ಬಳ್ಳಾರಿ : ನಗರದ 23ನೇ ವಾರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಹಾನಂದಿ ಕೊಟ್ಟಂ ಅಂಬೇಡ್ಕರ್ ನಗರ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಂಬೇಡ್ಕರ್ ನಗರ ಶಾಲೆಯಲ್ಲಿ ಮಹಾತ್ಮಗಾಂಧಿಜೀ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿಸುವುದರ ಮೂಲಕ ಪುಷ್ಪಾರ್ಚನೆ ಮಾಡಿ ನಂತರದಲ್ಲಿ ಶಾಲೆಯ
ಮುಖ್ಯಗುರುಗಳಾದ ಶ್ರೀ.ಹೆಚ್.ನಾಗರಾಜ್ ರವರು ಮತ್ತು ಶಾಲೆಯ ಶಿಕ್ಷಕರ ವೃಂದದವರಿಂದ ಧ್ವಜಾರೋಹಣ ನೆರವೇರಿಸಿದರು, ತದನಂತರದಲ್ಲಿ ಮಾತನಾಡಿದ ಮುಖ್ಯ ಗುರುಗಳಾದ. ಹೆಚ್. ನಾಗರಾಜ್ ರವರು ಸ್ವಾತಂತ್ರ್ಯ ದಿನಾಚರಣೆ ಬಂತೆಂದರೆ ದೇಶದೆಲ್ಲೆಡೆ ಸಂಭ್ರಮ ಸಡಗರದ ವಾತಾವರಣ ನಿರ್ಮಾಣವಾಗುತ್ತದೆ. ದೇಶದ ಎಲ್ಲಾ ಕಡೆಗಳಲ್ಲಿ ರಂಗು ರಂಗಿನ ಬೆಳಕಿನ ಮಧ್ಯೆ ತ್ರಿವರ್ಣ ಧ್ವಜ ಹಾರಾಟ ಕಣ್ಮನ ಸೆಳೆಯುತ್ತದೆ ಎಂದರು, ನಂತರದಲ್ಲಿ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿದರು.
ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ನಗರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ.ರಾಜೇಶ್ , ಉಪಾಧ್ಯಕ್ಷರಾದ ಶ್ರೀ.ರಾಮ್ ಮೋಹನ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ.ಲಕ್ಷ್ಮಣ.ಎಸ್.ಭಂಡಾರಿ ಸದಸ್ಯರುಗಳಾದ ಶ್ರೀ ಬ್ರಹ್ಮಯ್ಯ , ಶ್ರೀ.ಮಂಜುನಾಥ್ , ಪ್ರಕಾಶ್.ಕೆ.ಸಿ., ಶಾಲೆಯ ಹಳೇ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಮುಖಂಡರುಗಳು ಮತ್ತು ಅಡುಗೆ ಸಹಾಯಕಾರದ ಶ್ರೀಮತಿ. ಎಮ್.ಗೌರಮ್ಮ ಮತ್ತು ರುದ್ರಮ್ಮ ರವರು ಉಪಸ್ಥಿತರಿದ್ದರು ,
ಈ ಕಾರ್ಯಕ್ರಮದ ನಿರೂಪಣೆಯನ್ನು ಶಾಲೆ ಶಿಕ್ಷಕಿಯಾದ ಶ್ರೀಮತಿ.ಪ್ರಮೀಳಾ ಬಾಯಿ.ಪಿ ರವರು ನೆಡಸಿಕೊಟ್ಟರು , ಸ್ವಾಗತವನ್ನು ಶಾಲೆ ಶಿಕ್ಷಕಿಯಾದ ಶ್ರೀಮತಿ ಸಿದ್ದಲಿಂಗಮ್ಮ.ಎಲ್ ರವರು ನೆಡಸಿದರು ಮತ್ತು ವಂದನಾರ್ಪಣೆಯನ್ನು ಶಾಲೆಯ ಅತಿಥಿ ಶಿಕ್ಷರಾದ ಶ್ರೀಮತಿ ಅನಿತ.ಹೆಚ್.ವೈ ರವರು ನೆರವೇರಿಸಿದರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದರು.