ಬಳ್ಳಾರಿ : ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ಬಳ್ಳಾರಿ ತಾಲೂಕು ಘಟಕದ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 225ನೇ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಸಂಘದ ರಾಜ್ಯಾಧ್ಯಕ್ಷರಾದ ಬಿ. ಎಂ. ಪಾಟೀಲ್ ಮಾತನಾಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮೊದಲ ವ್ಯಕ್ತಿ ಸಂಗೊಳ್ಳಿ ರಾಯಣ್ಣ. ಭಾರತ ದೇಶದಿಂದಲೇ ಬ್ರಿಟಿಷರನ್ನು ತೊಲಗಿಸಲು ತನ್ನ ಪ್ರಾಣವನ್ನೇ ಬದಿಗಿಟ್ಟು ಹೋರಾಟ ನಡೆಸಿದರು. ಇಂತಹ ವ್ಯಕ್ತಿಯ ಹುಟ್ಟು ಹಬ್ಬದ ದಿನವಿಂದು ದೇಶದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ನಮ್ಮ ಸೌಭಾಗ್ಯವೇ ಸರಿ ಎಂದರು.
ನಂತರದಲ್ಲಿ ಜಿಲ್ಲಾಧ್ಯಕ್ಷ ಬಂಡಿಹಟ್ಟಿ ರಾಮಲಿಂಗ, ತಾಲೂಕು ಅಧ್ಯಕ್ಷ ಹಲಕುಂದಿ ವಿಜಯ್ ಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ಕೆಜಿ ಮಂಜುನಾಥ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೊಳಗಲ್ ಸಂತೋಷ್ ಕುಮಾರ್, ಕುರುಗೋಡು ತಾಲೂಕ ಅಧ್ಯಕ್ಷ ಬಸವರಾಜ್, ಕಾನೂನು ಸಲಹೆಗಾರ ಜಡೆಸ್ವಾಮಿ, ಗಾದಿಲಿಂಗ, ಗೌತಮ್, ಹೇಮಂತ್ರಾಜ್, ಸೋಮಸಮುದ್ರ ಬಸವರಾಜ್, ಸಿದ್ದಲಿಂಗಪ್ಪ, ಕಲ್ಯಾಣ್, ಮದಿರೆ ರಾಜ, ಶಾಂತರಾಜ್, ಬಸಾಪುರ ದೇವರಾಜ್, ಹಲಕುಂದಿ ಮಂಜು, ಆಂಧ್ರಳ್ ಅರವಿಂದ್, ಶಿವಕುಮಾರ್, ರಾಜಶೇಖರ್, ದೇವಣ್ಣ, ರಮೇಶ್, ತಿಪ್ಪೇಶ್, ಹೊನ್ನೂರಸ್ವಾಮಿ, ಶಿವಶಂಕರ್ ಮುಂತಾದವರು ಉಪಸ್ಥಿತರಿದ್ದರು.