ವಿಜಯನಗರ : ಜಿಲ್ಲೆಯ ಜಿಲ್ಲಾ ಮಟ್ಟ ಪ್ರೌಢಶಾಲೆಗಳ ಕ್ರೀಡಾಕೂಟ ಹಗರಿ ಬೊಮ್ಮನಹಳ್ಳಿ ತಾಲೂಕು ಗದ್ದಿಗೇರಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಯಿತು. ಜಿಲ್ಲಾ ಮುಟ್ಟು ಕ್ರೀಡಾಕೂಟದಲ್ಲಿ ಹಡಗಲಿ ತಾಲೂಕು ವಿದ್ಯಾರ್ಥಿಗಳು ವಾಲಿಬಾಲ್ ಪ್ರಥಮ ಸ್ಥಾನ ಗಳಿಸಿದರು
ಕೂಡ್ಲಿಗಿ ತಾಲೂಕಿನ ರಾಮಸಾಗರ ಹಟ್ಟಿ ಸರ್ಕಾರಿ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆದರು. ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಗೇರಿ ಗ್ರಾಮದಲ್ಲಿ ಗ್ರಾಮದ ಹಿರಿಯರು ಯುವಕರು ಶಾಲಾ ಶಿಕ್ಷಕರು ಕ್ರೀಡಾಕೂಟವನ್ನು ತುಂಬ ಚೆನ್ನಾಗಿ ಆಯೋಜಿಸಿದರು. ಹಡಗಲಿ ಮತ್ತು ರಾಮಸಾಗರ ಹಟ್ಟಿ ಸರ್ಕಾರಿ ಪ್ರೌಢಶಾಲಾ ಫೈನಲ್ ಪಂದ್ಯದಲ್ಲಿ ತೀರ್ಪುಗಾರರು ಮತ್ತು ಲೈನ್ ತೀರ್ಪುಗಾರರು ಕೂಡ. ಶಿಕ್ಷಕರು ಜವಾಬ್ದಾರಿಯನ್ನು ತೆಗೆದುಕೊಂಡು. ಸಾವಿರಾರು ಪ್ರೇಕ್ಷಕರು ಅಧಿಕಾರಿಗಳು ಈ ತಂಡವನ್ನು ವೀಕ್ಷಣೆ ಮಾಡಿದರು.
ರಾಮಸಾಗರ ಹಟ್ಟಿ ಗ್ರಾಮದ SDMC ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ GT ಮಾತನಾಡಿ ಸೋಲು ಗೆಲುವು ಸಹಜ. ಎಲ್ಲಾ ಮಕ್ಕಳು ನಮ್ಮವರೇ ಯಾರಿ ಗೆದ್ದರೂ ನಮ್ಮ ಮಕ್ಕಳೇ. ಮಕ್ಕಳು ಉರಿ ಬಿಸಿಲಿನಲ್ಲಿ ಆಟ ಆಡುವಾಗ ಎಷ್ಟು ಕಷ್ಟ. ಆ ಕಷ್ಟ ಆಟ ಆಡುವ ಮಕ್ಕಳಿಗೆ ಮಾತ್ರ ಗೊತ್ತು. ಕೆಲವೊಂದು ತೀರ್ಪುಗಾರರು ಉತ್ತಮ ಆಟವಾಡುವ ಮಕ್ಕಳಿಗೆ ಬಾ ಅನ್ಯಾಯ ಮಾಡುತ್ತಾರೆ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ. ತೀರ್ಪುಗಾರರಾಗಿ. ದೈಹಿಕ ಶಿಕ್ಷಕರೇ ಆಗಿರುತ್ತಾರೆ. ಈ ತೀರ್ಪುಗಾರರು ಮೊದಲು ಔಟ್ ಹಂತ ಹೇಳುತ್ತಾನೆ ಮುತ್ತು ಸಾವಿರಾರು ಪ್ರೇಕ್ಷಕರು ಕೂಡ ಔಟ್ ಅಂತ ಕೂಗುತ್ತಾರೆ. ಆದರೆ ಅದೇ ಲೈನ್ ತೀರ್ಪುಗಾರರು ಮೊದಲು ಔಟ್ ಅಂತ ಹೇಳಿ ನಂತರ ಗುಡ್ ಅಂತ ಹೇಳುತ್ತಾನೆ. ಈ ರೀತಿ ಫೈನಲ್ ಪದ್ಯದಲ್ಲಿ ಮಕ್ಕಳಿಗೆ ತುಂಬಾ ಅನ್ಯಾಯ ಮಾಡಿರುತ್ತಾರೆ ತೀರ್ಪುಗಾರರು ಸರಿಯಾಗಿ ತೀರ್ಪು ಕೊಡಬೇಕು. ಇಲ್ಲ ಅಂದರೆ ತೀರ್ಪುಗಾರರ ಅನ್ನುವ ಪದಕ್ಕೆ ಬೆಲೆ ಇರುವುದಿಲ್ಲ ಸಾವಿರಾರು ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸುತ್ತಿರುವಾಗ ತೀರ್ಪುಗಾರರು ಅನ್ಯಾಯದ ತೀರ್ಪನ್ನು ಕೊಟ್ಟಾಗ ಆ ತೀರ್ಪುಗಾರರನ್ನು ಗಲಾಟೆ ಮಾಡಿದರು. ತೀರ್ಪುಗಾರರು ನ್ಯಾಯ ಸಮ್ಮತವಾಗಿ ಕೊಡಬೇಕು ಎಂದು ತಿಳಿಸಿದರು
ರಾಮಸಾಗರಹಟ್ಟಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಗುರುಗಳಾದ ವೈಎಂ ಈಶಪ್ಪ ಮಾತನಾಡಿ ಸೋಲು ಹೇಗೆ ಅಂತಿಮವಲ್ಲವೋ ಹಾಗೆಯೇ ಗೆಲುವು ಶಾಶ್ವತವೂ ಅಲ್ಲ. “ಸೋಲೇ ಗೆಲುವಿನ ಸೋಪಾನ’. ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬದುಕಿನಲ್ಲಿ ಸೋತಾಗ ಮಾತ್ರ ನಾವು ಎಲ್ಲಿ ಎಡವಿದ್ದೇವೆ ಎನ್ನುವುದನ್ನು ತಿಳಿ ಯಲು ಸಾಧ್ಯ. ಹಾಗೆಯೇ ಯಶಸ್ಸಿನ ಶಿಖರವೇರಿದಾಗ ಅದರ ಹಿಂದಿನ ಪರಿ ಶ್ರಮದ ನೈಜ ಬೆಲೆಯನ್ನು ಅರಿಯಲು ಸಾಧ್ಯ. ಅಷ್ಟು ಮಾತ್ರವಲ್ಲದೆ ಶಿಖರ ಏರಿದ ಬಳಿಕ ಇಳಿಯಲೇಬೇಕು ಎಂಬುದು ಕೂಡ ಅಷ್ಟೇ ವಾಸ್ತವ. ಜಿಲ್ಲಾ ಮಟ್ಟ ವಾಲಿಬಾಲ್ ಫೈನಲ್ ಪಂದ್ಯದಲ್ಲಿ ತೀರ್ಪುಗಾರರು ಮಕ್ಕಳಿಗೆ ಅನ್ಯಾಯ ಆಗದೆ ತೀರ್ಪನ್ನು ನೀಡಬೇಕು ಸಾವಿರಾರು ಪ್ರೇಕ್ಷಕರು ಆಟವನ್ನು ನೋಡುತ್ತಾರೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದೆ ನೋಡಿಕೊಳ್ಳಬೇಕೆಂದು ತೀರ್ಪುಗಾರರಿಗೆ ತಿಳಿಸಿದನು ಶಾಲೆಯ ಶಿಕ್ಷಕರಾದ ಸುದರ್ಶನ್. ನಿಜಗುಣಪ್ಪ. ಸಿದ್ದೇಶ್. ಬಸವರಾಜ್. ಊರಿನ ಕ್ರೀಡಾ ಪ್ರೇಮಿಗಳು ಯುವಕರು ಉಪಸ್ಥಿತರಿದ್ದರು