18.3 C
New York
Wednesday, November 6, 2024

ಕಾರ್ಗಿಲ್ ನಲ್ಲಿ 42 ಕಿ ಮೀ ಮ್ಯಾರಥಾನ್ ಮಾಡಿದ ಕನ್ನಡಿಗ ಮೋಹನ್ ಕುಮಾರ್ ದಾನಪ್ಪ

ಕಾರ್ಗಿಲ್: ಆಗಸ್ಟ್ 15 ರಂದು ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು 24ನೇ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಕಾರ್ಗಿಲ್ ಯುದ್ಧದಲ್ಲಿ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಜೀವ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ನಮನ “ಸಲಾಮ್ ಸೋಲ್ಜರ್ಸ್” ಶೀರ್ಷಿಕೆಯಡಿಯಲ್ಲಿ, ಯುವಕರೇ ದೇಶ ಸೇವೆಗೆ ಒಂದಾಗಿ, ಸೇನೆ ಸೇರಲು ಮುಂದಾಗಿ ಕುರಿತು ಜಾಗೃತಿಗಾಗಿ ಬಳ್ಳಾರಿ ಜಿಲ್ಲೆ ಕಂಪ್ಲಿಯ ನಿವಾಸಿ ಬೆಂಗಳೂರು ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಡಾ.ಮೋಹನ್ ಕುಮಾರ್ ದಾನಪ್ಪ ಲಡಾಖ್ ನ ಕಾರ್ಗಿಲ್ ನಲ್ಲಿ ಬಲಗೈನಲ್ಲಿ ರಾಷ್ಟ್ರಧ್ವಜ ಹಿಡಿದು ಕಾರ್ಗಿಲ್ ನಗರದಿಂದ ಕಾರ್ಗಿಲ್ ಯುದ್ದ ಸ್ಮಾರಕದವರೆಗೂ ಸತತ 5 ಗಂಟೆಗಳ ಕಾಲ ತಡೆರಹಿತ ವಿನೂತನ ಮ್ಯಾರಾಥಾನ್‌ ಓಟವನ್ನು ನಡೆಸುವ ಮೂಲಕ ಜಾಗೃತಿ ಮೂಡಿಸಿ ಜನತೆಯ ಗಮನ ಸೆಳೆದರು.

ಭಾರತ ಸೇನೆಯ ರಾಂಕ್ ಹವಾಲ್ದಾರ್ ಆನಂದ್ ಕಂಚಗಾರ್ ರವರು ಧ್ವಜ ನೀಡುವ ಮೂಲಕ ಮ್ಯಾರಾಥಾನ್ ಗೆ ಚಾಲನೆ ನೀಡಿದರು. ಕಾರ್ಗಿಲ್ ನಗರದಿಂದ ಕಾರ್ಗಿಲ್ ನಗರದಿಂದ ಹರ್ದಾಸ್, ಚನಿ ಗೌನ್ಡ್, ಕಾಖಾಸರ್, ಖಾರ್ಬ್ಸ್, ಕಾಕ್ಸರ್, ಥಾಸ್ಗಮ್, ಸೋಮತ್, ಮುಖಾಂತರ ಕಾರ್ಗಿಲ್ ಯುದ್ದ ಸ್ಮಾರಕಕ್ಕೆ ತಲುಪಿದರು,
ನಂತರ ಕರ್ನಲ್ ಪುನೀತ್ ಕಠಾರಿಯಾರವರು ಸ್ವಾಗತಿಸಿ ಸೇನೆಯ ಟೋಪಿ (ಕ್ಯಾಪ್) ತೊಡಿಸಿ ಪ್ರಶಂಸಿಸಿದರು!

ನಂತರ ಮಾತಾನಾಡಿದ ಮೋಹನ್ ದಾನಪ್ಪ ದೇಶಕ್ಕೆ ಹೆಚ್ಚು ಸೈನಿಕರನ್ನ ನೀಡಿದ ರಾಜ್ಯ ಕರ್ನಾಟಕ, ಆದರೆ ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಮಯ ಕಳೆಯುವುದು, ನಿರ್ಲಕ್ಷ್ಯತನ ಮತ್ತು ಸಾಮಾಜಿಕ ಜಾಲದ ಮೂಲಕ ಹಣ ಸಂಪಾದಿಸುವ ಪ್ರವೃತ್ತಿಗೆ ಬಿದ್ದು ದೇಶ ಸೇವೆಯ ಬಗ್ಗೆ ಇಚ್ಛೆ ಇಲ್ಲದೇ ಇರುವುದರಿಂದ ಭಾರತೀಯ ಸೇನೆಗೆ ಸೇರದೆ ಸೇರದಿರುವುದು ಮತ್ತು ನೇಮಕಾತಿಗಳಲ್ಲಿ ತೊಡಗದಿರುವುದು ದುರಂತ, ದೇಶ ಸೇವೆಗಿಂತ ಮಹತ್ತರ ಕಾರ್ಯ ಸೇನೆ ಹೊರತುಪಡಿಸಿ ಮತ್ತೊಂದಿಲ್ಲ, ಹಾಗಾಗಿ ದೇಶದ ಪ್ರತಿಯೊಬ್ಬ ಯುವಕರು ತಮ್ಮ ಮೊದಲ ಆದ್ಯತೆಯ ವೃತ್ತಿ ಸೇನೆಯಾಗಬೇಕೆಂದರು,

ಕರ್ನಾಟಕದಿಂದ 3150 ಕಿ.ಮೀ ದೂರದಲ್ಲಿರುವ ಕೇಂದ್ರಾಡಳಿತ ಪ್ರದೇಶದ ಲಡಾಖ್ ನ ಕಾರ್ಗಿಲ್ ಗೆ ಆಗಮಿಸಿ ಸಮುದ್ರ ಮಟ್ಟಕ್ಕಿಂತ 10.800 ಅಡಿಗಳಷ್ಟು ಎತ್ತರವಿರುವ ಪ್ರದೇಶದಲ್ಲಿ ಸತತ 5 ಗಂಟೆಗಳ ಕಾಲ ರಾಷ್ಟ್ರಧ್ವಜ ಹಿಡಿದು 42 ಕಿಲೋ ಮೀಟರು ಓಟ ಓಡಿದ್ದು ಕರ್ನಾಟಕದಿಂದ ಪ್ರಥಮ ಪ್ರಯತ್ನವೆಂದು ಹರ್ಷಿಸಿದರು.

ಈ ಜಾಗೃತಿ ಓಟದ ಯಶಸ್ಸನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟಿನ ಎಎಸ್‌ಜಿಐ ಕೆ.ಎಂ.ನಟರಾಜ್‌ ಮತ್ತು ಎಂಎಸ್‌ಐಎಲ್‌ನ ನಿರ್ದೇಶಕ ಡಾ.ಎ.ಎಂ.ಚಂದ್ರಪ್ಪ, ಮಾಜಿ ಎಎಜಿ ಅರುಣ್ ಶ್ಯಾಮ್, ಡಿಎಸ್ಜಿಐ ಹೆಚ್. ಶಾಂತಿ ಭೂಷಣ್. ಎಸ್ಪಿಸಿ ಎಸ್. ರಾಜಶೇಖರ್, ಸಿಜಿಸಿ ಎ.ರಾಜೇಶ್ ರವರಿಗೆ ಸಲ್ಲಿಸಿದರು. ಈ ಜಾಗೃತಿ ಓಟಕ್ಕೆ ರಾಜ್ಯದ ರಾಜ್ಯಪಾಲರು, ರಾಜ್ಯದ ಸಚಿವರು, ಹಿರಿಯ ಐಎಎಸ್‌, ಐಪಿಎಸ್ ಅಧಿಕಾರಿಗಳು, ಹೈಕೋರ್ಟಿನ ಎಎಜಿ.ಎಎಸ್ಪಿಐಗಳು, ಸಿಜಿಸಿಗಳು ಹಾಗೂ ಹಲವಾರು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದೆ ಸಂಧರ್ಭದಲ್ಲಿ ತಮ್ಮ ಮ್ಯಾರಥಾನ್ ಓಟಕ್ಕೆ ಸೇನೆ ಮತ್ತು ಪೊಲೀಸ್ ಭದ್ರತೆ ಹಾಗೂ ತುರ್ತು ಚಿಕಿತ್ಸೆಗೆ ಆಂಬುಲೆನ್ಸ್ ನೀಡಿ ಸಹಕರಿಸಿದ ಕಾರ್ಗಿಲ್ ಜಿಲ್ಲೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಕಾರ್ಗಿಲ್ ಮತ್ತು ದ್ರಾಸ್ ನಗರ ಪೊಲೀಸ್ ಠಾಣೆಯವರಿಗೆ ಹಾಗೂ ತಮ್ಮ ನೆರವಿಗಿದ್ದ ಎನ್. ಸೈಯ್ಯದ್ ವಾರೀಶ್ ಮತ್ತು ಮನೋಜ್ ಕುಮಾರ್ ದಾನಪ್ಪಗೆ ಧನ್ಯವಾದಗಳನ್ನ ಅರ್ಪಿಸಿದರು,

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles