ಬೆಂಗಳೂರು : ನಾಡಿನಾದ್ಯಂತ ಪರಂವಃ ಚಿತ್ರವು ಒಂದು ರೋಚಕ ಕಥೆ ಪೂರ್ವಜರ ಕನಸಿನ ಸಾಕಾರಕ್ಕಾಗಿ ಕಠಿಣ ಸಂದರ್ಭಗಳನ್ನು ಛಲದಿಂದ ಎದುರಿಸಿದವನ ಹೋರಾಟದ ಕಥೆಯನ್ನು ಕರುನಾಡು ಜನರು ಅಪಾರ ಮೆಚ್ಚುಗೆ ನೀಡಿ ಗೆಲ್ಲಿಸಿದೆ.
“ಪರಂವಃ” ಚಲನಚಿತ್ರವು ಕನ್ನಡ ಸಿನಿಪ್ರೇಮಿಗಳ ಮೆಚ್ಚುಗೆ ಗಳಿಸಿಕೊಂಡು ಯಶಸ್ವಿಯಾಗಿ ಮೂರನೇ ವಾರದತ್ತ ಮುನ್ನುಗ್ಗುತ್ತಿದೆ..
ಚಲನ ಚಿತ್ರವನ್ನು ವೀಕ್ಷಿಸಿ, ಪ್ರೋತ್ಸಾಹಿಸಿದ ನಮ್ಮ ಪ್ರೇಕ್ಷಕಪ್ರಭುಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ವಿಭಿನ್ನ ಕಥಾಹಂದರ ಹೊಂದಿರೊ “ಪರಂವಃ” ಚಲನಚಿತ್ರವನ್ನು ನೀವಿನ್ನು ನೋಡಿಲ್ಲವೆಂದಾದರೆ, ಮರೆಯದೆ ಹೋಗಿ ಚಿತ್ರವನ್ನು ನೋಡಿ, ಚಿತ್ರತಂಡವನ್ನು ಹಾರೈಸಿ.
ಎಂದು ಕೂಡ್ಲಿಗಿ ತಾಲೂಕಿನ ಯುವ ಪ್ರತಿಭೆ ಪ್ರೇಮ್ ಸಿಡೇಗಲ್ಲು ಇವರು ತಿಳಿರುತ್ತಾರೆ. ಪ್ರೇಮ್ ಸಿಡೆಗಲ್ ಇವರು ಚೊಚ್ಚಲ ಚಿತ್ರದಲ್ಲಿ ವಿಭಿನ್ನವಾಗಿ ಐದು ಗೆಟಪ್ ನಲ್ಲಿ ಚಿತ್ರದ ಹೀರೋ ಹಾಗೆ ನಟಿಸಿ ಇವರ ನಟನೆಯನ್ನು ನಾಡಿನ ಜನರು ಒಪ್ಪಿಕೊಂಡು ಚಿತ್ರವನ್ನು ಗೆಲುವಿನತ್ತ ತೆಗೆದುಕೊಂಡು ಹೋಗಿರುವ ಸಿನಿ ಪ್ರೇಮಿಗಳಿಗೆ ಹೃದಯ ತುಂಬಿ ಧನ್ಯವಾದಗಳು ಹೀಗೆ ಮುಂದಿನ ದಿನಗಳಲ್ಲೂ ಸಹ ಈ ಚಿಕ್ಕ ನಟನನ್ನು ಈ ನಿಮ್ಮ ಮನೆ ಮಗನಾಗಿ ನನ್ನನ್ನು ಪ್ರೋತ್ಸಾಹಿಸಿ ಎಂದು ಪ್ರೇಮ್ ರವರು ನಮ್ಮ ವಾಹಿನಿಯ ಜೊತೆ ತಮ್ಮ ಮನದಾಳದ ಮಾತನ್ನು
ಹಂಚಿಕೊಂಡಿರುತ್ತಾರೆ ಹಾಗೆ ಕೂಡ್ಗಿ ತಾಲೂಕಿನ ನೂರಾರು ಅಭಿಮಾನಿಗಳು 3ನೇ ವಾರದತ್ತ ಮುನ್ನುಗ್ಗುತ್ತಿರುವ ಚಿತ್ರಕ್ಕೆ ನಾಡಿನ ಎಲ್ಲಾ ಜನತೆಗೆ ಹೃದಯ ತುಂಬಿ ಧನ್ಯವಾದಗಳು ತಿಳಿಸಿರುತ್ತಾರೆ. ಹಾಗೂ ಪರಂವಃ ಚಿತ್ರವನ್ನು ಕೂಡ್ಲಿಗಿ ತಾಲೂಕಿನ ಜನತೆ ಚಿಕ್ಕ ಜೋಗಿಹಳ್ಳಿಯ ಕೃಷ್ಣ ಚಿತ್ರಮಂದಿರದಲ್ಲಿ ನೋಡಬಹುದು ಎಂದು ಶಾಮಿಯಾನ ಚಂದ್ರಪ್ಪ ಹಾಗೂ ಸ್ನೇಹಿತರು ಅಭಿಮಾನಿಗಳು ತಿಳಿಸಿರುತ್ತಾರೆ.