜ್ಯದಲ್ಲಿ ಹೆಸರುವಾಸಗಿ ಆಗಿರುವ ಬೆಳೆಗಳಾದ ಬ್ಯಾಡಗಿ ಮೆಣಸಿನ ಕಾಯಿ, ಬಿಜಾಪುರ ಜೋಳ, ಜೋಳದ ರೊಟ್ಟಿ, ಚಟ್ನಿಪುಡಿ, ಬೆಳಗಾವಿಯ ಕುಂದಾ, ಧಾರವಾಡದ ಪೇಡ ಹೀಗೆ ಸಾಲು ಸಾಲು ಹೆಗ್ಗುರುತುಗಳು ನಮ್ಮವೇ. ಅಲ್ಲದೆ ಬೀಚಿ, ದ.ರಾ. ಬೇಂದ್ರೆ, ಗಿರೀಶ್ ಕಾರ್ನಾಡ್ ಸೇರಿದಂತೆ ಅನೇಕ ಮಹನೀಯರು ನಮ್ಮ ಉತ್ತರ ಕರ್ನಾಕಟದವರೆ. ಹಾಗೆ ಒಂದು ಪ್ರದೇಶದ ಜನರು ಮೂದಲಿಸುವುದು ಒಬ್ಬ ಸಜ್ಜನ ರಾಜಕಾರಣಿಯ ಲಕ್ಷಣ ಅಲ್ಲ. ಸಂಡೂರು, ಬೆಳಗಾವಿ, ಕಲಬುರ್ಗಿ, ಚಿಂಚೋಳಿ ಸೇರಿದಂತೆ ಹಲವು ಅರಣ್ಯ ಪ್ರದೇಶಗಳು ನಮ್ಮಲ್ಲಿವೆ. ಮೈಸೂರು ನಂತರದ ಅತಿ ದೊಡ್ಡ ಅರಣ್ಯ ಪ್ರದೇಶ ಇರುವುದು ನಮ್ಮ ಬೀದರ್‌ನಲ್ಲಿಯೇ.
ಇನ್ನು ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಮಾತನಾಡುವ ಯೋಗ್ಯತೆ ನಮ್ಮ ಅರಗ ಜ್ಞಾನೇಂದ್ರ ಅವರಿಗಿಲ್ಲ. ಇಂತಹುದ್ದರಲ್ಲಿ ಅವರ ಬಣ್ಣ ಹಿಡಿದು ಟೀಕೆಮಾಡಿರುವ ಜ್ಞಾನೇಂದ್ರ ನಿಜಕ್ಕೂ ತಮ್ಮಲ್ಲಿರುವ ಕುತ್ಸಿತ ಮನೋಭಾವವನ್ನು ಹೊರಹಾಕಿದ್ದಾರೆ.
ಖರ್ಗೆ ಇಡೀ ಕರ್ನಾಟಕ ನೆನಪಿಡುವಂತಹ ಹಲವು ಕೆಲಸಗಳನ್ನು ಮಾಡಿದ್ದಾರೆ. ಹೈದರಾಬಾದ್ ಕರ್ನಾಟಕಕ್ಕೆ ೩೭೧ ಜೆ ಕಲಂ ಅನ್ವಯ ಆಗುವಂತೆ ಮಾಡಿದ್ದಾರೆ. ಇಎಸ್‌ಐ ಆಸ್ಪತ್ರೆಗಳಿಗೆ ರಾಜ್ಯದಲ್ಲಿ ಕಾಯಕಲ್ಪ ನೀಡಿದ್ದಾರೆ. ಅವರು ಸಾಧನೆಯ ಕಾರಣಕ್ಕೆ ಅವರು ಇಂದು ಸ್ವತಂತ್ರಕ್ಕಾಗಿ ಹೋರಾಟ ಮಾಡಿದ ಐತಿಹಾಸಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಏರಿದ್ದಾರೆ.ಗಾಂಧಿ ಕುಟುಂಬ ಹೊರತು ಪಡಿಸಿ ಅಧ್ಯಕ್ಷ ಗಾದಿ ವಹಿಸಿಕೊಂಡು ಪಕ್ಷವನ್ನು ಅತ್ಯಂತ ಪರಿಣಾಮಕಾರಿ ಆಗಿ ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಇಂತಹ ನಾಯಕರನ್ನು ಹಿಯ್ಯಾಳಿಸುವ ಬಿಜೆಪಿಯ ಉದ್ದೇಶ ಒಂದೇ, ಒಬ್ಬ ವ್ಯಕ್ತಿಯನ್ನು ಎದುರಿಸಲು ಆಗದೇ ಇದ್ದಾಗ ಆತನ ಚಾರಿತ್ರö್ಯ ಹರಣ ಮಾಡಬೇಕೆಂಬ ದುರ್ಬುದ್ದಿ ಬಹುಶಃ ಜ್ಞಾನೇಂದ್ರರ ಜ್ಞಾನಕ್ಕೆ ಬಂದಂತೆ ಇದೆ. ಇದೇ ಕಾರಣಕ್ಕೆ ಈ ರೀತಿ ಮಾತನಾಡಿದ್ದಾರೆ, ಎಂದು ಕೆಪಿಸಿಸಿ ಮಾಧ್ಯಮ ವಕ್ತಾರರು ಹಾಗೂ ರಾಜ್ಯ ಜಂಟಿ ಸಂಯೋಜಕರು ಪ್ರಚಾರ ಸಮಿತಿಯ
ವೆಂಕಟೇಶ್ ಹೆಗಡೆ ಪ್ರಕಟಣೆ ತಿಳಿಸಿದರು.