ಬಳ್ಳಾರಿ : ಕಂಪ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕುರುಗೋಡು ಪಟ್ಟಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಕೆಡಿಪಿ ಸಭೆಗೆ ಮೊದಲ ಬಾರಿಗೆ ಅಗಮಿಸಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರನ್ನು ಶಾಸಕ ಜೆ.ಎನ್. ಗಣೇಶ್ ಅವರು ಕಾರ್ಯಕರ್ತರ ಜೊತೆ ಹಾಜರಿದ್ದು ಕುರುಗೋಡು ಪಟ್ಟಣದ ಸರ್ಕಲ್ ನಿಂದ ದೊಡ್ಡ ಬಸವೇಶ್ವರ ದೇವಸ್ಥಾನ ಕ್ಕೆ ಮೆರವಣಿಗೆ ಮೂಲಕ ಕರೆದ್ಯೂಲಾಯಿತು.
ಗ್ರಾಮದ ಅರಾದ್ಯ ದೈವ ಶ್ರೀ ಬಸವೇಶ್ವರ ದರ್ಶನ ಪಡೆದು ಹೊರ ಬಂದ ಸಚಿವರು ಹಾಗೂ ಶಾಸಕರಿಗೆ ಬೃಹತ್ ಹೂಹಾರ ಹಾಕಿ ಸನ್ಮಾನಿಸಿದರು.
ನಂತರ ಕುರುಗೋಡು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಯೋಜಿಸಲಾಗಿದ್ದ ತಾಲೂಕು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದರು. ಸಸಿಗೆ ನೀರೆರೆಯುವ ಮೂಲಕ ಸಭೆಯನ್ನ ಉಧ್ಘಾಟಿಸಿದರು.
ಈ ಸಭೆಯಲ್ಲಿ ಕಂಪ್ಲಿ ಶಾಸಕ ಜೆ.ಎನ್ ಗಣೇಶ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ರಂಜಿತ್ ಬಂಡಾರು, ಜಿಲ್ಲಾ ಉಪ ವಿಭಾಗಾಧಿಕಾರಿ ಹೇಮಂತ್ ಕುಮಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.