ವಿಜಯನಗರ : ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಡಿ ಭಾಗದ ಗ್ರಾಮ ಚಿರತ ಗುಂಡು ಗ್ರಾಮದ ರೈತ ಮಂಜಣ್ಣ ನವರ ಜಮೀನು ಮೀನು ಕೆರೆ ಕಂದಾಯ ಗ್ರಾಮದಲ್ಲಿ ಬರುತ್ತದೆ ಜಮೀನಿನಲ್ಲಿ ಸುಮಾರು 6 ಎಕರೆಯಲ್ಲಿ ಮೆಕ್ಕೆಜೋಳ ಹಾಕಿರುತ್ತಾರೆ ರಾತ್ರಿ ಸಮಯದಲ್ಲಿ ಕರಡಿಗಳ ಹೊಲದಲ್ಲಿ ಮೆಕ್ಕೆಜೋಳವನ್ನು ತುಂಬಾ ಹಾನಿಯಾಗಿರುತ್ತದೆ.
ಈಗಾಗಲೇ ಮೆಕ್ಕೆಜೋಳ ಫಸಲಿಗೆ ಬಂದಿದ್ದರಿಂದ ಕರಡಿಗಳು ಸಾಕಷ್ಟು ಬೆಳೆಯನ್ನು ಹಾನಿ ಮಾಡಿದ್ದಾವೆ. ಇತ್ತೀಚಿನ ದಿನಗಳಲ್ಲಿ ಕರಡಿಗಳ ಹಾವಳಿ ಕೂಡ ಹೆಚ್ಚಾಗಿದ್ದರಿಂದ. ರೈತರು ಕೂಡ ರಾತ್ರಿ ಸಮಯದಲ್ಲಿ ಜಮೀನಿನ ಕಡೆಗೆ ಬರುವುದಿಲ್ಲ. ಸ್ವಲ್ಪ ಕತ್ತಲು ಆವರಿಸಿದರೆ ಸಾಕು ಕರಡಿಗಳು ಮೆಕ್ಕೆಜೋಳ ಪಪ್ಪಾಯಿ ಇತರೆ ತೋಟಗಳಿಗೆ ಬಂದು ಬೆಳೆಗಳನ್ನು ಹಾನಿ ಮಾಡುತ್ತವೆ. ಈ ರೀತಿ ತಾಲೂಕಿನಲ್ಲಿ ಸಾಕಷ್ಟು ಬೆಳೆಗಳು ಕಾಡು ಪ್ರಾಣಿಗಳಿಂದ ಹಾನಿಯಾಗಿದೆ. ರೈತರು ಬೀಜ ಗೊಬ್ಬರ ಸಾಲ ಸೋಲಾ ಮಾಡಿ. ಬಿತ್ತನೆ ಮಾಡಿದ್ದಾರೆ. ಈಗ ಮಳೆಗಾಲ ಕೈ ಕೊಟ್ಟಿದ್ದಾರೆ. ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ
ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುವ ಭರವಸೆಯಿಂದ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ಇದ್ದಕ್ಕಿದ್ದಂತೆ ಮಳೆ ಕೈಕೊಟ್ಟ ಕಾರಣ ಬೆಳೆ ಒಣಗುವ ಹಂತ ತಲುಪಿತ್ತು. ಕೊಳವೆಬಾವಿಯಲ್ಲಿ ಲಭ್ಯವಿದ್ದ ಅತ್ಯಲ್ಪ ನೀರಿಗೆ ಡ್ರಿಪ್ ಅಳವಡಿಸಿಕೊಂಡು ರಾತ್ರಿ-ಹಗಲು ಕಷ್ಟಪಟ್ಟು ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದೆ. ರಾತ್ರೋ ರಾತ್ರಿ ಹಿಂಡು ಹಿಂಡು ಕರಡಿಗಳು ಹೊಲಕ್ಕೆ ನುಗ್ಗಿ ಮೆಕ್ಕೆಜೋಳದ ತೆನೆ ಸಿಗಿದು, ತಿಂದು, ಕಿತ್ತು ಹಾಳು ಮಾಡಿ. ನೆಲಕ್ಕೆ ಬಿದ್ದ ಬೆಳೆ ನೋಡಿದರೆ ಜೀವ ಹಿಂಡುತ್ತದೆ. ನಮ್ಮ ಜಮೀನಿನಲ್ಲಿ ಈ ರೀತಿ ಮೆಕ್ಕೆಜೋಳವನ್ನು ಹಾನಿ ಮಾಡಿದ್ದಾರೆ ಎಂದು ಗುಡೆಕೋಟೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು ಸಮೇತ ಇತ್ತ ಕಡೆ ಯಾರು ಬಂದಿಲ್ಲ. ಎಂದು ಚಿರತ ಗುಂಡು ಗ್ರಾಮದ ಮಂಜಣ್ಣ ಅಳಲು ತೋಡಿಕೊಂಡರು.