9.2 C
New York
Wednesday, November 13, 2024

ಜುಮ್ಮೊಬನಹಳ್ಳಿ ಗ್ರಾಮದಲ್ಲಿ ನಾಲ್ವಡಿ ಶಾಂತಲಿಂಗ ಶ್ರೀಗಳಿಂದ ಬುಡ್ಡೆಕಲ್ಲು ಪ್ರತಿಷ್ಠಾಪನೆ

ಕೂಡ್ಲಿಗಿ: ತಾಲೂಕಿನ ಜುಮ್ಮೊಬನಹಳ್ಳಿ ಹಾಗೂ ಜುಮ್ಮೋಬನಹಳ್ಳಿ ಮ್ಯಾಸರಟ್ಟಿ ಗ್ರಾಮಸ್ಥರ ಸಮ್ಮುಖದಲ್ಲಿ ನೂತನ ಬುಡ್ಡೆಕಲ್ಲು ಪ್ರತಿಷ್ಠಾಪನೆ ಹಾಗೂ ಶ್ರೀ ಮಲಿಯಮ್ಮ ದೇವಿಯ ಕಳಸಾರೋಹಣಕ್ಕೆ ಹೋಮ ಪೂಜೆ ಮಹೋತ್ಸವ ನೆರವೇರಿಸಿದರು. ನಂತರ ಧರ್ಮ ಸಭೆಯ ಸಾನ್ನಿಧ್ಯವನ್ನು ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ಕಣ್ವಕುಪ್ಪೆ ಗವಿಮಠ ಇವರು ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ಗ್ರಾಮಗಳ ಅಸ್ತಿತ್ವವನ್ನು ತಿಳಿಸುವ ಗ್ರಾಮಕ್ಕೆ ಯಜಮಾನ ಇದ್ದಹಾಗೆ ಪ್ರತಿಯೊಂದು ಗ್ರಾಮದಲ್ಲಿಯೂ ಬುಡ್ಡೆಕಲ್ಲು . ಇರಬೇಕು ಅನ್ನುವುದು ನಮ್ಮ ಸಂಪ್ರದಾಯಗಳು ಎಂದಿಗೂ ಮುಂದುವರೆಯಬೇಕು. ಭೂಮಿಯ ಮೇಲೆ ಹುಟ್ಟಿದ ಪ್ರತಿ ಮನುಷ್ಯನಿಗೂ ಕಷ್ಟ, ಸುಖಗಳಿವೆ, ದೇವಾನು ದೇವತೆಗಳಿಗೆ ಸಂಕಷ್ಟ ತಪ್ಪಿಲ್ಲಾ, ಮನುಷ್ಯ ಪ್ರಾಣಿಯಾದ ನಮಗೆ ತಪ್ಪುವುದೇ? ಆದರೆ ಇದರ ನಡುವೆ ಭಗವಂತನ ನಾಮಸ್ಮರಣೆಯಿಂದ ಎಲ್ಲಾ ಸಂಕಷ್ಟಗಳು ದೂರವಾಗುತ್ತವೆ. ಹಾಗಾಗಿ ಮಾನವರು ಬದುಕಿರುವಾಗ ಸದ್ಗುಣ ಬೆಳೆಸಿಕೊಂಡು ಸಂಸ್ಕಾರದ ಜೀವನ ನಡೆಸುತ್ತಾ ದಾನ ಧರ್ಮ ಪುಣ್ಯದ ಕಾರ್ಯ ಮಾಡಿದರೆ ಮಾತ್ರ ಜನ್ಮ ಸಾರ್ಥಕವಾಗಲಿದೆ ಎಂದರು.

ಈ ವೇಳೆ ಕಣ್ವಕುಪ್ಪಿ ಗವಿಮಠ ಶ್ರೀಗಳನ್ನು ವಿವಿಧ ವಾದ್ಯ ಮೇಳ, ಕುಂಭ ಕಳಸ ಮೆರವಣಿಗೆಯ ಮೂಲಕ ಶ್ರೀಗಳನ್ನು ದೇವಸ್ಥಾನಕ್ಕೆ ಕರೆತಂದು ಶ್ರೀ ಮಲಿಯಮ್ಮ ದೇವಿಯ ಗಂಗೆ ಪೂಜೆ ಮೂಲಕ ನೂತನ ಗರಿಕಲ್ಲು ಬುಡ್ಡೆ ಕಲ್ಲು ಪ್ರತಿಷ್ಠಾಪನೆ ಹಾಗೂ ಶ್ರೀ ಮಲಿಮ್ಮ ದೇವಿಯ ಕಳಸಾರೋಹಣಕ್ಕೆ ಹೋಮ ಪೂಜೆ ಕಾರ್ಯಕ್ರಮ ಮತ್ತು ಮಹಾ ಮಂಗಳಾರತಿ ನೆರವೇರಿಸಿದರು. ನಂತರ ಸಕಲ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೂಡ್ಲಿಗಿ ಕ್ಷೇತ್ರದ ಶಾಸಕ ಡಾಕ್ಟರ್ ಎನ್‌.ಟಿ ಶ್ರೀನಿವಾಸ್ ಭಾಗವಹಿಸಿ ದೇವಿಯ ಹಾಗೂ ಶ್ರೀಗಳ ಆಶೀರ್ವಾದ ಪಡೆದರು. ಇನ್ನು ಜುಮ್ಮೊಬನಹಳ್ಳಿ ಹಾಗೂ ಜೆ ಮ್ಯಾಸರಹಟ್ಟಿ ಗ್ರಾಮಸ್ಥರು, ದೇವಸ್ಥಾನ ಕಮಿಟಿಯ ಸದಸ್ಯರು, ಮುಖಂಡರು, ಮಹಿಳೆಯರು, ಮಕ್ಕಳು ಗ್ರಾಮದ ವ್ಯಾಪ್ತಿಯ ಸರ್ವ ಸದ್ಭಕ್ತರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles