ವಿಜಯನಗರ : ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಗಾಂಧಿಜಿ ಜಯಂತಿ ಪ್ರಯುಕ್ತ ತಾಲೂಕಿನಲ್ಲಿಡೆ ಪಟ್ಟಣದಲ್ಲಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಹಳ್ಳಿಗಳಲ್ಲಿ ಶಾಲಾ ಕಾಲೇಜು ಹಲವಾರು ಸಂಘ ಸಂಸ್ಥೆಗಳು ಯುವಕರು ಹಿರಿಯರು ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಡಾ ಎನ್ ಟಿ ಶ್ರೀನಿವಾಸ್ ಶಾಸಕರ ಜೊತೆಯಲ್ಲಿ ಹಳ್ಳಿಗಳಲ್ಲಿ ಪಟ್ಟಣದಲ್ಲಿ ವಿವಿಧಡೆ ಸ್ವಚ್ಛತಾ ಕಾರ್ಯ ಆರಂಭಿಸಿದರು.
ಶಾಸಕ ಡಾ. ಎನ್ ಟಿ ಶ್ರೀನಿವಾಸ್ ರವರು ಕೂಡ್ಲಿಗಿ ಪಟ್ಟಣದ ಗಾಂಧೀಜಿ ಗಾಂಧೀಜಿ ಚಿತ್ತಾಬಸ್ಮಕ್ಕೆ ಮಾಲಾರ್ಪಣೆ ಮಾಡಿದರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯ ಶುರು ಮಾಡಿದರು
ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರು ಕುರಿತು ಶಾಸಕ ಡಾ. ಎನ್ ಟಿ ಶ್ರೀನಿವಾಸ್ ಮಾತನಾಡಿ ಸ್ವಚ್ಛತ ಅಭಿಯಾನದಂತಹ ಕಾರ್ಯಕ್ರಮಗಳು ಗ್ರಾಮಗಲ್ಲಿ ಪಟ್ಟಣದಲ್ಲಿ ಪ್ರತಿಯೊಬ್ಬರು ಪ್ರೇರಣೆಯಾಗಬೇಕು ಯಾವುದೇ ದೇಶ ಅಭಿವೃದ್ಧಿ ಆಗಬೇಕಾದರೆ ಸ್ವಚ್ಛತಾ ವಿಷಯದಲ್ಲಿ ನಾವು ಪ್ರಥಮವಾಗಿ ಜಾಗೃತರಾಗಬೇಕಾಗಿದೆ.
ಮಹಾತ್ಮ ಗಾಂಧೀಜಿಯವರ ಕನಸಿನಂತೆ ನಮ್ಮ ಮನಸ್ಸನ್ನು ಸ್ವಚ್ಛಗೊಳಿಸುವುದರೊಂದಿಗೆ ಸಮಾಜ ಸ್ವಚ್ಛತೆಗಾಗಿ ಪಣತೊಡಬೇಕು
ಮಹಾತ್ಮ ಗಾಂಧಿ ಅವರ ತತ್ವ – ಸಿದ್ಧಾಂತವೇ ನನ್ನ ಜೀವನ ಎಂದೂ ತಿಳಿಸಿಕೊಟ್ಟರು. ನನ್ನ ಮನೆಯಲ್ಲಿ ಗ್ರಂಥಾಲಯ ಇದೆ. ಮಹಾತ್ಮ ಗಾಂಧಿ ಅವರ ಸತ್ಯಾನ್ವೇಷಣೆ ಆತ್ಮ ಚರಿತ್ರೆ ನನ್ನ ನೆಚ್ಚಿನ ಕೃತಿ. ಮತ್ತೆ ಮತ್ತೆ ಓದುವ ಮೂಲಕ ಗಾಂಧಿ ಅವರ ಚಿಂತನೆಗಳನ್ನು ನಿತ್ಯ ಬದುಕಿನಲ್ಲಿ ರೂಢಿಸಿಕೊಂಡಿದ್ದೇನೆ. ನೀವುಗಳು ಕೂಡ ಗಾಂಧೀಜಿ ಅವರ ತತ್ವ ಸಿದ್ಧಾಂತಗಳನ್ನು ರೂಡಿಸಿಕೊಳ್ಳಿ .ನಿಮ್ಮ ನಡೆ ಸ್ವಚ್ಛತಾ ಕಡೆ ಗಮನ ಇರಲಿ ಎಂದು ತಿಳಿಸಿದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿಗಳಾದ ಜಗದೀಶ್ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿಕುಮಾರ್. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪದ್ಮನಾಭ ಕರ್ಣಂ ತಾಲೂಕಿನ ಎಲ್ಲಾ ಇಲಾಖೆ ವರ್ಗದ ಅಧಿಕಾರಿಗಳು ಸಿಬ್ಬಂದಿ ಮತ್ತು
ತಾಲೂಕಿನ ಅನೇಕ ಹಳ್ಳಿಗಳಲ್ಲಿ ಶಾಸಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಚ್ಛತ ಬಗ್ಗೆ ಜಾಗೃತ ಮೂಡಿಸಿದರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು