13.4 C
New York
Tuesday, November 12, 2024

ಜ್ಞಾನ ವಿಕಾಸ ಕೇಂದ್ರದ ಮೂಲಕ ಮಹಿಳೆಯರಿಗೆ ಸ್ವಾವಲಂಬನೆ

ಕೂಡ್ಲಿಗಿ: ಮಹಿಳೆಯರ ಬದುಕನ್ನು ಬೆಳಗಿಸುವ ವಿಶೇಷ ಯೋಜನೆಯೇ ಜ್ಞಾನ ವಿಕಾಸ ಕಾರ್ಯಕ್ರಮ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಟ್ಟೂರು ತಾಲೂಕು ಯೋಜನಾಧಿಕಾರಿ ನವೀನ ಕುಮಾರ ತಿಳಿಸಿದರು. ತಾಲೂಕಿನ ಬಣವಿಕಲ್ಲು ಗ್ರಾಮದ ಸಮುದಾಯ ಭವನದಲ್ಲಿ ಶುಕ್ರವಾರ ಜ್ಞಾನ ವಿಕಾಸ ಕೇಂದ್ರದ 3ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಕೊಟ್ಟೂರು ಯೋಜನೆ ವ್ಯಾಪ್ತಿಯ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೂಜ್ಯ ಹೇಮಾವತಿ ಹೆಗ್ಗಡೆಯವರ ಕನಸಿನ ಕೂಸಾದ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರ ವ್ಯಕ್ತಿತ್ವ ವಿಕಸನ, ಸಂಸ್ಕಾರ, ನಮ್ಮ ಸಂಸ್ಕೃತಿ ಕಾಪಾಡುವುದು, ಸ್ವ ಉದ್ಯೋಗ ಮಾಹಿತಿ, ಕುಟುಂಬದ ಆರೋಗ್ಯ ಕಾಪಾಡುವುದು,

ಹಿಂದೆ ಮಹಿಳೆಯರು ಮನೆಯಿಂದ ಹೊರಗೆ ಬಂದು ಮಾಹಿತಿ ಕೊಡಲು ಕೂಡ ತುಂಬಾ ಭಯಪಡುತ್ತಿದ್ದರು. ಧರ್ಮಸ್ಥಳದ ಜ್ಞಾನವಿಕಾಸ ಕಾರ್ಯಕ್ರಮದ ದಿಸೆಯಿಂದ ಮಹಿಳೆಯರು ಎಲ್ಲಾ ರೀತಿಯಲ್ಲಿ ಮುಂದೆ ಬಂದಿದ್ದು, ಜೊತೆಯಲ್ಲಿ ಆಟೋಟ ಸ್ಪರ್ಧೆಯಲ್ಲಿ ಕೂಡ ತಮ್ಮ ವಯಸ್ಸನ್ನು ಮರೆತು ಸಕ್ರಿಯವಾಗಿ ಭಾಗವಹಿಸಿದ್ದನ್ನು ಕಂಡು ತುಂಬಾ ಹೆಮ್ಮೆಯೆನಿಸುತ್ತಿದೆ ಎಂದರು. ಈ ಕಾರ್ಯಕ್ರಮದ ಸಾವಿತ್ರಿ ನಾಗರಾಜ್ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪ್ರಸ್ತಾವಿಕ ಮಾತನಾಡಿದರು. ಈ ಕಾರ್ಯಕ್ರಮದ ಬಿ.ಎಂ ಭಾಗ್ಯಮ್ಮ ಅಧ್ಯಕ್ಷರು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷತೆ ವಹಿಸಿದ್ದರು, ಶಾಕುಂತಲಮ್ಮ ಜೆವಿಕೆ ಕೇಂದ್ರದ ಹಿರಿಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಂತ ಕುಮಾರಿ, ಸ್ವಾಗತ ಕುಬೇಂದ್ರ ಕುಮಾರ್ ಎಚ್ ವಲಯ ಮೇಲ್ವಿಚಾರಕರು ನೆರವೇರಿಸಿದರು, ಸುನಿತಾ ಸೇವಾ ಪ್ರತಿನಿಧಿ ಸೇವಾ ಪ್ರತಿನಿಧಿಗಳು ಮತ್ತು ಸಂಘದ ಸರ್ವ ಸದಸ್ಯರು ಊರಿನ ಮುಖಂಡರು ಉಪಸಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles