18.3 C
New York
Wednesday, November 6, 2024

ದೇಶಕ್ಕೆ ಅಂಬೇಡ್ಕರ್, ಕರ್ನಾಟಕಕ್ಕೆ ದೇವರಾಜ್ ಅರಸು: ತಹಸಿಲ್ದಾರ್ ಟಿ. ಜಗದೀಶ್

ಕೂಡ್ಲಿಗಿ : ಸಾಮಾಜಿಕ ಸಮಾನತೆ ಹಿತದೃಷ್ಟಿಯಿಂದ ಕಡುಬಡವರಿಗಾಗಿ ಅನೇಕ ಕಾರ್ಯಕ್ರಮ ರೂಪಿಸಿ ಬಡವರ ಬದುಕಿನಲ್ಲಿ ಹೊಸ ಆಶಾಕಿರಣ ಮತ್ತು ಹೊಸ ಬದುಕಿನ ಆಶಾಕಿರಣ ಮೂಡಿಸಿದವರು ಡಿ.ದೇವರಾಜ ಅರಸುರವರು ಎಂದು ತಾಹಶೀಲ್ದಾರ್ ಟಿ ಜಗದೀಶ್ ಹೇಳಿದರು. ತಾಲ್ಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪ್ರವಾಸಿ ಮಂದಿರದಲ್ಲಿ ಶೋಷಿತರ ಅಭಿವೃದ್ಧಿ ಹರಿಕಾರ, ನೊಂದವರ ನಂದಾದೀಪ, ಧೀಮಂತ ನಾಯಕ ಡಿ. ದೇವರಾಜ್ ಅರಸು ರವರ 108ನೇ ಜನ್ಮದಿನಾಚರಣೆ ಅಧ್ಯಕ್ಷತೆ ವಹಿಸಿ ಭಾವಚಿತ್ರಕ್ಕೆ ಪುಷ್ಪಕ್ಕೆ

ನಮನ ಪೂಜೆ ಸಲ್ಲಿಸಿ ಮಾತನಾಡಿದರು. ದೇವರಾಜ್ ಅರಸ್ ಅವರ 108ನೇ ಜನ್ಮದಿನಾಚರಣೆಯ ಆಚರಿಸುವ ಭಾಗ್ಯ ನನಗೂ ಕೂಡ ಬಂದಿದೆ‌ ಜನರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಉಳುವವನೇ ಭೂಮಿಯ ಒಡೆಯ, ಇವರು ಕರ್ನಾಟಕದ ಅಸ್ತಿ ಎಂದರು ತಪ್ಪಾಗಲಾರದು ಎಂದು ತಿಳಿಸಿದರು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ ಮಾತನಾಡಿ ಸಾಮಾಜಿಕ ನ್ಯಾಯ ಒದಗಿಸಲು ಬಗರ ಹುಕುಂ ಸಾಗುವಳಿಕೆ ಪದ್ಧತಿ ಜಾರಿಗೆ ತಂದಿದ್ದು ಒಂದು ಐತಿಹಾಸಿಕ ಮತ್ತು ಕ್ರಾಂತಿಕಾರಿ ನಿರ್ಣಯವಾಗಿದೆ. ಇದರಿಂದ ದೀನ ದಲಿತರು, ಬಡವರು ಮತ್ತು ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು. ಡಿ. ದೇವರಾಜ ಅರಸು ಅವರು ಬಡವರ ಪರವಾಗಿದ್ದರು ಎಂದರು.

ಈ ವೇಳೆ ಬಿಸಿಎಂ ವಸತಿ ಮೇಲ್ಚಾಲಕರು ಹುಲಗಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ದೇವರಾಜ ಅರಸು ಅವರು ಜಾರಿಗೆ ತಂದ ಕ್ರಾಂತಿಕಾರಿ ಭೂ ಸುಧಾರಣೆ ಕಾಯ್ದೆ, ನಮ್ಮೆಲ್ಲರಿಗೂ ಅತ್ಯಂತ ಸ್ಫೂರ್ತಿದಾಯಕ. ಕರ್ನಾಟಕದಲ್ಲಿ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವ ಘೋಷಣೆಯನ್ನು ಅಕ್ಷರಶಃ ಪಾಲಿಸಿದವರು ದೇವರಾಜ ಅರಸು. ಹಲವಾರು ನಾಯಕರನ್ನು ಬೆಳೆಸಿದ್ದಾರೆ. ಕರ್ನಾಟಕದ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದ್ದಾರೆ. ಅವರ ಹೆಜ್ಜೆ ಗುರುತುಗಳು ಕರ್ನಾಟಕದ ಭೂಮಿಯಲ್ಲಿ ಶಾಶ್ವತವಾಗಿದೆ. ಅವರ ಹೆಸರಿನಲ್ಲಿ ಇಂದಿಗೂ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಅವರ ವಿಚಾರಧಾರೆಗಳು ಪಕ್ಷಾತೀತವಾಗಿ, ಸರ್ವ ಸಮ್ಮತವಾಗಿ ಒಪ್ಪುವಂಥ ನಾಯಕರು ಎಂದು ತಿಳಿಸಿದರು. ಇನ್ ಕಾರ್ಯಕ್ರಮವನ್ನು ಕೊತ್ತಲ ಆಂಜನೇಯ ದೇವಸ್ಥಾನದಿಂದ ಅಲಂಕೃತ ವಾಹನದಲ್ಲಿ ದಿವಂಗತ ಡಿ ದೇವರಾಜ ಅರಸು ಅವರು ಭಾವಚಿತ್ರ ಇರಿಸಿ ಪೂಜೆ ಮಾಡಿ, ವಾದ್ಯ ಮೇಳ ಗಳೊಂದಿಗೆ ಮೆರವಣಿಗೆ ಮೂಲಕ ಪ್ರವಾಸಿ ಮಂದಿರಕ್ಕೆ ಬಂದು ನಂತರ ಕಾರ್ಯಕ್ರಮ ಆಯೋಜಿಸಲಾತು‌. ಈ ಕಾರ್ಯಕ್ರಮದಲ್ಲಿ ಕ್ರೀಡಾ ಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಾಹಶೀಲ್ದಾರ್ ಟಿ ಜಗದೀಶ್, ಶಿವರಾಜ್ ಕ.ರಾ.ಸ.ನೌ.ಸಂ ಕೂಡ್ಲಿಗಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಫಿರೋಜ್ ಖಾನ್, ಬಿಸಿಎಂ ತಾಲೂಕು ಅಧಿಕಾರಿ ಪಂಪಾಪತಿ, ಮಲ್ಲಿಕಾರ್ಜುನ್ ಎಇ, ಅಂಜಿನಪ್ಪ ಹಿರಿಯ ನಿವೃತ್ತ ವಾರ್ಡನ್, ಹುಲುಗಪ್ಪ, ಅಂಗಡಿ ವೀರೇಶ್ ಕಾಸಪ ತಾಲೂಕು ಅಧ್ಯಕ್ಷ, ಗೋವಿಂದಪ್ಪ ರೇಷ್ಮೆ ಇಲಾಖೆ, ಅಬಕಾರಿ ಇಲಾಖೆ ಖಾಜಾ ಹುಸೇನ್ ಸೇರಿದಂತೆ ತಾಲ್ಲೂಕು ಆಡಳಿತ ಹಾಗೂ ತಾಲೂಕಿನ ಎಲ್ಲಾ ಬಿಸಿಎಂ ನಿಲಯ ಪಾಲಕರು ಇಲಾಖೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles